ವರದಿ ಮತ್ತು ಚಿತ್ರ : ರತನ್ ಕುಮಾರ್ ಹೊಸಂಗಡಿ
ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ದೇವರ ವಿಗ್ರಹ ರಚನೆ ಮುಹೂರ್ತ
July 27, 2021
0
ಮಂಜೇಶ್ವರ:- ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ಸೆಪ್ಟೆಂಬರ್ 10 ರಂದು ಶುಕ್ರವಾರ ಜರಗಲಿರುವ 41ನೇ ವರ್ಷದ ಮಂಜೇಶ್ವರ ಶ್ರೀ ಗಣೇಶೋತ್ಸವದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ ದೇವರ ವಿಗ್ರಹ ರಚನೆ ಮುಹೂರ್ತ ಇಂದು ಬೆಳಗ್ಗೆ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆಯಿತು. ಕ್ಷೇತ್ರದ ಪ್ರಧಾನ ಅರ್ಚಕ ಪುರೋಹಿತ ತಿರುಮಲೇಶ ಆಚಾರ್ಯ ಹೊಸಂಗಡಿ ಪೂಜಾ ವಿಧಿ ನೆರವೇರಿಸಿದರು. ವಿಗ್ರಹ ರಚನೆಗಾರ ಮಹೇಶ ಆಚಾರ್ಯ ಬಾಯಾರು ವಿಗ್ರಹ ರಚನೆಗೆ ನಾಂದಿ ಹಾಡಿದರು. ಈ ವೇಳೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ, ಪ್ರಧಾನ ಕಾರ್ಯದರ್ಶಿ ಹೊಸಮನೆ ಚಿನ್ಮಯಾನಂದ ಆಚಾರ್ಯ ಕಾಳಿಕಾಂಬ, ಕೋಶಾಧಿಕಾರಿ ಕೃಷ್ಣಪ್ಪ ಪೂಜಾರಿ ಬಡಾಜೆ, ವಿಗ್ರಹ ಸೇವಾ ಕರ್ತೃ ಅರವಿಂದಾಕ್ಷ ತೂಮಿನಾಡ್ ದಂಪತಿಗಳು ಮತ್ತು ಮಕ್ಕಳು ಹಾಗೂ ಸಮಿತಿಯ ಪಧಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸೆಪ್ಟೆಂಬರ್ 10 ರಂದು ಶ್ರೀ ಗಣೇಶೋತ್ಸವ ನಡೆಯಲಿದ್ದು, ಕೋವಿಡ್ ನ ನಿಯಮಗಳನ್ನು ಪಾಲಿಸಿಕೊಂಡು ನಡೆಯುವ ಕಾರ್ಯಕ್ರಮವು ಅಂದು ಸಂಜೆ 5.30 ಕ್ಕೆ ಕಣ್ವತೀರ್ಥದ ಶ್ರೀ ರಾಮ ಸಮುದ್ರದಲ್ಲಿ ವಿಗ್ರಹ ವಿಸರ್ಜನೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
Tags
