(ಜಾಹೀರಾತು)
ಇನ್ನೊಂದು ಕಡೆ ಪ್ರಸಿದ್ಧ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ ಹೊಸ ಧಾರಾವಾಹಿ ‘ಲಕ್ಷಣ’ ಪ್ರಸಾರ ಆಗಲಿದೆ. ಕಪ್ಪು ಮೈಬಣ್ಣವನ್ನು ಬಹುತೇಕರು ಜರಿಯುತ್ತಾರೆ. ಬಿಳಿ ತ್ವಚೆಯ ಮೇಲೆ ಎಲ್ಲರಿಗೂ ವ್ಯಾಮೋಹ. ಅಂಥ ಕಾನ್ಸೆಪ್ಟ್ಗೆ ಸವಾಲೊಡ್ಡುವಂತಹ ಕಥೆಯನ್ನು ‘ಲಕ್ಷಣ’ ಧಾರಾವಾಹಿ ಹೊಂದಿದೆ. ಈ ಸೀರಿಯಲ್ನ ಪ್ರೋಮೋಗಳು ಈಗಾಗಲೇ ಭಾರಿ ನಿರೀಕ್ಷೆ ಹುಟ್ಟುಹಾಕಿವೆ. ಇನ್ನು ಮತ್ತೊಂದು ಧಾರಾವಾಹಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 10 ಗಂಟೆಗೆ ‘ಕನ್ಯಾಕುಮಾರಿ’ ಎಂಬ ಹೊಸ ಸೀರಿಯಲ್ ಪ್ರಸಾರಕ್ಕೆ ಅಣಿಯಾಗಿದೆ. ಈ ಧಾರಾವಾಹಿಯ ಕಥೆ ಏನು ಎಂಬುದನ್ನು ತಿಳಿಸುವಂತಹ ಪ್ರೋಮೋಗಳನ್ನು ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಬಡತನದ ಕುಟುಂಬದಲ್ಲಿರುವ ಕಥಾನಾಯಕ ಚರಣ್ ಒಬ್ಬ ಕ್ಯಾಬ್ ಚಾಲಕ. ಮನೆ ಚಿಕ್ಕದಾದರೂ ಮನೆಯವರ ಪ್ರೀತಿಗೆ ಕೊರತೆ ಇಲ್ಲ. ಕೆಲಸವನ್ನೇ ದೇವರು ಎಂದು ಆತ ನಂಬಿದ್ದಾನೆ. ಅದೇ ರೀತಿ, ದೇವರಿಗಾಗಿ ಯಾವ ಕೆಲಸ ಬೇಕಾದರೂ ಮಾಡ್ತೀನಿ ಎನ್ನುವ ಹುಡುಗಿ ಕನ್ನಿಕಾ. ಒಂದಿನ ಕಥಾನಾಯಕ ಚರಣ್ ಕ್ಯಾಬ್ನಲ್ಲಿ ಕನ್ನಿಕಾ ಕುಳಿತುಕೊಂಡ ಬಳಿಕ ಎಲ್ಲವೂ ಬದಲಾಗಿ ಬಿಡುತ್ತದೆ. ಮುಂದೇನು ಎಂಬುದು ‘ಕನ್ಯಾಕುಮಾರಿ’ ಸೀರಿಯಲ್ನ ಕಥಾಕೌತುಕ. ದಿನದಿಂದ ದಿನಕ್ಕೆ ಕಿರುತೆರೆ ಲೋಕ ದೊಡ್ಡದಾಗುತ್ತಿದೆ. ಯಾವ ಸಿನಿಮಾಗೂ ಕಡಿಮೆ ಇಲ್ಲ ಎಂಬಂತೆ ಧಾರಾವಾಹಿಗಳ ತಾಂತ್ರಿಕ ಗುಣಮಟ್ಟ ಹೆಚ್ಚುತ್ತಿದೆ. ಆ ಕಾರಣ ವಾಹಿನಿಗಳ ನಡುವೆ ಭರ್ಜರಿ ಪೈಪೋಟಿ ಕೂಡ ಇದೆ. ಈಗಾಗಲೇ ಪ್ರೇಕ್ಷಕರ ಮನಗೆದ್ದಿರುವ ಇತರೆ ಧಾರಾವಾಹಿಗಳಿಗೆ ‘ಲಕ್ಷಣ’ ಮತ್ತು ‘ಕನ್ಯಾಕುಮಾರಿ’ ಹೇಗೆ ಸ್ಪರ್ಧೆ ನೀಡುತ್ತವೆ ಎಂಬುದನ್ನು ಕಾದು ನೋಡಬೇಕು.

ಕೃಪೆ : ಅಂತರ್ಜಾಲ