ಉಡುಪಿ, ಪಡು ಕುತ್ಯಾರು:- ಧರ್ಮಕಾರ್ಯದ ಮೂಲಕ ಸಂಚಯನ ಗೊಳ್ಳುವ ಪುಣ್ಯದ ಫಲವು ಇಹ ಮತ್ತು ಪರದಲ್ಲೂ ನಮ್ಮೊಂದಿಗಿರುತ್ತದೆ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತ ಆಚರಣೆಯ ನವಮ ದಿನದಂದು ಆಶೀರ್ವಚನ ನೀಡುತ್ತಿದ್ದರು. ಸತ್ಕರ್ಮ ಮತ್ತು ದುಷ್ಕರ್ಮ ಈ ಎರಡು ಫಲಗಳಲ್ಲಿ ಆಯ್ಕೆ ನಮ್ಮದು. ಬದುಕಿದ್ದಾಗ ಸತ್ಕರ್ಮದಲ್ಲಿ ಸಂಪತ್ತು ವಿನಿಯೋಗ ಮಾಡಿದಲ್ಲಿ ಪರಲೋಕದಲ್ಲಿ ಶ್ರೇಷ್ಠ ಸ್ಥಾನ ಲಭಿಸುತ್ತದೆ, ದುಷ್ಕರ್ಮದ ಫಲಕ್ಕೆ ಅದಕ್ಕನುಗುಣವಾದ ಸ್ಥಾನ ಲಭಿಸುತ್ತದೆ ಎಂದು ನುಡಿದ ಅವರು ಪ್ರತಿಫಲಾಪೇಕ್ಷೆ ಇಲ್ಲದೆ, ನಮ್ಮ ನೆನಪಲ್ಲಿ ಉಳಿಯದೆ ಇರುವ ಪರೋಪಕಾರವು ಅತ್ಯಂತ ಶ್ರೇಷ್ಠ. ಇದರಿಂದ ಜನ್ಮ ಸಾರ್ಥಕ ಎಂದು ಅವರು ಸಾರ್ಥಕ ಬದುಕಿನ ಬಗ್ಗೆ ವಿಸ್ತೃತ ವಿವರಣೆಯನ್ನು ನೀಡಿದರು. ಗುರುಕೃಪೆ, ಮಾರ್ಗದರ್ಶನ ಇದ್ದಲ್ಲಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಚಾತುರ್ಮಾಸ್ಯ ವ್ರತ ನಿರತ ಕುಲ ಗುರುಗಳ ದರ್ಶನದಿಂದ, ಕೃಪಾಕಟಾಕ್ಷದಿಂದ ದೊರೆಯುವ ಅನುಗ್ರಹವು ಸರ್ವಶ್ರೇಷ್ಠ ಎಂದು ಶುಭಾಶಂಸನೆ ನಡೆಸಿದ ಹುಬ್ಬಳ್ಳಿಯ ವಿಶ್ವಬ್ರಾಹ್ಮಣ ಪ್ರತಿಷ್ಠಾನದ ಗೌರವಾಧ್ಯಕ್ಷ ವೇದ ಬ್ರಹ್ಮ ಶ್ರೀ ಶಂಕರಾಚಾರ್ಯ ಗುರುನಾಥ ಆಚಾರ್ಯ ಕಡ್ಲಾಸ್ಕರ್ ಪಂಡಿತ್ ಅವರು ನುಡಿದರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ವಡೇರಹೋಬಳಿ ಶ್ರೀಧರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ನಿಗದಿತ ಸೇವಾ ಅವಧಿಯಲ್ಲಿ ನಡೆದ ಶಿಷ್ಯವೃಂದದ ಗುರುಪಾದುಕಾ ಪೂಜಾ ಸೇವೆಯಲ್ಲಿ ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ ವಿಟ್ಲ, ಕಡೇಶ್ವಾಲ್ಯ ಉಮೇಶ ಆಚಾರ್ಯ,ಯೋಗೀಶ್ ಆಚಾರ್ಯ, ರಾಜೇಶ್ ಆಚಾರ್ಯ, ಮ.ವೆಂಕಟೇಶ್ ಮಣ್ಣಗುಡ್ಡೆ, ಸಂಧ್ಯಾ ಶೇಖರ ಆಚಾರ್ಯ ಮಂಗಳಾದೇವಿ, ಕೇದಿಕಾನ ಕುಟುಂಬಸ್ಥರು, ಶ್ಯಾಮ್ ಡಿ ಆಚಾರ್ಯ ಮಂಗಳೂರು,ಸುನಿತಾ ತುಕಾರಾಮ್ ಆಚಾರ್ಯ ಮಂಗಳೂರು,ಬಿ.