ನೀರ್ಚಾಲ್ : ಶ್ರೀ ವಿಷ್ಣು ಕಲಾವೃಂದ (ರಿ.) ವಿಷ್ಣು ನಗರ, ಮುಂಡಿತ್ತಡ್ಕ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಸಂಘದ ಹಿರಿಯ ಸದಸ್ಯರಾದ ಶ್ರೀ ಸುಂದರ ಪುರುಷ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಈ ವೇಳೆ ಇತ್ತೀಚೆಗೆ ಅಗಲಿದ ಸಂಘದ ಹಿರಿಯ ಕಾರ್ಯಕರ್ತರಾದ ಸೀತರಾಮ ಅರಿಪ್ಪಾದೆ ಅವರಿಗೆ ಸಂಘದ ವತಿಯಿಂದ ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ನಂತರ 2020-21ನೇ ಸಾಲಿನ ಲೆಕ್ಕಪತ್ರವನ್ನು ಪ್ರಧಾನ ಕಾರ್ಯದರ್ಶಿಯಾದ ಶ್ರೀ ನಿತ್ಯಪ್ರಕಾಶ್ ಅವರು ಮಂಡಿಸಿದರು. ಲೆಕ್ಕಪತ್ರವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
(ಜಾಹೀರಾತು)
ನಂತರ 2021-22 ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು. 2021-22ನೇ ಸಾಲಿನ ಸಮಿತಿಗೆ ಅಧ್ಯಕ್ಷರಾಗಿ ಶ್ರೀ ಸುನಿಲ್ ಮಾಸ್ಟರ್ ಮುಂಡಿತ್ತಡ್ಕ, ಉಪಾಧ್ಯಕ್ಷರುಗಳಾಗಿ ಶ್ರೀ ವರದರಾಜ್ ಮುಂಡಿತ್ತಡ್ಕ, ಶ್ರೀ ವಾಸು ನಾಯ್ಕ ಬೀರಿಕುಂಜ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ಸೂರ್ಯ ಪ್ರಕಾಶ್ ಶೇಡಿಮೂಲೆ, ಜೊತೆ ಕಾರ್ಯದರ್ಶಿಗಳಾಗಿ

ಶ್ರೀ ಕಿಶೋರ್ ಆಳ್ವ ಮಂಜಕೊಟ್ಟಿಗೆ, ಶ್ರೀ ರಾಧಾಕೃಷ್ಣ ಮುಂಡಿತ್ತಡ್ಕ ಕೋಶಾಧಿಕಾರಿಯಾಗಿ ಶ್ರೀ ಪ್ರಶಾಂತ್ ಬೀರಿಕುಂಜ, ಕ್ರೀಡಾ ಸಂಚಾಲಕರಾಗಿ ಶ್ರೀ ರಾಮ ಮುಂಡಿತ್ತಡ್ಕ, ಕಲಾ ಸಂಚಾಲಕರಾಗಿ ಶ್ರೀ ಬಾಲಕೃಷ್ಣ ಮಾಸ್ಟರ್ ಮೂಜುಕುಮೂಲೆ ಹಾಗೂ ಹತ್ತು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಶ್ರೀ ನಿತ್ಯ ಪ್ರಕಾಶ್ ಸ್ವಾಗತಿಸಿ, ಶ್ರೀ ಸೂರ್ಯಪ್ರಕಾಶ್ ವಂದಿಸಿದರು. ಸಂಘದ ಹಿರಿಯ ಕಿರಿಯ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.
ವರದಿ : ರತನ್ ಕುಮಾರ್ ಹೊಸಂಗಡಿ