ಪಡುಕುತ್ಯಾರು: ಧನದಿಂದ ಶ್ರೀಮಂತನಾಗುವುದಕ್ಕಿಂತ ವ್ಯಕ್ತಿತ್ವದಿಂದ ಶ್ರೀಮಂತನಾಗುವುದು ಮುಖ್ಯ ಉತ್ತಮ ಸತ್ ಗುಣಗಳನ್ನು ಅಳವಡಿಸಿ ಜೀವನವನ್ನು ರೂಪಿಸಿಕ್ಕೊಳ್ಳಬೇಕು. ಜೀವನದಲ್ಲಿ ದೈನಂದಿನ ನಡೆಯುವ ಒಳ್ಳೆಯ ಕೆಟ್ಟ ಕೆಲಸಗಳ ಆತ್ಮಾವಲೋಕನ ಮಾಡಿ ಆತ್ಮೋದ್ಧಾರ ಮಾಡಿಕ್ಕೊಳ್ಳಬೇಕು ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ನುಡಿದರು.
ಅವರು ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ತಮ್ಮ ಪ್ಲವ ನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯ ವೇಳೆ ಆಶೀರ್ವಚನ ನೀಡುತ್ತಿದ್ದರು. ಕೆಸರಿನಲ್ಲಿ ಹುಟ್ಟಿದ ತಾವರೆ ದೇವರ ಪೂಜೆಗೆ ಸಂದರೆ ನೆಟ್ಟು ಬೆಳೆಸಿದ ಪಾಪಾಸುಕಳ್ಳಿಜಾತಿಯ ಗಿಡದ ಹೂಗಳು ದೇವರ ಪೂಜೆಗೆ ಸಲ್ಲುವುದಿಲ್ಲ. ಯಾವದರ ಹುಟ್ಟಿನಿಂದ ಸಾರ್ಥಕತೆ ನಿರ್ಧರಿಸುವುದಿಲ್ಲ ಬದಲಾಗಿ ಬದುಕುವ ರೀತಿಯಿಂದ ಸಾರ್ಥಕತೆ ನಿರ್ಧರಿಸುತ್ತದೆ. ಇತರರ ಬಾಳಿನಲ್ಲಿ ದೀಪ ಹಚ್ಚಿ ಬೆಳಗಲು ಸಾಧ್ಯವಾಗದೇ ಇದ್ದರೂ ದೀಪ ಆರಿಸುವ ಮನೋಭಾವ ಇರಬಾರದು, ಇತರರ ಬಾಳಿನಲ್ಲಿ ಹೇಗಿರಬೇಕೇಂದು ವಿವರಿಸಿದ ಶ್ರೀಗಳವರು ಸತ್ ಕಾರ್ಯಗಳನ್ನು ಮಾಡುವುದರ ಮೂಲಕ ಮಾನವ ಮಾಧವನಾಗಲು, ನರನು ನಾರಾಯಣನಾಗಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಟಪಾಡಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ್ ನವೀನ್ ಆಚಾರ್ಯ ಪಡುಬಿದ್ರಿ . ಪ್ರಸನ್ನ ಎಸ್ ಎಸ್ ಆಚಾರ್ಯ ಕಾಪು, ಸುರೇಶ್ ಆಚಾರ್ಯ ಇರಂದಾಡಿ, ಶೋಭಾ ಕೆ.