ಲಾಕ್ಡೌನ್ನಿಂದಾಗಿ ತಿಂದದ್ದೇ ತಿಂದು ಬಾಯಿ ರುಚಿಯೇ ಇಲ್ಲ ಅಂತ ಹೇಳುತ್ತಾ ಇದ್ದೀರಾ. ಚಿಂತೆ ಯಾಕೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ಮನೆಯಲ್ಲೇ ತಯಾರಿಸಿದ "ಕೂಲ್ ಹಣ್ಣಿನ ಡೆಸರ್ಟ್" ಸವಿಯಿರಿ.
ಬೇಕಾಗಿರುವ ಸಾಮಗ್ರಿಗಳು :
ಹಾಲು - ಒಂದು ಲೀಟರ್,
ಸಕ್ಕರೆ - ಒಂದು ಕಪ್,
ಹಣ್ಣುಗಳು (ಪಪ್ಪಾಯ, ದ್ರಾಕ್ಷಿ, ದಾಳಿಂಬೆ, ಮಾವಿನಹಣ್ಣು, ಆಪಲ್, ಬಾಳೆಹಣ್ಣು )
ವೆನಿಲಾ ಕಸ್ಟರ್ಟ್ ಪೌಡರ್ - ನಾಲ್ಕು ಚಮಚ,
ಗೋಡಂಬಿ,
ದ್ರಾಕ್ಷಿ,
(Advertisement)
ಮಾಡುವ ವಿಧಾನ :
ಒಂದು ಪಾತ್ರೆಯಲ್ಲಿ ಒಂದು ಲೀಟರ್ ಹಾಲನ್ನು ಕಾಯಿಸಬೇಕು. ಅದಕ್ಕೆ ಒಂದು ಕಪ್ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಕಾಯಿಸಬೇಕು. ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಒಂದು ಲೋಟದಷ್ಟು ತಣ್ಣಗಿನ ಹಾಲು ತೆಗೆದುಕೊಂಡು ಅದಕ್ಕೆ ನಾಲ್ಕು ಚಮಚ ವೆನಿಲಾ ಕಸ್ಟರ್ಡ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಇಡಿ.
ಈಗ ಹಾಲು ಬಿಸಿ ಆದ ಮೇಲೆ ಅದಕ್ಕೆ ಮಿಶ್ರಣ ಮಾಡಿದ ವೆನಿಲಾ ಕಸ್ಟರ್ಡ್ ಪೌಡರ್, ಹಾಲನ್ನು ಸ್ವಲ್ಪ ಸಲ್ಪ ಕಾಯಿಸಿದ ಹಾಲಿಗೆ ಹಾಕುತ್ತ ಕೈ ಆಡಿಸುತ್ತಾ ಇರಬೇಕು. ಹೀಗೆ ಮಾಡಿ ಹಾಲು ತಳ ಹಿಡಿಯಬಾರದು. ಹಾಲು ಸ್ವಲ್ಪ ಗಟ್ಟಿಯಾದ ಮೇಲೆ ಅದನ್ನು ತಣಿಸಲು ಬಿಡಿ. ನಂತರ ಹಾಲು ತಣ್ಣಗಾದ ಮೇಲೆ ಕತ್ತರಿಸಿದ ಹಣ್ಣುಗಳನ್ನು ಮತ್ತು ಗೋಡಂಬಿ ದ್ರಾಕ್ಷಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಒಂದು ಗಂಟೆ ಸಮಯ ಫ್ರಿಡ್ಜ್ ಅಲ್ಲಿ ಕೂಲ್ ಆಗಲು ಬಿಡಿ. ಒಂದು ಗಂಟೆಯ ನಂತರ ಐಸ್ಕ್ರೀಂ ನ ಜೊತೆ ಸೇರಿಸಿ ತಿಂದರೆ ತಂಪಾದ ಹಣ್ಣಿನ ಡೆಸರ್ಟ್ ರೆಡಿ.
ರಚನೆ : ನಿಶ್ಮಿತಾ ರಾವ್, ಮಂಗಳೂರು


Nice❤️❤️❤️😋
ReplyDelete