ಉಡುಪಿ, ಪಡುಕುತ್ಯಾರು: ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟ, ತ್ಯಾಗ, ಬಲಿದಾನಗಳ ಮತ್ತು ಮಹತ್ವದ ಬಗ್ಗೆ ಎಳೆಯ ಪೀಳಿಗಗೆ ಅರಿವು ಮೂಡಿಸಬೇಕು, ಸ್ವಾತಂತ್ರ್ಯವು ಉಚಿತವಾಗಿ ಲಭಿಸಿದಲ್ಲ , ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಸತತ ಪ್ರಯತ್ನಗಳು, ಅವರು ಎದುರಿಸಿದ ಸಂಕಷ್ಟಗಳ ಬಗ್ಗೆಯೂ ಮನನ ಮಾಡಿಸಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ವೇಳೆ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಆಶೀರ್ವಚನ ನೀಡುತ್ತಿದ್ದರು.
ಸ್ವಾತಂತ್ರ್ಯ ಎಂದರೆ ಸ್ವೇಚ್ಛಾರದ ಬದುಕು ಅಲ್ಲ ಬದಲಾಗಿ ಸಂಯಮದೊಂದಿಗೆ ವರ್ತಿಸಿ ಬದುಕುವ ವಿಧಾನ, ಇನ್ನೊಬ್ಬರಿಗೆ ತೊಂದರೆಯಾಗದಂತೆ ನಡೆ ನುಡಿಗಳೊಂದಿಗೆ ಬದುಕುವ ರೀತಿ ಎಂದರು. ನಮ್ಮ ದೇಶಕ್ಕೆ ನಾವು ಏನು ಮಾಡಿದ್ದೇವೆ, ನಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಅವಲೋಕನ ಮಾಡಿ ನಮ್ಮಿಂದ ಏನು ಉತ್ತಮ ಕೆಲಸ ಮಾಡಲು ಸಾಧ್ಯ ಎಂಬುದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮನುಷ್ಯ ಪ್ರಕೃತಿಯ ಅತಿಥಿ ಹೊರತು ಯಜಮಾನ ಅಲ್ಲ ಸರಿಯಾದ ರೀತಿಯಲ್ಲಿ ಪ್ರಕೃತಿಯನ್ನು ಉಪಯೋಗಿಸಿ ಮುಂದಿನ ಪೀಳಿಗೆಗೆ ಬಿಟ್ಟುಕೊಡಬೇಕು ಇದಕ್ಕೆ ಇತ್ತೀಚಿಗಿನ ಹವಾಮಾನ ವೈಪರೀತ್ಯಗಳು ಕೂಡ ಒಂದು ಸಾಕ್ಷಿಯಾಗಿದೆ ಎಂದು ಅವರು ನುಡಿದರು. ಜೀವನದಲ್ಲಿ ಕುರುಡ , ಕಿವುಡ ಮತ್ತು ಮೂಗ ಯಾರು ಎಂಬುದರ ಬಗ್ಗೆ ಉದಾಹರಣೆಗಳೊಂದಿಗೆ ವಿವರಣೆ ನೀಡಿದ ಶ್ರೀಗಳವರು ಕುರುಡನಿಗೆ ಮಾರ್ಗದರ್ಶನ ಮಾಡಲು ಸಾಧ್ಯ ಆದರೆ ಬುದ್ದಿ ಕುರುಡನಿಗೆ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ. ಸರಿಯಾದ ಮಾರ್ಗದರ್ಶನ ಮಾಡದೆ ಯಾರೂ ಕುರುಡರಾಗಬಾರದು, ಒಳ್ಳೆಯ ಹಿತವಚನ ಕೇಳದೆ ಕಿವುಡನಾಗಬಾರದು, ಹಿತವಚನ ನೀಡಲು ಸಾಧ್ಯವಿದ್ದಾಗ ನೀಡದೆ ಮೂಗನಾಗಬಾರದುಎಂದು ನುಡಿದರು. ಮುಖದ ಬದಲಾವಣೆ ಮಾಡಿದರೆ ಸಾಲದು ಬದಲಾವಣೆಯತ್ತ ಮುಖ ಮಾಡಬೇಕು ಎಂದ ಶ್ರೀಗಳವರು ತಪ್ಪನ್ನು ತೋರಿಸಿಕೊಡುವ ಭೂತಕನ್ನಡಿಯಾಗದೆ, ನಮ್ಮ ಮುಖ ನೋಡುವ ಕನ್ನಡಿಯಾಗಿ ನಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು, ನಾವು ಇನ್ನೊಬ್ಬರ ತಪ್ಪು ಕಂಡು ಹಿಡಿದು ತೋರಿಸಿ ತೀರ್ಮಾನಿಸಲು ಆಸಕ್ತಿ ವಹಿಸಿ ನ್ಯಾಯಾಧೀಶರಾಗುತ್ತೇವೆ ಆದರೆ ನಮ್ಮ ಬಗ್ಗೆ, ನಮ್ಮ ತಪ್ಪಿಗೆ ನ್ಯಾಯಾದಿಗಳಾಗುತ್ತೇವೆ ಇಂತಹ ಮನೋಭಾವವನ್ನು ನಾವು ಮೊದಲು ತಿದ್ದಿಕೊಳ್ಳಬೇಕು ಎಂದು ಅವರು ನುಡಿದರು. ಭಗವಂತನಲ್ಲಿ ಎಲ್ಲವನ್ನೂ ಸರಿಮಾಡು ಎಲ್ಲರನ್ನೂ ಸರಿಮಾಡು ನನ್ನಿಂದಲೇ ಶುರುಮಾಡು ಎಂಬಂತೆ ಹೊಸ ಪರಿರ್ತನೆಗೆ ನಾಂದಿ ಹಾಡೋಣ ಎಂದು ಅವರು ಕರೆ ನೀಡಿದರು.
ಗೋಕರ್ಣ ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ್ ಮಧುಕರ ಚಂದ್ರಶೇಖರ ಆಚಾರ್ಯ, ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನ ಆಡಳಿತ ಮೊಕ್ತೇಸರ ಸುಧಾಕರ ಆಚಾರ್ಯ , ಪಿ.ವಿ ರಾಘವೇಂದ್ರ ಆಚಾರ್ಯ ಮಂಚಕಲ್, ಮುಂಬೈ ಪಿ.ವಿ. ಭಾಸ್ಕರ ಆಚಾರ್ಯ, ಎಂ.ಪಿ ಮೋಹನ ಆಚಾರ್ಯ ಉಡುಪಿ, ಕೆ ವಾದಿರಾಜ ರಾವ್ ನೇಜಾರು, ನಿಟ್ಟೆ ದಾಮೋದರ ಆಚಾರ್ಯ ಮುಂಬೈ, ಗಣೇಶ್ ಕುಮಾರ್ ಆಚಾರ್ಯ ಮುಂಬೈ,ಪಶುಪತಿ ಉಳ್ಳಾಲ,ವಾಸುದೇವಾಚಾರ್ಯ ಅತ್ರಾಡಿ,ಗಂಗಾಧರ ಆಚಾರ್ಯ ಇಡಗುಂಜಿ,ರೂಪೇಶ್ ಆಚಾರ್ಯ ಮಂಚಕಲ್,ಸತೀಶ್ ರಾವ್ ಮಂಗಳೂರು, ವಿ. ಗಣೇಶ್ ಆಚಾರ್ಯ ವಿಟ್ಲ, ಕೂಡ ಸುಬ್ರಾಯ ಆಚಾರ್ಯ ಕೊಲಕಾಡಿ ಸೇರಿದಂತೆ ಶಿಷ್ಯವೃಂದದವರು ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಂಡರು.
ಸಮಾರಂಭದಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ,ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ.ಸೂರ್ಯ ಕುಮಾರ್ ಆಚಾರ್ಯ ಹಳೆಯಂಗಡಿ, ಕಾಯದರ್ಶಿಗಳಾದ ಕಾಡಬೆಟ್ಟು ನಾಗರಾಜ ಆಚಾರ್ಯ,ಪ್ರಶಾಂತ ಆಚಾರ್ಯ ಕಟಪಾಡಿ, ರಾಘವೇಂದ್ರ ಆಚಾರ್ಯ ಉಡುಪಿ,ಶ್ರೀಧರ ಜೆ ಆಚಾರ್ಯ ಕಟಪಾಡಿ, ಎಚ್.ರತ್ನಾಕರ ಆಚಾರ್ಯ ಉದ್ಯಾವರ, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಬೆಳುವಾಯಿ ಸುಂದರ ಆಚಾರ್ಯ, ಜಿ.ಟಿ ಆಚಾರ್ಯ ಮುಂಬೈ, ಬಂಬ್ರಾಣ ಯಜ್ಞೇಶ್ ಆಚಾರ್ಯ ಮಂಗಳೂರು, ಪೆರ್ಣೆ ಮಧುಸೂಧನ ಆಚಾರ್ಯ ಕಾಸರಗೋಡು, ಯಜ್ಞೇಶ ವಿಶ್ವಕರ್ಮ ಪೆರ್ಲ, ಪುರೋಹಿತ್ ಶ್ರೀಧರ ಶರ್ಮಾ ಕಟಪಾಡಿ, ಪುರೋಹಿತ್ ಅಕ್ಷಯ ಶರ್ಮಾ ಕಟಪಾಡಿ, ದಿನೇಶ್ ಆಚಾರ್ಯ ಪಡುಬಿದ್ರಿ, ಕನ್ಯಾನ ಜನಾರ್ಧನ ಆಚಾರ್ಯ, ಪಿ.ವಿ ಅಚ್ಯುತ ಆಚಾರ್ಯ ಉಡುಪಿ, ಗಣೇಶ್ ಆಚಾರ್ಯ ಕೋಟ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ವಸಂತ ಆಚಾರ್ಯ ಮಜೂರು , ಕೆ.ಜೆ. ಗುರುರಾಜ ಆಚಾರ್ಯ,ಸತೀಶ್ ಆಚಾರ್ಯ ಸುರುಳಿ , ಗಣೇಶ್ ಆಚಾರ್ಯ ಕೆಮ್ಮಣ್ಣು, ವಿಶ್ವಕರ್ಮ ನವೋತ್ಥಾನ ಫೌಂಡೇಶನ್ ಸ್ಥಾಪಕ ನಿರ್ದೇಶಕರಾದ ಸೋಮೇಶ್ ಆಚಾರ್ಯ ಕಣ್ಣೂರು, ಜಯ ಪ್ರಕಾಶ್ ಆಚಾರ್ಯ ತಿರುವನಂತಪುರ, ಸೋಮರಾಜ್ ಆಚಾರ್ಯ ಕೊಟ್ಟಾಯಂ, ಕೇರಳ ರಾಜ್ಯ ಅಧ್ಯಕ್ಷ ಲೆಫ್ಟಿನೆಂಟ್ ಕರ್ನಲ್ ನಾರಾಯಣನ್ ಕಣ್ಣೂರು. ರಾಜ್ಯ ಕಾರ್ಯದರ್ಶಿ ರಮೇಶ್ ಕುಮಾರ್ ಕೊಟ್ಟಾಯಂ, ಕೊಟ್ಟಾಯಂ ಜಿಲ್ಲಾಧ್ಯಕ್ಷ ಸಾಜನ್ , ಪತ್ತನಂತಿಟ್ಟ ವಿಶ್ವಬ್ರಾಹ್ಮಣ ಕಾಲೇಜಿನ ಚೇರ್ಮನ್ ಎಂ.ಸುರೇಶ ಆಚಾರ್ಯ, ವೆಂಕಿ ಅಚಾರ್ಯ ಪತ್ತನಂತಿಟ್ಟ, ಗೋಪಾಲಕೃಷ್ಣ ಆಚಾರ್ಯ ಚೋಟಾ ನಿಕ್ಕರ, ಸದಾನಂದ ಆಚಾರ್ಯ ,ಪ್ರಕಾಶ್ ಆಚಾರ್ಯ ಎರ್ನಾಕುಲಂ ಮುತಾದವರು ಉಪಸ್ಥಿತರಿದ್ದರು. ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ವತಿಯಿಂದ ಮಹಾಸಂಸ್ಥಾನದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ವರದಿ : ರತನ್ ಕುಮಾರ್ ಹೊಸಂಗಡಿ
