ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 35ನೇ ದಿನದ ಮಧ್ಯಾಹ್ನದ ಬಿಸಿಊಟ ವಿತರಣೆ
June 13, 2021
0
ಮಂಜೇಶ್ವರ:- ಬಾಡೂರು ದಿವಂಗತ ಶ್ರೀ ತಿಮ್ಮಪ್ಪ ಪೂಂಜ ಮತ್ತು ಧರ್ಮಪತ್ನಿ ದಿವಂಗತ ಶ್ರೀಮತಿ ಅನುಸೂಯ ಪೂಂಜ ಇವರ ದಿವ್ಯ ಸ್ಮರಣಾರ್ಥ ದುಃಖತಪ್ತ ಮಕ್ಕಳಾದ.. ಶ್ರೀ ಪ್ರಸನ್ನ ಪೂಂಜಾ, ಶ್ರೀ ನವೀನ್ ಪೂಜಾ, ಶ್ರೀ ಸುರೇಶ್ ಪೂಂಜಾ (ಆಸ್ಟ್ರೇಲಿಯಾ) ಮತ್ತು ಶ್ರೀಮತಿ ಆಶಾ ಆರ್ ಶೆಟ್ಟಿ. ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 35 ನೇ ದಿನದ ಮಧ್ಯಾಹ್ನದ ಬಿಸಿಊಟವನ್ನು ನೀಡಲಾಯಿತು. ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ದೀಪಕ್ ರಾಜ್ ರವರಿಗೆ ಸೇವಾರ್ಥಿ ಪರವಾಗಿ ಸೃಷ್ಟಿ ಕಲಾಭೂಮಿ ಬೆಂಗಳೂರು - ಕಾಸರಗೋಡು ಘಟಕದ ಸಂಸ್ಥಾಪಕರಾದ ಶ್ರೀ ಸಂಕಬೈಲ್ ಮಂಜುನಾಥ ಅಡಪ್ಪ ರವರು ವಿತರಿಸುವ ಮೂಲಕ ಉದ್ಗಾಟಿಸಿದರು. ಬಳಿಕ ತಲಪಾಡಿಯಿಂದ ತೊಡಗಿ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ದೀಪಕ್ ರಾಜ್ ಉಪ್ಪಳ, ಸುಧೀನ್ ವರ್ಕಾಡಿ, ಅರ್ಜುನ್ ಭಕ್ತ ಮಂಜೇಶ್ವರ, ಪರಮೇಶ್ ಪಂಪ್ವೆಲ್ ಮೊದಲಾದವರು ಉಪಸ್ಥಿತರಿದ್ದರು.
Tags