ಎನ್ ವೆಂಕಟೇಶ್ ಆಚಾರ್ಯ ಕುಂದಾಪುರ, ಸುಷ್ಮಾ ಶ್ರೀಕಾಂತ ಆಚಾರ್ಯ ಸಾಲಿಗ್ರಾಮ,ಪುರುಷೋತ್ತಮ ಆಚಾರ್ಯ ಮಂಗಳೂರು, ರತನ್ ಕುಮಾರ್ ಆಚಾರ್ಯ ಹೊಸಂಗಡಿ, ಯಾಧವ ಶರ್ಮಾ ಮಂಗಳೂರು, ಹರಿಶ್ಚಂದ್ರ ಆಚಾರ್ಯ ವೇಣೂರು, ರಾಜೇಶ್ ಆಚಾರ್ಯ ಕಾರ್ಕಳ, ಸುಂದರ ಆಚಾರ್ಯ ಪಿಲಾರ್, ಶಾಲಿನಿ ಶಿವರಾಮ ಆಚಾರ್ಯ ಕಟಪಾಡಿ ಅಚ್ಯುತ ಆಚಾರ್ಯ ಕೊಲಕಾಡಿ, ವಾಸುದೇವ ಆಚಾರ್ಯ ಉಡುಪಿ ಇವರು ಗುರುಪಾದುಕಾ ಪೂಜೆಯಲ್ಲಿ ಪಾಲ್ಗೊಂಡರು. ಕಟಪಾಡಿ ಗ್ರಾಮಪಂಚಾಯತ್ ವತಿಯಿಂದ ಶ್ರೀ ಸರಸ್ವತೀ ಗೋಶಾಲೆಗೆ ಮೇವು ಸಮರ್ಪಣೆ ನಡೆಯಿತು.
ಸಮಾರಂಭದಲ್ಲಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಹಾಗೂ ಪ್ರತಿಷ್ಠಾನದ ಅಧ್ಯಕ್ಷರಾದ ವಡೇರಹೋಬಳಿ ಶ್ರೀಧರ ಆಚಾರ್ಯ, ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಗೌರವಾಧ್ಯಕ್ಷ ಪಿ.ವಿ ಗಂಗಾಧರ ಆಚಾರ್ಯ, ಕೋಶಾಧಿಕಾರಿ ಅರವಿಂದ ವೈ.ಆಚಾರ್ಯ ಬೆಳುವಾಯಿ, ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ಪ್ರಧಾನ ಸಂಚಾಲಕ ಬಿ.ಸೂರ್ಯ ಕುಮಾರ್ಆಚಾರ್ಯ ಹಳೆಯಂಗಡಿ, ಆನೆಗುಂದಿ ಗುರುಸೇವಾ ಪರಿಷತ್ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ, ಆನೆಗುಂದಿ ಶ್ರೀ ಸರಸ್ವತೀ ಎಜ್ಯುಕೇಶನಲ್ ಟ್ರಸ್ಟ್ ಅಸೆಟ್ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ಗೋವು ಮತ್ತು ಪರ್ಯಾವರಣ್ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಕರಂಬಳ್ಳಿ ಜಯಕರ ಆಚಾರ್ಯ, ಕಾಯದರ್ಶಿ ಕಾಡಬೆಟ್ಟು ನಾಗರಾಜ ಆಚಾರ್ಯ, ಆಭಿವೃದ್ದಿ ಟ್ಟಸ್ಟ್ ಅಧ್ಯಕ್ಷ ಶಿಲ್ಪಿ ಸತೀಶ್ ಆಚಾರ್ಯ ಕಾರ್ಕಳ, ಎಚ್.