ಮಂಜೇಶ್ವರ : ದೇಶಿಯ ಅಧ್ಯಾಪಕ ಪರಿಷತ್ (ಎನ್.ಟಿ.ಯು.)ಮಂಜೇಶ್ವರ ಉಪ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ಗುರುಪೂರ್ಣಿಮೆಯ ಪ್ರಯುಕ್ತವಾಗಿ ಗುರುವಂದನಾ ಕಾರ್ಯಕ್ರಮ ಜರಗಿತು.
ಸನಾತನಾ ಹಿಂದೂ ಪರಂಪರೆಯಲ್ಲಿ ಅನಾದಿಕಾಲದಿಂದಲೂ ಆಷಾಢ ಹುಣ್ಣಿಮೆ ದಿನದಂದು ಬಹಳ ಶ್ರದ್ಧಾ ಭಕ್ತಿಯೊಂದಿಗೆ
ಆಚರಿಸಲ್ಪಡುತ್ತಿರುವ ಗುರುವಂದನಾ ಕಾರ್ಯಕ್ರಮವನ್ನು ಮಂಜೇಶ್ವರ ಉಪ ಜಿಲ್ಲಾ ವ್ಯಾಪ್ತಿಯ ಪೈವಳಿಕೆ, ಮಂಗಲ್ಪಾಡಿ, ಮಂಜೇಶ್ವರ, ಮಿಂಜ, ವರ್ಕಾಡಿ ಪಂಚಾಯತ್ ಮಟ್ಟದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಮಾರ್ಗದರ್ಶಕರಾಗಿ
ಸಮಾಜ ಸೇವೆಯೊಂದಿಗೆ ಪ್ರೇರಣಾದಾಯಿ ಜೀವನ ನಡೆಸುತ್ತಿರುವ ದೈಗೋಳಿ ಸಾಯಿ ನಿಕೇತನ ಸೇವಾಶ್ರಮದ ಡಾ. ಉದಯಕುಮಾರ್ ಭಟ್(ವರ್ಕಾಡಿ) ಬಾಯಾರು ಶ್ರೀ ಪಂಚಲಿಂಗೇಶ್ವರ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಎನ್. ಶ್ಯಾಮ್ ಭಟ್
(ಪೈವಳಿಕೆ) ಕುಬಣೂರು ಶ್ರೀರಾಮ ಎಯುಪಿ ಶಾಲೆಯ ನಿವೃತ್ತ ಅಧ್ಯಾಪಕರಾದ ಶ್ರೀ ಎಮ್. ವಿಶ್ವನಾಥ ಆಳ್ವ (ಮಂಗಲ್ಪಾಡಿ) ಮೀಯಪದವು ಶಾಲಾ ಸಂಚಾಲಕಿ ಶ್ರೀಮತಿ ಪ್ರೇಮ ಕೆ. ಭಟ್(ಮೀಂಜ) ಉದ್ಯಾವರ ಭಗವತಿ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಕುಸುಮಾ ಟೀಚರ್(ಮಂಜೇಶ್ವರ) ಅವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಎನ್ ಟಿಯು ರಾಜ್ಯ ಉಪಾಧ್ಯಕ್ಷರಾದ ವೆಂಕಪ್ಪ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ಅರವಿಂದಾಕ್ಷ ಭಂಡಾರಿ, ಪದಾಧಿಕಾರಿಗಳಾದ ಶ್ರೀಮತಿ ಚಂದ್ರಿಕಾ ಟೀಚರ್, ರಘುವೀರ್,ಈಶ್ವರ್ ಕಿದೂರು, ಜಯರಾಮ, ದೇವಿಪ್ರಸಾದ್, ಶ್ರೀಧರ ಭಟ್, ಸೀತಾರಾಮ, ಮೀರಾ ಆಳ್ವ, ನಾರಾಯಣ್ ರಾಜ್, ಬಾಲಕೃಷ್ಣ, ಲಕ್ಷ್ಮೀಶ, ಹರಿದಾಸ್. ಹರಿಣಾಕ್ಷಿ ಟೀಚರ್, ವೀಣಾ ಟೀಚರ್ ಮತ್ತಿತರರು ಉಪಸ್ಥಿತರಿದ್ದರು.
