ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಹೊಸಬೆಟ್ಟುವಿನಲ್ಲಿರುವ ಪ್ರಧಾನ ಕಛೇರಿಯಲ್ಲಿ ಇಂದು ಬೆಳಗ್ಗೆ ಓಣಂ ಪೂಕಳಂ ರಚಿಸಲಾಯಿತು. ಬ್ಯಾಂಕಿನ ಅಧ್ಯಕ್ಷರಾದ ಬಿ ವಿ ರಾಜನ್, ಬ್ಯಾಂಕಿನ ಕಾರ್ಯದರ್ಶಿ ರಾಜನ್ ನಾಯರ್, ಬ್ಯಾಂಕಿನ ನಿರ್ದೇಶಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ನ ಹೊಸಂಗಡಿ ಶಾಖೆಯಲ್ಲಿ ಓಣಂ ಹಬ್ಬದ ಪ್ರಯುಕ್ತ ಪೂಕಳಂ ರಚಿಸಲಾಯಿತು. ಈ ವೇಳೆ ಬ್ಯಾಂಕಿನ ಮೆನೇಜರ್ ಮನೋಹರ ಮಂಜೇಶ್ವರ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬ್ಯಾಂಕಿನ ನಿರ್ದೇಶಕರಾದ ರಾಮಚಂದ್ರ ಬಡಾಜೆ ದೀಪ ಬೆಳಗಿಸಿದರು.
ವರದಿ : ರತನ್ ಕುಮಾರ್ ಹೊಸಂಗಡಿ

