ಕೊಡುಗೈ ದಾನಿ, ಸಾಮಾಜಿಕ, ಧಾರ್ಮಿಕ ಮುಂದಾಳು ಕೆರೆಮನೆ ಗಣೇಶ ಆಚಾರ್ಯ ಬೆಂಗಳೂರು ನಿಧನ.
ಬೆಂಗಳೂರು:- ಮೂಲತಃ ಕಾಸರಗೋಡು ಕೆರೆಮನೆ ನಿವಾಸಿ, ದಿ. ರಾಘವ ಆಚಾರ್ಯ - ಚಂದ್ರಾವತಿ ದಂಪತಿ ಪುತ್ರ ಇದೀಗ ಬೆಂಗಳೂರಿನ ಕತ್ತೆರಿಗುಪ್ಪೆಯಲ್ಲಿ ವಾಸಿಸುವ ಬೆಂಗಳೂರಿನ ಪ್ರತಿಷ್ಠಿತ ಬೆನಕ ಜ್ಯುವೆಲ್ಲರಿ ಮಾಲಕರಾದ ಕೆರೆಮನೆ ಗಣೇಶ ಆಚಾರ್ಯ (55) ರವರು ತಮ್ಮ ಕತ್ತೆರಿಗುಪ್ಪೆಯಲ್ಲಿರುವ ಜ್ಯುವೆಲ್ಲರಿಯಲ್ಲಿ ನಿನ್ನೆ ರಾತ್ರಿ 8 ಗಂಟೆ ವೇಳೆ ಹೃದಯಾಘಾತಗೊಂಡು ಕೂಡಲೇ ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ನಿಧನರಾದರು.
ಮೃತರು ಕಳೆದ ಹಲವು ವರ್ಷಗಳಿಂದ ಬೆಂಗಳೂರಿನ ಕತ್ತೆರಿಗುಪ್ಪೆಯಲ್ಲಿ ವಾಸಿಸುತ್ತಿದ್ದು, ಮನೆಯಿಂದ ಕೆಲವೇ ಕಿಲೋ ಮೀಟರ್ ಅಂತರದಲ್ಲಿ ಭುವನೇಶ್ವರೀ ನಗರದಲ್ಲಿ "ಬೆನಕ ಜ್ಯುವೆಲ್ಲರಿ" ಎಂಬ ಆಭರಣದ ಮಳಿಗೆಯನ್ನ ಕಳೆದ 26 ವರ್ಷಗಳಿಂದ ನಡೆಸುತ್ತಿದ್ದರು. ಅಲ್ಲದೆ ಇವರಿಗೆ ಬೆಂಗಳೂರಿನ ಗಿರಿನಗರದಲ್ಲೂ ಕೂಡಾ "ಬೆನಕ ಜ್ಯುವೆಲ್ಲರಿ" ಯಿದ್ದು, ಈ ಎರಡು ಆಭರಣ ಮಳಿಗೆಯ ಮಾಲಕರಾಗಿದ್ದರು. ಇಂದು ಸಂಜೆ ವೇಳೆ ಭುವನೇಶ್ವರೀ ನಗರದಲ್ಲಿರುವ ಜ್ಯುವೆಲ್ಲರಿಯಲ್ಲಿರುವ ವೇಳೆ ಹೃದಯಾಘಾತವುಂಟಾಯಿತು.
