ಕುಂಬಳೆ: ಮಂಜೇಶ್ವರದ ಜನತೆ ಮಂಗಳೂರನ್ನು ಅವಲಂಬಿಸಲು ಕಾರಣ 40ವರ್ಷಗಳಿಂದ ಮಂಜೇಶ್ವರದಿಂದ ಗೆದ್ದ ಮುಸ್ಲಿಂ ಲೀಗ್ ಶಾಸಕರುಗಳು. ಅಭಿವೃದ್ಧಿ ಎಂಬುದು ಇಲ್ಲಿ ಮರೀಚಿಕೆಯಾಗಿದೆ, ಜನತೆ ವಿದ್ಯಾಭ್ಯಾಸ, ಆರೋಗ್ಯ, ಉದ್ಯೋಗ ಹೀಗೆ ಎಲ್ಲದಕ್ಕೂ ಮಂಗಳೂರನ್ನು ಆಶ್ರಯಿಸಬೇಕಿದೆ. ಇದು ಮಂಜೇಶ್ವರದ ಜನತೆಗೆ ಶಾಸಕರು ಮಾಡುವ ಅವಮಾನವಾಗಿದೆ ಎಂದು ಬಿಜೆಪಿ ಆರೋಪಿಸಿದೆ.
(ಜಾಹೀರಾತು)
ಪವಿತ್ರವಾದ ವಿಧಾನಸಭೆಯಲ್ಲಿ ಶಾಸಕರು ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಲು ಹೇಳಿಕೆ ನೀಡುವುದು ಹಾಸ್ಯಾಸ್ಪದ, ಮಂಜೇಶ್ವರ ಶಾಸಕರ ಬೇಜವಾಬ್ದಾರಿಯುತ ವರ್ತನೆ ಒಪ್ಪುವಂತದಲ್ಲ ಇದು ಖಂಡನೀಯ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹೇಳಿದೆ. ಶಾಸಕರು ಕೋವಿಡ್ ನಿಯಂತ್ರಿಸುವ ಬದಲು ಕರ್ಣಾಟಕಕ್ಕೆ ಬುದ್ದಿ ಹೇಳುವುದು ಯಾವ ಪುರುಷಾರ್ಥಕ್ಕೆ ಎಂದು ಬಿಜೆಪಿ ಪ್ರಶ್ನಿಸಿದೆ.
ವ್ಯಾಕ್ಸಿನೇಷನ್ ಹಾಗೂ ಆರ್ಟಿಪಿಸಿಆರ್ ಟೆಸ್ಟ್ ಸುಗಮಗೊಳಿಸಲು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆಗ್ರಹಿಸಿದೆ.
