ಸಿಪಿಐ ನೇತಾರ ಸಿ.ಕೆ ಚಿಪ್ಪಾರು ರವರ ಹತ್ತನೇ ಚರಮವಾರ್ಷಿಕ ಕಾರ್ಯಕ್ರಮ | ಕಿಟ್ ವಿತರಣೆ
July 14, 2021
0
ಮಂಜೇಶ್ವರ:- ಸಿಪಿಐ ನೇತಾರ ಸಿ.ಕೆ ಚಿಪ್ಪಾರು ರವರ ಹತ್ತನೇ ಚರಮವಾರ್ಷಿಕ ಕಾರ್ಯಕ್ರಮ ಇಂದು ಬೆಳಗ್ಗೆ ಅವರ ಸ್ವ - ಗೃಹದ ಸ್ಮೃತಿ ಭವನದಲ್ಲಿ ನಡೆಯಿತು. ಕಾರ್ಯಕ್ರಮದಂಗವಾಗಿ ಸ್ಮೃತಿ ಮಂಟಪದಲ್ಲಿ ಪುಷ್ಪಾರ್ಚನೆ ಕಾರ್ಯಕ್ರಮ ಹಾಗೂ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸಭೆ ಜರಗಿತು. ಸಿಪಿಐ ಜಿಲ್ಲಾ ಕಾರ್ಯದರ್ಶಿ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್ ರವರು ಪುಷ್ಪಾರ್ಚನೆಗೈದು, ಉದ್ಘಾಟನಾ ಭಾಷಣ ಮಾಡಿದರು. ನೇತಾರರಾದ ಅಚ್ಯುತ ರಾವ್ ಧ್ವಜಾರೋಹಣ ನೆರವೇರಿಸಿದರು. ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ಅಧ್ಯಕ್ಷತೆ ವಹಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್, ಸಿಪಿಐ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, ಸಿ.ಕೆ ಚಿಪ್ಪಾರ್ ರವರ ಧರ್ಮಪತ್ನಿ ಶ್ರೀಮತಿ ಮೀನಾಕ್ಷಿ ಸಿ.ಕೆ ಚಿಪ್ಪಾರು, ಪುತ್ರರಾದ ಅಶೋಕ್ ಎಂ.ಸಿ ಲಾಲ್ ಭಾಗ್, ಅಜಿತ್ ಎಂ.ಸಿ ಲಾಲ್ ಭಾಗ್, ಅಶ್ವಥ್ ಪೂಜಾರಿ ಲಾಲ್ ಬಾಗ್ ಹಾಗೂ ನೇತಾರರಾದ ಲಾರೆನ್ಸ್ ಡಿಸೋಜ, ರಿಚರ್ಡ್ ಚಿಪ್ಪಾರು, ಪೈವಳಿಕೆ ಪಂಚಾಯತು ಸದಸ್ಯೆ ಶ್ರೀಮತಿ ಸುನೀತಾ ವಲ್ಟಿ, ಚನಿಯ ಕೊಮ್ಮಂಗಳ, ಬಿ.ಎ ಸಮದ್ ಮೊದಲಾದವರು ಉಪಸ್ಥಿತರಿದ್ದರು. ಕೇಶವ ಬಾಯಿ ಕಟ್ಟೆ ಸ್ವಾಗತಿಸಿದರು. ಸಿ.ಕೆ ಚಿಪ್ಪಾರ್ ರ ಸ್ಮರಣಾರ್ಥ ಕಿಟ್ ವಿತರಣೆ ಮಾಡಲಾಯಿತು.
Tags
