ಮಂಜೇಶ್ವರ : ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯೆ ಕೆ.ಕಮಲಾಕ್ಷಿ ಮೊಬೈಲ್ ವಿತರಿಸುವ ಮೂಲಕ ನೆರವಾದರು. ಮೀಂಜ ಪಂಚಾಯತಿನ ವಿದ್ಯಾರ್ಥಿಗಳಾದ ಗೌತಮ್.ಕಿರಣ್ ಹಾಗೂ ಹಿಮಾ ಎಂಬಿವರು ಮೊಬೈಲ್ ಇಲ್ಲದೆ ಆನ್ ಲೈನ್ ಕ್ಲಾಸ್ ಗಾಗಿ ಸಂಕಷ್ಟ ಪಡುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದ ಸಮಾಜ ಸೇವಕ ಚಂದ್ರಶೇಖರ ಮೀಯಪದವ್ ರವರು ಜಿ.ಪಂ.ಸದಸ್ಯೆಯವರಲ್ಲಿ ಭಿನ್ನವಿಸಿದ್ಜರು. ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ವಿದ್ಯಾರ್ಥಿಗಳ.ಸಂಕಷ್ಟವನ್ನರಿತು ಜಿ.ಪಂ.ಸದಸ್ಯೆ ಕಮಲಾಕ್ಷಿಯವರು ದಾನಿಗಳ ನೆರವಿನಿಂದ ಮೊಬೈಲ್ ಸಂಗ್ರಹಿಸಿ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಚಂದ್ರಶೇಖರ ಮೀಯಪದವು ಉಪಸ್ಥಿತರಿದ್ದರು.
ವರದಿ : ರತನ್ ಕುಮಾರ್ ಹೊಸಂಗಡಿ
