ಮಂಗಳೂರು : ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಬಡವು ಯೋಜನೆಯ 20ನೇ ಸೇವೆ ಮತ್ತು ಒಂದು ವಿಶೇಷ ಸೇವೆಯು ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು. 20ನೇ ಸೇವೆಯು ಮೀನಾಕ್ಷಿ ಮತ್ತು ಸುರೇಶ್ ಕುಮಾರ್ ರವರ ಮನವಿ ಮೇರೆಗೆ ಬಂಟ್ವಾಳದ ಭಂಡಾರಿಬೆಟ್ಟು ಎಂಬಲ್ಲಿನ ಸುಬ್ಬಯ್ಯ ಮತ್ತು ಕುಟುಂಬಕ್ಕೆ ಮತ್ತು ವಿಶೇಷ ಸೇವೆಯು ಮಂಗಳೂರು ಅಶೋಕ ನಗರ ಸಮೀಪದ ಹೊಯ್ಗೆಬೈಲಿನ ಹಿರಿಯ ಕಲಾವಿದರಾದ ಶ್ರೀ ಶೇಖರ ಶೆಟ್ಟಿಯವರಿಗೆ ಮತ್ತು ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಚಂದ್ರಾವತಿ ವಿಶ್ವನಾಥ್, ಗಣೇಶ್ ಕುಲಾಲ್, ರಾಜಕೇಸರಿ ಸಂಸ್ಥೆಯ ಜಿಲ್ಲಾಧ್ಯಕ್ಷರು ಅಶೋಕ್ ಎಸ್ ಪೂಜಾರಿ ಮಾಲೆಮಾರ್, ಪ್ರಶಾಂತ್ ಆಚಾರ್ಯ ಕಾವೂರು, ಸಂಸ್ಥೆಯ ರಾಜ್ಯ ಮುಖ್ಯ ಸಲಹೆಗಾರರು ಸುರೇಶ್ ಕುಲಾಲ್, ಸಂಸ್ಥಾಪಕ ರಾಜ್ಯಾಧ್ಯಕ್ಷರು ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ರಾಜ್ಯ ಉಪಾಧ್ಯಕ್ಷರು ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ರಾಜ್ಯ ಜೊತೆ ಕಾರ್ಯದರ್ಶಿ ವಿಕೇಶ್ ಕುಲಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೂಜಾರಿ, ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಸಚಿನ್ ಮಣೆಲ್ ಬೈಲ್, ಸಂಸ್ಥೆಯ ಕಲಾಚಾವಡಿ ಘಟಕದ ಗೌರವ ಸಲಹೆಗಾರರು ರಾಜೇಶ್ ಸ್ಕೈಲಾರ್ಕ್ ಮತ್ತು ಮೋಹನ್ ಬೋಳಾರ್, ಸದಸ್ಯರಾದ ಮಹಾಬಲ ಕುಲಾಲ್, ಪ್ರದೀಪ್ ಕಾಶಿಪಟ್ಣ, ನರೇಂದ್ರ ಉರ್ವ, ಪ್ರಜ್ವಲ್ ಬಲ್ಯಾಯ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸಚಿನ್ ಮಣೇಲ್ ಬೈಲ್(ವೇಣೂರು)