ಮೃತರು ಧಾರ್ಮಿಕ, ಸಾಮಾಜಿಕ, ರಂಗದಲ್ಲಿ ಸಕ್ರೀಯರಾಗಿದ್ದು, ಮಂಜೇಶ್ವರ, ಕೋಟೆಕಾರ್, ಆರಿಕ್ಕಾಡಿ, ಮಧೂರು ಶ್ರೀ ಕಾಳಿಕಾಂಬ ಕ್ಷೇತ್ರಗಳ ಅಭಿವೃದ್ಧಿಗೆ ಸಹಕರಿಸಿದ್ದರು. ಅಲ್ಲದೇ ಕಾಸರಗೋಡು ನಗರದ ಕರಂದಕ್ಕಾಡಿನಲ್ಲಿರುವ ಶ್ರೀ ವಿಶ್ವಕರ್ಮ ಮಂದಿರದ ಜೀರ್ಣೋದ್ಧಾರದ ಆರ್ಥಿಕ ಸಮಿತಿಯಲ್ಲಿ ಪಧಾಧಿಕಾರಿಯಾಗಿದ್ದು, ತಮ್ಮಿಂದಾದ ಸಹಾಯ ಸಹಕಾರವನ್ನ ನೀಡಿದ್ದರು. ಹಾಗೂ ಉಡುಪಿ ಪಡುಕುತ್ಯಾರುವಿನಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಪರಮಾಪ್ತ ಶಿಷ್ಯರೂ, ಆನೆಗುಂದಿ ಪ್ರತಿಷ್ಠಾನದ ಬೆಂಗಳೂರು ಪ್ರತಿನಿಧಿಗಳಲ್ಲಿ ಓರ್ವರೂ, ಆನೆಗುಂದಿ ಮಹಾಸಂಸ್ಥಾನದ ಬೆಂಗಳೂರು ಶಾಖಾ ಮಠ ಸಮಿತಿ ಉಪಾಧ್ಯಕ್ಷರಾಗಿಯೂ, ಮಹಾಸಂಸ್ಥಾನದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗೂ ಶ್ರೀ ವಿಶ್ವಕರ್ಮ ಸಮಾಜ ವೇದಿಕೆ ಬೆಂಗಳೂರು ಇದರ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮತ್ತು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಪರಮ ಭಕ್ತರಾಗಿದ್ದು, ಪ್ರತೀ ವರುಷ ಕ್ಷೇತ್ರ ದರ್ಶನ ಸೇರಿದಂತೆ ಅನೇಕರಿಗೆ ಕಷ್ಟ ಕಾರ್ಪಣ್ಯದ ವೇಳೆ ಶ್ರೀಗಳನ್ನ ನೆನೆದು ವಿವಿಧ ಸಾಮಾಜಿಕ ಸೇವೆಗಳನ್ನು ಸಲ್ಲಿಸುತ್ತಿದ್ದರು.
ಮೃತರು ಪತ್ನಿ ಜಾಹ್ನವಿ, ಮಕ್ಕಳಾದ ಯಜ್ಞಕ್, ಪೂರ್ವಿ, ಸಹೋದರ - ಸಹೋದರಿಯರಾದ ವಾಸುದೇವ ಆಚಾರ್ಯ, ಆನಂದ ಆಚಾರ್ಯ, ಹರೀಶ್ಚಂದ್ರ ಆಚಾರ್ಯ ವಿವೇಕಾನಂದ ನಗರ ಕಾಸರಗೋಡು, ವತ್ಸಲ ಬೆಂಗಳೂರು, ಶಶಿಕಲಾ ಬೆಂಗಳೂರು, ಭಾರತಿ, ಮಂಜುಳಾ ಹಾಗೂ ಅಪಾರ ಬಂಧು ಮಿತ್ರರನ್ನ ಅಗಲಿದ್ದಾರೆ.
ಮೃತದೇಹವನ್ನ ಕಾಸರಗೋಡುವಿನ ವಿವೇಕಾನಂದ ನಗರದಲ್ಲಿರುವ ಸಹೋದರರ ಮನೆಗೆ ಇಂದು ( 18 - 08 - 2021 ನೇ ಬುಧವಾರ ) ಬೆಳಗ್ಗೆ 10ಗಂಟೆಗೆ ತರಲಾಗುವುದು. ಬಳಿಕ 12 ಗಂಟೆ ವೇಳೆ ಅಂತ್ಯಕ್ರಿಯೆಯ ವಿಧಿ ವಿಧಾನಗಳು ನಡೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
_____________________
ಆನೆಗುಂದಿ ಶ್ರೀ ಸಂತಾಪ..
ಬೆಂಗಳೂರು ಬೆನಕ ಜುವೆಲ್ಲರಿ ಮಾಲಕರಾದ ಕಾಸರಗೋಡಿನ ಕೆರೆಮನೆ ಗಣೇಶ್ ಆಚಾರ್ಯ ಅವರದು ಅಪರೂಪದ ವ್ಯಕ್ತಿತ್ವ. ಧಾರ್ಮಿಕ ತಳಹದಿಯಲ್ಲಿ ಸಮಾಜವನ್ನು ಕಟ್ಟುವ ಚಿಂತನೆ ಹೊಂದಿದ್ದ ಮಹಾಸಂಸ್ಥಾನದ ಪರಮಾಪ್ತ ಶಿಷ್ಯರಲ್ಲಿ ಒಬ್ಬರು. ಮಹಾಸಂಸ್ಥಾನದ ಅಭಿವೃದ್ಧಿಯನ್ನು ಸದಾ ಬಯಸಿ ನಿಸ್ವಾರ್ಥ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ನಮ್ಮ ಆರಾಧ್ಯ ಮೂರ್ತಿಯು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು, ಪೀಠಾಧೀಶ್ವರರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಕಟಪಾಡಿ- ಪಡುಕುತ್ಯಾರು.
