ಭಜನಾ ಸೇವಕರನ್ನು ಗುರುತಿಸಿ ಆಹಾರ ಸಾಮಗ್ರಿ ನೀಡುವುದು ನಿಜವಾದ ದೇವರ ಸೇವೆ : ಚಂದ್ರಹಾಸ್ ಪಂಡಿತ್ ಹೌಸ್
June 22, 2021
0
ತೊಕ್ಕೊಟ್ಟು : ಭಜನಾ ಸೇವಕರನ್ನು ಗುರುತಿಸಿ ಆಹಾರ ಸಾಮಗ್ರಿ ನೀಡುವುದು ನಿಜವಾದ ದೇವರ ಸೇವೆ ಎಂದು ಚಂದ್ರಹಾಸ್ ಪಂಡಿತ್ ಹೌಸ್ ನುಡಿದರು. ತೊಕ್ಕೊಟ್ಟಿನ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಹಿರಿಯ ಭಜನಾ ಸೇವಕರಿಗೆ ಆಹಾರ ಕಿಟ್ ನೀಡಿ ತಿಳಿಸಿದರು. ಲಾಕ್ ಡೌನ್ನಲ್ಲಿ ಕಳೆದ 52 ದಿನಗಳಿಂದ ಸೇವಾ ಕಾರ್ಯದಲ್ಲಿ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ತೊಡಗಿದೆ. ಈ ಸಂದರ್ಭದಲ್ಲಿ ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿ (ರಿ) ಇದರ ಸ್ಥಾಪಕ, ರಾಜ್ ಕ್ಯಾಟರರ್ಸ್ನ ಮಾಲಕ ರಾಜೇಶ್ ಕಾಪಿಕಾಡ್ ಹಾಗೆಯೇ ಸಾಯಿ ಪರಿವಾರ್ನ ಪ್ರವೀಣ್ ಎಸ್ ಕುಂಪಲ, ಪುರುಷೋತ್ತಮ ಕಲ್ಲಾಪು, ಸತೀಶ್ ಭಟ್ನಗರ, ದೀಕ್ಷಿತ್ ಪೂಜಾರಿ, ಅರುಣ್ ದಬ್ಬೇಲಿ, ಸತೀಶ್ ಚೆಂಬುಗುಡ್ಡೆ, ಸಂಪತ್ ಧರ್ಮನಗರ, ಉದಯ್ ಧರ್ಮನಗರ, ಹಿತೇಶ್ ಉಳ್ಳಾಲಬೈಲ್, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಉದಯ, ಶೈಲೇಶ್ ಸೇವಂತಿಗುಡ್ಡೆ, ರಜನೀಶ್ ನಾಯಕ್ ಶವಿತ್ ಉಚ್ಚಿಲ್, ಸಂತೋಷ್ ಅಂಬ್ಲಮೊಗರು ಉಪಸ್ಥಿತರಿದ್ದರು.
Tags
