ಮಂಜೇಶ್ವರ ಪೂರ್ಣ ಸ್ವಚ್ಛತೆ ಹಾಗೂ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ನಿರ್ಧಾರ.
ಮಂಜೇಶ್ವರ; ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣ ಸ್ವಚ್ಛತೆಗೆ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸಲು ಪಂಚಾಯತ್ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಂಪೂರ್ಣ ಪ್ಲಾಸ್ಟಿಕ್ ನಿಷೇದಕ್ಕೆ ಆದ್ಯತೆ ನೀಡಿ ಜಾರಿಗೊಳಿಸಲು ಪಂಚಾಯತ್ ಆಡಳಿತಕ್ಕೆ ಸ್ಥಾಯಿ ಸಮಿತಿ ಮನವಿ ಮಾಡಿದೆ. ಪಂಚಾಯತ್ ತೆರಿಗೆ ಕಟ್ಟದೆ ಅನೇಕ ವರ್ಷಗಳಿಂದ ವ್ಯಾಪಾರ ಮಾಡುವ ವ್ಯಾಪಾರಿಗಳು ತೆರಿಗೆ ಕಟ್ಟದೆ ಇದ್ದರೆ ಕಾನೂನು ಕ್ರಮ ಜರುಗಸಲು ತೀರ್ಮಾನಿಸಲಾಗಿದೆ. ಅನುಮತಿ ಇಲ್ಲದೆ ಅನಧಿಕೃತವಾಗಿ ತೆರೆದಿರುವ ಗೂಡಂಗಡಿಗಳನ್ನು ಪಂಚಾಯತ್ ಆದೇಶ ನೀಡುವ ವರೆಗೆ ಹಾಗೂ ವ್ಯಾಪಾರಸ್ಥರು ತ್ಯಾಜ್ಯ ವಿಲೇವಾರಿಗೆ ಒತ್ತು ನೀಡಬೇಕೆಂದು ಸಭೆ ಅಗ್ರಹಿಸಿತು. ರಸ್ತೆ ಬದಿಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯ ಎಸೆಯುವವರನ್ನು ನಿಯಂತ್ರಣ ಮಾಡಲು ಪೋಲೀಸ್ ಇಲಾಖೆಯಲ್ಲಿ ತಿಳಿಸಲಾಗಿದೆ. ಹೊಸಂಗಡಿ, ಕುಂಜತ್ತೂರ್ ಪ್ರದೇಶ ಕೇಂದ್ರೀಕರಿಸಿ ಸಿಸಿ ಕ್ಯಾಮರಾ ಸ್ಥಾಪಿಸಲು ತೀರ್ಮಾನಿಸಲಾಗಿದೆ.
ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಪ್ರಿಯಾ ಶೆಣೈಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಪಂಚಾಯತ್ ಅಧ್ಯಕ್ಷೆ ಲವಿನ ಮೆಂತೆರೋ ಉದ್ಘಾಟಿಸಿ ಮಾತನಾಡಿದರು. ಸ್ಥಾಯಿ ಸಮಿತಿ ಸದಸ್ಯರಾದ
ಆದರ್ಶ್ ಬಿಎಂ, ಶ್ರೀಮತಿ ಸಮೀರಾ ಚೆರ್ಕಳ, ಜೇಬುನಿಷ, ಲಕ್ಷಣ್ ಕುಂಜತೂರ್ , ಅಧಿಕಾರಿಗಳಾದ ನಾಸಿರ್, ಕೃಷ್ಣ ಪ್ರಿಯ, ವ್ಯಾಪಾರಿ ಏಕೋಪನ ಸಮಿತಿ ಅಧ್ಯಕ್ಷ ಭಾಷಿರ್ ಕನಿಲ, ಕಾರ್ಯದರ್ಶಿ ದಯಾನಂದ ಉಪಸ್ಥಿತರಿದ್ದರು.
ವರದಿ : ರತನ್ ಕುಮಾರ್ ಹೊಸಂಗಡಿ
