ಮಂಜೇಶ್ವರ:- ಮಾಜಿ ಪ್ರಧಾನಿ, ಯುವಕರ ಕಣ್ಮಣಿ ಭಯೋತ್ಪಾದಕರಿಂದ ಸಣ್ಣ ವಯಸ್ಸಿನಲ್ಲಿ ಪ್ರಾಣಕಳೆದುಕೊಂಡ ಶ್ರೀ ರಾಜೀವ್ ಗಾಂಧಿಯವರ ಜನ್ಮದಿನ ಇಂದು ರಾಷ್ಟ್ರಾದ್ಯಂತ ಆಚರಿಸುತ್ತಿದ್ದು, ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ. ಆ ಪ್ರಯುಕ್ತ ಭಾರತೀಯ ಯುವ ಕಾಂಗ್ರೆಸ್ ಮಂಜೇಶ್ವರ ನಿಯೋಜಕ ಮಂಡಲದ ವತಿಯಿಂದ ಕಾಸರಗೋಡು ಜಿಲ್ಲಾ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆ, ಮಂಜೇಶ್ವರ ರಾಷ್ಟ್ರಕವಿ ಗೋವಿಂದ ಪೈ ಕಾಲೇಜು ಬಳಿಯ ನಿವಾಸಿ ಕುಮಾರಿ ಕಾವ್ಯ ಇವರನ್ನು ಇಂದು ಬೆಳಗ್ಗೆ ಮನೆಗೆ ತೆರಳಿ ಗೌರವಿಸಲಾಯಿತು.
ಯುವ ಕಾಂಗ್ರೆಸ್ ಮಂಜೇಶ್ವರ ನಿಯೋಜಕ ಮಂಡಲದ ಅಧ್ಯಕ್ಷರಾದ ಇರ್ಷಾದ್ ಮಂಜೇಶ್ವರ ಮತ್ತು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ನಾಗೇಶ್ ಮಂಜೇಶ್ವರವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