ರತ್ನಾಕರ ಆಚಾರ್ಯ ಉದ್ಯಾವರ, ಶ್ರೀ ಸರಸ್ವತೀ ಮಾತೃಮಂಡಳಿ ಅಧ್ಯಕ್ಷೆ ಸಂದ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ಬೆಳುವಾಯಿ ಸುಂದರ ಆಚಾರ್ಯ, ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಎಸ್ ಆಚಾರ್ಯ, ಪಂ.ಸದಸ್ಯರಾದ ಕೆ.ಪ್ರಭಾಕರ ಆಚಾರ್ಯ, ಯತೀಶ್ ,ಶಾಂತಿ ಹಾಗೂ ಪುರೋಹಿತ್ ಶ್ರೀಧರ ಶರ್ಮಾ ಕಟಪಾಡಿ, ಪುರೋಹಿತ್ ಅಕ್ಷಯ ಶರ್ಮಾ ಕಟಪಾಡಿ, ಕೃಷ್ಣಯ್ಯ ಆಚಾರ್ಯ ಉದ್ಯಾವರ, ಸುರೇಶ್ ಆಚಾರ್ಯ ನಿಟ್ಟೆ, ಬೆಳುವಾಯಿ ಸೀತಾರಾಮ ಆಚಾರ್, ಹರೀಶ್ ಆಚಾರ್ಯ, ಸುರೇಶ್ ಆಚಾರ್ಯ ಉಡುಪಿ, ಜನಾರ್ಧನ ಆಚಾರ್ಯ ಉಡುಪಿ, ಬಾಲಕೃಷ್ಣ ಆಚಾರ್ಯ ಬೆಳಪು, ಕಡೇಕಾರ್ ಕೃಷ್ಣ ಆಚಾರ್ಯ, ಹರೀಶ್ ಆಚಾರ್ಯ ಕಾರ್ಕಳ, ಪ್ರಶಾಂತ ಆಚಾರ್ಯ ಕಟಪಾಡಿ, ರಾಘವೇಂದ್ರ ಆಚಾರ್ಯ , ರವಿ ಆಚಾರ್ಯ ಕಾರ್ಕಳ, ದಿನೇಶ್ ಆಚಾರ್ಯ ಪಡುಬಿದ್ರಿ, ಕನ್ಯಾನ ಜನಾರ್ಧನ ಆಚಾರ್ಯ, ಪಿ.ವಿ ಅಚ್ಯುತ ಆಚಾರ್ಯ ಉಡುಪಿ, ಪಿ.ವಿ ರಾಘವೇಂದ್ರ ಆಚಾರ್ಯ ಮಂಚಕಲ್, ಶ್ರೀಧರ ಜೆ ಆಚಾರ್ಯ ಕಟಪಾಡಿ, ಗಣೇಶ್ ಆಚಾರ್ಯ ಕೋಟ, ರಮಾ ಎನ್. ಆಚಾರ್ಯ ಕಾರ್ಕಳ, ಸುಮನಾ ಎಸ್.ಆಚಾರ್ಯ ತ್ರಾಸಿ, ರಮಾ ಎ. ಆಚಾರ್ಯ ಉಡುಪಿ, ಲತಾ ಎಸ್. ಆಚಾರ್ಯ ಕುತ್ಯಾರು, ಗೀತಾಚಂದ್ರ ಆಚಾರ್ಯ, ಸುಜಾತ ಎಸ್. ಆಚಾರ್ಯ ಕಾರ್ಕಳ, ಶಾಲಿನಿ ಆರ್. ಆಚಾರ್ಯ, ಶಾಲಿನಿ ಎಸ್. ಆಚಾರ್ಯ, ಆರ್. ಚಂದ್ರಾವತಿ ಎಸ್.ಆಚಾರ್ಯ, ವಡೇರಹೋಬಳಿ, ಜ್ಯೋತಿ ಆರ್.ಆಚಾರ್ಯ ಉಡುಪಿ.ಆಶಾ ಎನ್.ಆಚಾರ್ಯ ಕಾಡಬೆಟ್ಟು, ಕವಿತಾ ಎಚ್.ಆಚಾರ್ಯ ಕಾರ್ಕಳ, ಯಜ್ಞೇಶ್ವರ ಆಚಾರ್ಯ ಕುತ್ಯಾರು, ವಸಂತ ಆಚಾರ್ಯ ಮಜೂರು ಮುತಾದವರು ಉಪಸ್ಥಿತರಿದ್ದರು. ಮಹಾಸಂಸಂಸ್ಥಾನದ ಆಪ್ತ ಸಹಾಯಕ ಲೋಲಾಕ್ಷ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ರತನ್ ಕುಮಾರ್ ಹೊಸಂಗಡಿ