ಆರ್ ಗುರುಪ್ರಸಾದ್ ಮಂಗಳೂರು,ಮಾಲತಿ ವಿಠ್ಠಲ ಆಚಾರ್ಯ ಮಂಗಳೂರು ಭಾಗವಹಿಸಿದ್ದರು. ಹುಬ್ಬಳ್ಳಿಯ ವಿಶ್ವಬ್ರಾಹ್ಮಣ ಪ್ರತಿಷ್ಠಾನ, ಹುಬ್ಬಳ್ಳಿಯ ಶಿವಾಜಿ ಶಂಕರ ರಾವ್ ಹಂಸಭಾವಿ ,ಅನಿಲ್ ನರೆಬೋಳ, ಜಗದೀಶ್ ಆಚಾರ್ಯ ಕಪ್ಪೆಟ್ಟು ಉಡುಪಿ,ಉಮೇಶ್ ಆಚಾರ್ಯ ಮಂಚಕಲ್,ಭಾಸ್ಕರ ಆಚಾರ್ಯ ಪಣಿಯೂರು ಸೇರಿದಂತೆ ಉಪ್ಪಿನಂಗಡಿ, ಬಂಟ್ಟಾಳ, ಸುಳ್ಯ ಪ್ರದೇಶದ ಶಿಷ್ಯವೃಂದದವರು ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಂಡರು. ಇದೇ ವೇಳೆ ಹುಬ್ಬಳ್ಳಿಯ ಸುಹಾಸ್ ಸವನೂರ,ವಿಜಯ ಧೋತರಗಾವಿ, ದತ್ತಾತ್ರೇಯ ಶೆರೆವಾಡ, ಸುನಿಲ್ ನರಹರಿ,ಹಾಗೂ ದಿನೇಶ ಆಚಾರ್ಯ ಕಿನ್ನಿಗೋಳಿ,ಸದಾಶಿವ ಆಚಾರ್ಯ ವಿಟ್ಲ ಹೊರೆಕಾಣಿಕೆ ಸಮರ್ಪಿಸಿದರು. ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದ ಹಿತರಕ್ಷಣಾ ವೇದಿಕೆಯ ವತಿಯಿಂದ ಭಜನಾ ಸಂಕೀರ್ತನ ಸೇವೆಯು ನಡೆಯಿತು. ಪುರೋಹಿತ್ ಅಕ್ಷಯ ಶರ್ಮ ತಂತ್ರಿ ಕಟಪಾಡಿ ಹಾಗೂ ವಿದ್ವಾನ್ ಪ್ರಶಾಂತ್ ಶರ್ಮಾ ಆಲೂರು ನೇತೃತ್ವದಲ್ಲಿ ವೇದಪಾಠಶಾಲೆಯ ವಿದ್ಯಾರ್ಥಿಗಳು ಗುರು ಪಾದುಕಾ ಪೂಜೆ ಹಾಗೂ ದುರ್ಗಾನಮಸ್ಕಾರ ಪೂಜೆಯ ವೈದಿಕ ಕಾರ್ಯಕ್ರಮದ ನೇತೃತ್ವ ವಹಿಸಿದರು. ಪಡುಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ ಕುತ್ಯಾರು, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ ಉಡುಪಿ,ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ, ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪ್ರಧಾನ ಸಂಚಾಲಕ ಬಿ ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಮಂಚಕಲ್, ಗೋವು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕರಂಬಳ್ಳಿ ಜಯಕರ ಆಚಾರ್ಯ, ಶ್ರೀ ಸರಸ್ವತಿ ಮಾತೃ ಮಂಡಳಿಯ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಆಚಾರ್ಯ, ಚಾತುರ್ಮಾಸ್ಯ ನಿರ್ವಹಣಾ ಸಮಿತಿ ಕಾರ್ಯದರ್ಶಿಗಳಾದ ಪ್ರಶಾಂತ ಆಚಾರ್ಯ ಕಟಪಾಡಿ, ಕೆ.