ಮಂಜೇಶ್ವರ:- ಎ ಐ ವೈ ಎಫ್ ಮಂಜೇಶ್ವರ ಮಂಡಲ ಸಮಿತಿ ಸಭೆ ಮಜಿಬೈಲ್ ಬ್ಯಾಂಕ್ ನ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಕರ್ನಾಟಕ ರಾಜ್ಯ ಪ್ರವೇಶ ಮಾಡಲು RTPCR ಕಡ್ಡಾಯ ಮಾಡಿದ ಜಿಲ್ಲಾಧಿಕಾರಿಯ ಮನುಷ್ಯತ್ವ ರಹಿತ ವರ್ತನೆಯನ್ನು ಖಂಡಿಸಲಾಯಿತು. ವ್ಯಾಕ್ಸಿನ್ ಪಡೆದ ಎಲ್ಲಾರಿಗೂ ಗಡಿ ಪ್ರವೇಶ ಮಾಡಲು ಅವಕಾಶ ಕೊಡಬೇಕು ಎಂದು AIYF ಒತ್ತಾಯಿಸಿದೆ. ಸಭೆಯ ಅಧ್ಯಕ್ಷತೆ ಯನ್ನು ಎ ಐ ವೈ ಎಫ್ ಮಂಡಲ ಅಧ್ಯಕ್ಷ ದಯಕರ ಮಾಡ ವಹಿಸಿದ್ದರು ಜಿಲ್ಲಾ ಸಮಿತಿಯ ತೀರ್ಮಾನವನ್ನು ಜಿಲ್ಲಾಧ್ಯಕ್ಷ ಬಿಜು ಉನ್ನಿತ್ತಾನ್ ವಿಶದಿಕರಿಸಿದರು ಕಾರ್ಯದರ್ಶಿ ಅಜಿತ್ ಎಂ ಸಿ ಲಾಲ್ ಬಾಗ್ ವರದಿ ಮಂಡಿಸಿದರು ಜಿಲ್ಲಾ ಸಮಿತಿ ಸದಸ್ಯ ಹರೀಶ್ ಕೆ ಆರ್ ಮನು ಪುತ್ತಿಗೆ ಜೆಪಿ ಕುಂಬಳೆ ಮೊದಲಾದವರು ಉಪಸ್ಥಿತರಿದ್ದರು.
ಗಡಿ ಪ್ರವೇಶ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ಮನುಷ್ಯತ್ವ ರಹಿತ ನಡೆಗೆ ಎ ಐ ವೈ ಎಫ್ ತೀವ್ರ ಖಂಡನೆ
August 05, 2021
0
Tags