-------------------------------------
ಬೆಂಗಳೂರು ಬೆನಕ ಜ್ಯುವೆಲ್ಲರಿ ಮಾಲಕರಾದ ಶ್ರೀಯುತ ಗಣೇಶ್ ಆಚಾರ್ಯ ಕೆರೆಮನೆ ಕಾಸರಗೋಡು ಇವರ ಅಕಾಲಿಕ ಅಗಲಿಕೆಯು ಸಮಾಜಕ್ಕೆ ತುಂಬಲಾರದ ನಷ್ಟ. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಪರಮಾಪ್ತ ಶಿಷ್ಯರೂ, ಆನೆಗುಂದಿ ಪ್ರತಿಷ್ಠಾನದ ಬೆಂಗಳೂರು ಪ್ರತಿನಿಧಿಗಳಲ್ಲಿ ಓರ್ವ ರೂ, ಆನೆಗುಂದಿ ಮಹಾಸಂಸ್ಥಾನದ ಬೆಂಗಳೂರು ಶಾಖಾ ಮಠ ಸಮಿತಿ ಪದಾಧಿಕಾರಿಯಾಗಿಯೂ, ಮಹಾಸಂಸ್ಥಾನದ ಸಕ್ರಿಯ ಕಾರ್ಯಕರ್ತರೂ ಆಗಿದ್ದ ಇವರ ಅಗಲಿಕೆಗೆ ಆನೆಗುಂದಿ ಪ್ರತಿಷ್ಠಾನವು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತದೆ. ಅವರ ಕುಟುಂಬಕ್ಕೆ ಶ್ರೀಯತರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.
🙏🙏🙏
ಪ್ರಧಾನ ಕಾರ್ಯದರ್ಶಿ ಆನೆಗುಂದಿ ಪ್ರತಿಷ್ಠಾನ ಕಟಪಾಡಿ.
_____________________
ಕೊಡುಗೈದಾನಿ, ಧಾರ್ಮಿಕ, ಸಾಮಾಜಿಕ ಮುಂದಾಳು ಕೆರೆಮನೆ ಗಣೇಶ ಆಚಾರ್ಯ ಬೆಂಗಳೂರು ಇವರ ಅಕಾಲ ನಿಧನಕ್ಕೆ ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ಆಡಳಿತ ಸಮಿತಿ, ಓಜ ಸಾಹಿತ್ಯ ಕೂಟ, ಶ್ರೀ ಕಾಳಿಕಾ ಪರಮೇಶ್ವರೀ ವಿಶ್ವಕರ್ಮ ಮಹಿಳಾ ಸಂಘ, ಶ್ರೀ ಗುರು ಸೇವಾ ಪರಿಷತ್ ಮಂಜೇಶ್ವರ, ಆದಿಕ್ಷೇತ್ರ ಶ್ರೀ ರಕ್ತೇಶ್ವರೀ ದೇವಸ್ಥಾನ ಹೊಸಂಗಡಿ, ಕೋಟೇಕಾರು ಶ್ರೀ ಕಾಳಿಕಾಂಬ ದೇವಸ್ಥಾನ, ಆರಿಕ್ಕಾಡಿ ಶ್ರೀ ಕಾಳಿಕಾಂಬ ದೇವಸ್ಥಾನ, ಮಧೂರು ಶ್ರೀ ಕಾಳಿಕಾಂಬ ಮಠದ ಆಡಳಿತ ಸಮಿತಿ, ಕ್ಷೇತ್ರದ ಮಹಿಳಾ ಸಂಘ, ಯುವಕ ಸಂಘ, ಶ್ರೀ ಗುರುಸೇವಾ ಪರಿಷತ್ ಕೇಂದ್ರೀಯ ಮಂಡಳಿ ಪಡುಕುತ್ಯಾರು, ಶ್ರೀ ವಿಶ್ವಕರ್ಮ ಭಜನಾ ಮಂದಿರ ಕಾಸರಗೋಡು, ಮತ್ತು ವಿಶ್ವಕರ್ಮ ಸಮಾಜ ಭಾಂದವರು ಗಾಢವಾದ ಸಂತಾಪ ಸೂಚಿಸಿದ್ದಾರೆ.
ವರದಿ : ರತನ್ ಕುಮಾರ್ ಹೊಸಂಗಡಿ