ರಾಘವೇಂದ್ರ ಆಚಾರ್ಯ ಉಡುಪಿ, ಶ್ರೀಧರ ಜೆ. ಆಚಾರ್ಯ ಕಟಪಾಡಿ, ರತ್ನಾಕರ ಆಚಾರ್ಯ ಉದ್ಯಾವರ, ಕರಂಬಳ್ಳಿ ಯೋಗೀಶ್ ಆಚಾರ್ಯ, ಗುರುರಾಜ್ ಕೆ. ಜೆ ಆಚಾರ್ಯ ಮಂಗಳೂರು,ಸತೀಶ್ ಆಚಾರ್ಯ ಸುರುಳಿ,ಯಜ್ಞೇಶ್ವರ ಆಚಾರ್ಯ ಕುತ್ಯಾರು,ವಸಂತ ಆಚಾರ್ಯ ಮಂಜೂರು, ಗಣೇಶ್ ಆಚಾರ್ಯ ಕೆಮ್ಮಣ್ಣು, ಗುರು ಸೇವಾ ಪರಿಷತ್ತು ಉಡುಪಿ ವಲಯದ ಸದಸ್ಯರಾದ ಕುಮಾರ್ ಆಚಾರ್ಯ ಉಪ್ಪೂರು , ಕೆ.ಮಹೇಶ ಆಚಾರ್ಯ ಉಡುಪಿ,ಜಗದೀಶ್ ಆಚಾರ್ಯ ಕಳತ್ತೂರು ಉಡುಪಿ,ಪರ್ಕಳ ಗೋಪಾಲಕೃಷ್ಣ ಆಚಾರ್ಯ, ಕೆ. ರಾಘವೇಂದ್ರ ಆಚಾರ್ಯ ಹರಿಖಂಡಿಗೆ, ನವೀನ ಆಚಾರ್ಯ ಪಣಿಯೂರು, ಚಾತುರ್ಮಾಸ್ಯ ಸಮಿತಿಯ ಕೋವಿಡ್ ನೋಡಲ್ ಅಧಿಕಾರಿ ದಿನೇಶ್ ಆಚಾರ್ಯಪಡುಬಿದ್ರಿ,ಹುಬ್ಬಳ್ಳಿಯ ವಿಶ್ವಬ್ರಾಹ್ಮಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಅಶೋಕ ಜತ್ತಿ, ಪದಾಧಿಕಾರಿಗಳಾದ ಶಂಕರ ನಿಡಗುಂದಿ,ಉದಯ ಹಂಸಭಾವಿ,ಮೋಹನ ನರಗುಂದ, ನಾರಾಯಣ ಅರಳಿ ಕಟ್ಟಿ, ಬಿಜಾಪುರದ ಮಹೇಶ ನಾರಾಯಣ ಅಮಿತ್ ಖಾನಿ, ಮಾತೃ ಮಂಡಳಿ ಪ್ರಧಾನ ಕಾರ್ಯದರ್ಶಿ ರಮಾ ನವೀನ್ ಆಚಾರ್ಯ ಕಾರ್ಕಳ,ಕೋಶಾಧಿಕಾರಿ ಸುಮಾ ರತ್ನಾಕರ್ ಆಚಾರ್ಯ ಉದ್ಯಾವರ, ತ್ರಿವೇಣಿ ವಿಶ್ವೇಶ್ವರ ಪುರೋಹಿತ್, ಜ್ಯೋತಿ ರಾಘವೇಂದ್ರ ಆಚಾರ್ಯ ಉಡುಪಿ,ಜಯಶ್ರೀ ಗಣೇಶ್ ಆಚಾರ್ಯ ಕೆಮ್ಮಣ್ಣು,ಆಶಾ ನಾಗರಾಜ ಆಚಾರ್ಯ ಕಾಡಬೆಟ್ಟು, ಮುಂತಾದವರು ಉಪಸ್ಥಿತರಿದ್ದರು. ಚಾತುರ್ಮಾಸ್ಯವ್ರತ ನಿರ್ವಹಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ .ಎಂ.ಬಿ ಆಚಾರ್ ಕಂಬಾರು ಕಾರ್ಯಕ್ರಮ ನಿರೂಪಿಸಿದರು. ಮಹಾಸಂಸ್ಥಾನದ ಪ್ರಧಾನ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಟಪಾಡಿ ಗುರುಪಾದುಕಾ ಪೂಜೆಯ ವಿವರಣೆ ನೀಡಿದರು. ಸಮಿತಿ ಕಾರ್ಯದರ್ಶಿ ಕಾಡಬೆಟ್ಟು ನಾಗರಾಜ್ ಆಚಾರ್ಯ ಧನ್ಯವಾದವಿತ್ತರು.
ವರದಿ : ರತನ್ ಕುಮಾರ್ ಹೊಸಂಗಡಿ
