ಮಂಜೇಶ್ವರ:- ರಾಜ್ಯದ ಖಾಸಗಿ ಬಸ್ ವಲಯವನ್ನು ಸಂರಕ್ಷಿಸಬೇಕು ಎಂದು ಒತ್ತಾಯಿಸಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಓಪರೇಟರ್ಸ್ ಫೆಡರೇಷನ್ ರಾಜ್ಯ ವ್ಯಾಪಕವಾಗಿ ಇಂದು ಉಪವಾಸ ಸತ್ಯಾಗ್ರಹ ನಡೆಯುತ್ತಿದೆ.
ಸಾರ್ವಜನಿಕ ಸಂಚಾರ ಸಂರಕ್ಷಣೆಗೆ ರಾಜ್ಯ ಸರಕಾರ ಪ್ಯಾಕೇಜ್ ಘೋಷಿಸಬೇಕು, ಕೋವಿಡ್ ಸಮಯದ ರಸ್ತೆ ತೆರಿಗೆ ರದ್ದು ಪಡಿಸಬೇಕು, ಸಾರ್ವಜನಿಕ ಸಂಚಾರದ ಡೀಸೆಲ್ ಗೆ ಸಬ್ಸಿಡಿ ನೀಡಬೇಕು. ಎಂಬಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ನಡೆಯುತ್ತಿದೆ. ಜಿಲ್ಲೆಯ ಕಾಸರಗೋಡು, ಮಂಜೇಶ್ವರದ ಹೊಸಂಗಡಿ, ಚೆರ್ವತ್ತೂರು ಎಂಬಿಡೆಗಳಲ್ಲಿ ಸತ್ಯಾಗ್ರಹ ನಡೆಯುತ್ತಿದೆ.
ಹೊಸಂಗಡಿಯಲ್ಲಿ ನಡೆದ ಸತ್ಯಾಗ್ರಹವನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಕಮಲಾಕ್ಷಿ ವಿನೋದ್ ಪಾವೂರು ಉದ್ಗಾಟಿಸಿದರು. ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಅಧ್ಯಕ್ಷ ತಿಮ್ಮಣ್ಣ ಭಟ್ ಅರಂತಾಡಿ ಅಧ್ಯಕ್ಷತೆ ವಹಿಸಿದ್ದರು. ಬಸ್ ಮಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುಬ್ಬಣ್ಣ ಆಳ್ವ ಮೀಯಪದವು, ಮಂಜೇಶ್ವರ ತಾಲೂಕು ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಉದ್ಯಾವರ, ಜನಪ್ರತಿನಿಧಿಗಳಾದ ಕೆ.ಆರ್ ಜಯಾನಂದ, ಬಿ.ಎಂ ಆದರ್ಶ್, ಎಸ್. ಹಮೀದ್, ಚಂದ್ರಹಾಸ ಪೆಲಪ್ಪಾಡಿ, ಮುಸ್ತಫಾ ಕಡಂಬಾರ್, ಆರಿಫ್, ಖಲೀಲ್, ಬಿ.ಎಂ ಮುಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
