ಉದ್ಯೋಗದಲ್ಲಿರುವ ಕೊಡಿಗೈ ದಾನಿ, ದುಬೈ ಸ್ಪ್ರೇ ಟೆಕ್ನ ಮೇನೆಜಿಂಗ್ ಡೈರೆಕ್ಟರ್ ರೂ, ಸ್ಪ್ರೆ ಟೆಕ್ ಕೊಟಿಂಗ್ಸ್ನ ಮಾಲಕರೂ, ಸಮಾಜ ಸೇವಕರೂ ಆಗಿರುವ, ಯುಎಇ ತುಳು ಕನ್ನಡಿಗರ ಮಾಹ ಪೋಷಕರಾದ ಶ್ರೀ ರಾಮಚಂದ್ರ ಹೆಗ್ಡೆ ದುಬೈ ಮತ್ತು ಪ್ರಸ್ತುತ ಮಂಜೇಶ್ವರ ಪೊಲೀಸ್ ಸ್ಟೇಶನ್ ಬಳಿ ಇರುವ ಜಿ.ಡಬ್ಲ್ಯೂ. ಎಲ್.ಪಿ. ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಶ್ರೀ ಸುಖೇಶ್ ಮಾಸ್ಟರ್ ಹಾಗೂ ಮಂಗಳೂರು ಗ್ರಾಮಾಂತರ ಮಹಿಳೆಯರ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಶ್ರೀಮತಿ ಕಲ್ಪನಾರವರು
ಇಂದು ವೈವಾಹಿಕ ಜೀವನದ ಏಳನೇ ಸಂವತ್ಸರಕ್ಕೆ ಕಾಲಿರಿಸಿದ ಅಂಗವಾಗಿ ಇವರ ಸೇವಾರ್ಥವಾಗಿ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ, ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ಲಾಕ್ ಡೌನ್ ನಿಮಿತ್ತ ನೀಡುತ್ತಿರುವ "ಹಸಿವು ಅರಸಿದ ಹಸ್ತಗಳು" 42 ನೇ ದಿನದ ಕೊನೆಯ ದಿನದ ಮಧ್ಯಾಹ್ನದ ಬಿಸಿ ಊಟವನ್ನ ನಿನ್ನೆ ಅಪರಾಹ್ನ ನೀಡಲಾಯಿತು. ತಲಪಾಡಿ ಕೆಳಗಿನ ಚೆಕ್ಕಿಂಗ್ ಸೆಂಟರ್ ಹಾಗೂ ಮೇಲಿನ ಚೆಕ್ಕಿಂಗ್ ಸೆಂಟರ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಂಜೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳಾದ ದಿವೇಶ್ ರವರಿಗೆ ಸೇವಾರ್ಥಿ ಪರವಾಗಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎ.ಕೆ.ಎಂ ಅಶ್ರಫ್ರವರು ವಿತರಿಸುವ ಮೂಲಕ ಉದ್ಗಾಟಿಸಿದರು. ಬಳಿಕ ಮಾತನಾಡಿದ ಶಾಸಕರು ನಾನು ಮಂಜೇಶ್ವರದ ಶಾಸಕನಾಗಿ ಅಧಿಕಾರ ಪಡೆದಂದಿನಿಂದ ಇಂದಿನ ವರೆಗೆ ಸ್ಕಂದ ಹೆಲ್ಪ್ ಡೆಸ್ಕ್ ಮಂಜೇಶ್ವರ ಹಾಗೂ ವಜ್ರಿ ಟೆಕ್ ಪ್ರೈವೇಟ್ ಲಿಮಿಟೆಡ್ ಮಂಗಳೂರು ನೀಡುತ್ತಿರುವ "ಹಸಿವು ಹರಸಿದ ಹಸ್ತಗಳು" ಮಧ್ಯಾಹ್ನದ ಬಿಸಿ ಊಟ ವಿತರಣೆಯ ಎಲ್ಲಾ ದಿನದ ಕಾರ್ಯವನ್ನ ಸಾಮಾಜಿಕ ಜಾಲತಾಣದಿಂದಲೂ ಹಾಗೂ ಪೊಲೀಸ್ ಇಲಾಖೆಯವರಿಂದಲೂ ಕೇಳಿ ತಿಳಿದುಕೊಂಡಿರುವೆ. ನಿಮ್ಮ ಈ ಕಾರ್ಯಕ್ಕೆ ನಮ್ಮ ಮಂಜೇಶ್ವರ ಜನತೆಯ ಬೆಂಬಲ ಇದೆ. ಮುಂದಿನ ನಿಮ್ಮ ಎಲ್ಲಾ ಕಾರ್ಯಕ್ಕೆ ನನ್ನಿಂದಾದ ಸಂಪೂರ್ಣ ಬೆಂಬಲವನ್ನ ನೀಡುತ್ತೇನೆ. ನಿಮ್ಮ ಇದುವರೆಗಿನ ಕಾರ್ಯಕ್ಕೆ ಸರ್ವಶಕ್ತನಾದ ಭಗವಂತನು ಅನುಗ್ರಹಿಸಲಿ, ಅದೇ ರೀತಿ ಅನ್ನದಾನ ನೀಡಲು ನೆರವಿನ ಹಸ್ತವ ನೀಡಿದ ಎಲ್ಲಾ ದಾನಿಗಳಿಗೂ ಭಗವಂತನು ಅನುಗ್ರಹಿಸಲಿ ಎಂದು ತಂಡದ ಕಾರ್ಯಕ್ಕೆ ಶುಭ ಹಾರೈಸಿದರು. ತಲಪಾಡಿಯಿಂದ ತೊಡಗಿಆ ಬಂದ್ಯೋಡ್ ತನಕ ಕರ್ತವ್ಯ ನಿರತ ಪೊಲೀಸ್ ಇಲಾಖಾ ಅಧಿಕಾರಿಗಳಿಗೆ, ಸಿಬ್ಬಂದಿ ವರ್ಗದವರಿಗೆ, ಆರೋಗ್ಯಾಧಿಕಾರಿಗಳಿಗೆ ಹಾಗೂ ವಿವಿಧ ರಾಜ್ಯಗಳಿಂದ ಕೇರಳ - ಕರ್ನಾಟಕ ಪ್ರವೇಶಿಸುವ ನಡುವೆ ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಿಲುಕಿರಿವ ಲಾರಿ ಚಾಲಕ ಕ್ಲಿನರ್ ಗಳಿಗೆ, ಅಸೌಖ್ಯ ಪೀಡಿತ ವೃದ್ಧರಿಗೆ, ಭಿಕ್ಷುಕರಿಗೆ ನೀಡಲಾಯಿತು. ಈ ಬಿಸಿ ಊಟ ವಿತರಣೆಯಲ್ಲಿ ಸ್ಕಂದ ಹೆಲ್ಪ್ ಡೆಸ್ಕ್ ನ ಪಧಾಧಿಕಾರಿಗಳಾದ:- ಶ್ರೀ ಲಕ್ಷ್ಮಣ್ ಭಕ್ತ ಮಂಜೇಶ್ವರ, ರತನ್ ಕುಮಾರ್ ಹೊಸಂಗಡಿ, ಸುಖೇಶ್ ಬೆಜ್ಜ, ಸುಧೀನ್ ವರ್ಕಾಡಿ, ಕೀರ್ತನ್ ರಾಜ್ ಬೆಜ್ಜ, ಮೊದಲಾದವರು ಉಪಸ್ಥಿತರಿದ್ದರು.
