ಕಡಬ ತಾಲೂಕು ಕುಂತೂರು, ಪೆರಾಬೆ ಪಂಚಾಯತ್ ವ್ಯಾಪ್ತಿಯ ನೇರೊಳ್ಪಲ್ಕೆ ಎಂಬಲ್ಲಿ ಅರುಣ್ ಕುಮಾರ್ ಮತ್ತು ಕಮಲ ದಂಪತಿಗಳ ಬಡ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಸೇವಾ ಭಾರತಿ, ವಿಶ್ವ ಹಿಂದೂ ಪರಿಷತ್ , ಭಜರಂಗದಳ ನೇತೃತ್ವದಲ್ಲಿ ದಾನಿಗಳ ನೆರವು ಮತ್ತು ಹಲವಾರು ಕಾರ್ಯಕರ್ತರ ಪರಿಶ್ರಮದಿಂದ ನಿರ್ಮಾಣಗೊಂಡ ಸೇವಾ ನಿಲಯದ ಗೃಹ ಪ್ರವೇಶವು ಜರುಗಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಪುತ್ತೂರು ಮಾನ್ಯ ಜಿಲ್ಲಾ ಸಂಘಚಾಲಕ್ ಶ್ರೀ ಕಾಂತಪ್ಪ ಶೆಟ್ಟಿ ಕೊಡ್ಮನ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಸ್ಥಳೀಯ ಜನಪ್ರತಿನಿಧಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಪರಿವಾರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕರ್ತರ ಪರಿಶ್ರಮದಿಂದ ನಿರ್ಮಾಣಗೊಂಡ ಮನೆ ನಿರ್ಮಾಣದ ಉತ್ತಮ ಕಾರ್ಯವನ್ನು ಶ್ಲಾಘಿಸಲಾಯಿತು.
ದಾನಿಗಳ ನೆರವು ಮತ್ತು ಹಲವಾರು ಕಾರ್ಯಕರ್ತರ ಪರಿಶ್ರಮದಿಂದ ನಿರ್ಮಾಣಗೊಂಡ ಸೇವಾ ನಿಲಯದ ಗೃಹ ಪ್ರವೇಶ
July 12, 2021
0
Tags

