ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ್ ಕಾಮತ್ ದೀಪ ಬೆಳಗಿಸುವ ಮೂಲಕ ಕೋವಿಡ್ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಸದಸ್ಯರಾದ ಉದ್ಯಮಿ ಪ್ರಸಾದ್ ರಾಜ್ ಕಾಂಚನ್, ಸ್ಥಳೀಯ ಜನಪ್ರತಿನಿಧಿ ಜಗದೀಶ್ ಶೆಟ್ಟಿ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಹರೀಶ್ ಕುಮಾರ್, ಕಸಬಾ ಬೆಂಗ್ರೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಲಾಂಗೊ, ಗ್ರಾಮದ ಅಧ್ಯಕ್ಷರಾದ ರಾಜ ಶೇಖರ ಕರ್ಕೇರ, ಉಪಾಧ್ಯಕ್ಷರಾದ ದೇವದಾಸ್ ಬೋಳೂರು, ಗ್ರಾಮದ ಗುರಿಕಾರರಾದ ದೇವನಂದ ಗುರಿಕಾರ, ಜಯರಾಜ್ ಗುರಿಕಾರ, ತಾರನಾಥ ಗುರಿಕಾರ, ಡಾ. ಸೋಮಶೇಖರ್, ಕಾರ್ಯದರ್ಶಿ ಸುಭಾಸ್ ಕುಂದರ್, ಜತೆ ಕಾರ್ಯದರ್ಶಿ ಶಶಿಕುಮಾರ್, ಕೋಶಾಧಿಕಾರಿ ರಂಜನ್ ಕಾಂಚನ್, ಮಹಿಳಾ ಸಭಾದ ಅಧ್ಯಕ್ಷೆ ಸವಿತಾ ರಘು ಉಪಸ್ಥಿತರಿದ್ದರು. ಆರ್ಪಿ ಬೋಳೂರು, ಯಶ್ವಂತ್ ಮೆಂಡನ್ ನಿರೂಪಿಸಿದರು.
ವೀಡಿಯೋ ವರದಿಗೆ ಈ ಕೆಳಗಿನ ⬇️ ಲಿಂಕ್ ಕ್ಲಿಕ್ ಮಾಡಿ
ಛಾಯಾಗ್ರಹಣ ಮತ್ತು ವರದಿ : ಪುಷ್ಪರಾಜ್ ರಾವ್
