ತೊಕ್ಕೊಟ್ಟು : ಅನಾದಿಕಾಲದಿಂದಲೂ ತುಳುನಾಡಿನ ದೈವಾರಾದನೆಯಲ್ಲಿ ಮೇಲ್ಪಂಕ್ತಿಯಲ್ಲಿರುವ ಕೇಪುಲ ಹೂವಿನ ಗಿಡಗಳನ್ನು ದೈವಸ್ಥಾನಗಳಲ್ಲಿ ನೆಡುವ ಕಾರ್ಯಕ್ಕೆ ಉಳ್ಳಾಲ ಬಂಡಿಕೊಟ್ಯದ ಮಲರಾಯ ದೈವಸ್ಥಾನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್ಸಾರ್ ರವರು ಕಾಡ ಕೇಪುಲ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ, ಸಾಯಿ ಪರಿವಾರ್ನ ಮಾರ್ಗದರ್ಶಕರಾದ ಚಂದ್ರಹಾಸ್ ಪಂಡಿತ್ ಹೌಸ್ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪರಿಸರವಾದಿ ಮಾಧವ ಉಳ್ಳಾಲ್, ಓವರ್ ಬ್ರಿಡ್ಜ್ ಕೊರಗಜ್ಜ ಸೇವಾ ಸಮಿತಿಯ ಸ್ಥಾಪಕ ರಾಜ್ ಕಾಪಿಕಾಡ್, ಬಿಜೆಪಿ ಮಂಡಲ ಉಪಾದ್ಯಕ್ಷ ಯಶವಂತ ಅಮೀನ್, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಬಂಡಿಕೊಟ್ಯ ಮಲರಾದ ದೈವಸ್ಥಾನದ, ಮುಂಡ ಯಾನೆ ಲತೀಶ್ ಪೂಜಾರಿ, ಗೋಪಾಲ ಯು.ಕೆ, ಉಳ್ಳಾಲ, ದೇವಕಿ ಆರ್ ಉಳ್ಳಾಲ, ಉದಯ ಆರ್.ಕೆ, ಗಣೇಶ್ ಪೂಜಾರಿ, ಹರ್ಷರಾಜ್ ಕುಂಪಲ, ಮೋಹಿತ್ ಉಳ್ಳಾಲ, ಸುನಿತ್ ಬಂಡಿಕೊಟ್ಯ, ಸಾಗರ್ ಬಂಡಿಕೊಟ್ಯ, ಪ್ರಶಾಂತ್ ಸುವರ್ಣ, ಉಳ್ಳಾಲ ಕೊರಗಜ್ಜ ಸೇವಾ ಸಮಿತಿಯ ಲತೀಶ್ ಕೊಟ್ಟಾರ, ಶಾನ್ ಉಳ್ಳಾಲ, ಸಾಯಿ ಪರಿವಾರ್ ಟ್ರಸ್ಟ್ನ ಪುರುಷೋತ್ತಮ ಕಲ್ಲಾಪು, ಗಣೇಶ್ ಅಂಚನ್, ದೀಕ್ಷಿತ್ ಪೂಜಾರಿ, ಗಣೇಶ್ ಪಂಡಿತ್ ಮುಳಿಹಿತ್ಲು, ಸಂಪತ್ ಧರ್ಮನಗರ, ಹಿತೇಶ್ ಉಳ್ಳಾಲಬೈಲ್, ಸೂರ್ಯ ಕುಂಪಲ, ಸಂಪತ್ ಪಿಲಾರ್, ಕೌಶಿಕ್ ಸೇವಂತಿಗುಡ್ಡೆ, ಶೈಲೇಶ್ ಸೇವಂತಿಗುಡ್ಡೆ, ಶವಿತ್ ಉಚ್ಚಿಲ್, ಸಂತೋಷ್ ಅಂಬ್ಲಮೊಗರು, ಕುಶಾಲ್ ರಾಜ್ ಉಪಸ್ಥಿತರಿದ್ದರು. ಪ್ರವೀಣ್ ಎಸ್ ಕುಂಪಲ ನಿರೂಪಿಸಿದರು.
