ತಲಪಾಡಿ: ಕೇರಳ ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚುತ್ತಿರುವ ಕಾರಣದಿಂದ ನಾಳೆಯಿಂದ(03.08.2021) ತಲಪಾಡಿ ಗಡಿಯಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದೆ.
ಕಾಸರಗೋಡು ಕಡೆಯಿಂದ ಬರುವ ಎಲ್ಲಾ ಬಸ್ಗಳು (ಕೇರಳ ತಲಪಾಡಿ ಮೇಲಿನ ಸ್ಟಾಪ್ ನಲ್ಲಿ) ಕಾಸರಗೋಡು ಜಿಲ್ಲಾಡಳಿತ ನಿರ್ಮಿಸಿರುವ ತಪಾಸಣಾ ಕೇಂದ್ರದವರೆಗೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅಲ್ಲಿಂದ ಪ್ರಯಾಣಿಕರು ಮಂಗಳೂರು ಕಡೆಗೆ ಸುಮಾರು 100 ಮೀಟರ್ ದೂರ ಕಾಲ್ನಡಿಗೆಯಲ್ಲಿ ತೆರಳಬೇಕಾಗಿದ್ದು ಮತ್ತು ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ತಮ್ಮ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಯ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಬಸ್ ಪ್ರಯಾಣಿಕರು ಮಾತ್ರವಲ್ಲದೇ ಇತರ ಯಾವುದೇ ವಾಹನದಲ್ಲಿ ತೆರಳುವವರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಕೊರೋನ ಲಸಿಕೆಯ ಎರಡೂ ಡೋಸ್ ಪಡೆದಿದ್ದರೂ ಪ್ರಯೋಜನವಿಲ್ಲ. ಇದೀಗ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.
ಇದುವರೆಗೆ ದಕ್ಷಿಣ ಕನ್ನಡ ಆರೋಗ್ಯ ಇಲಾಖೆಯ ವತಿಯಿಂದ ಕೆಳಗಿನ ತಲಪಾಡಿ ಗಡಿಯಲ್ಲಿ ನಡೆಸಲಾಗುತ್ತಿದ್ದ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ಕೇಂದ್ರವನ್ನು ಇಂದು ರಾತ್ರಿ ತೆರವುಗೊಳಿಸಲಾಗಿದೆ. ಅಲ್ಲದೇ ಅದಕ್ಕಾಗಿ ನಿರ್ಮಿಸಿದ ಚಪ್ಪರವನ್ನು ತೆಗೆದು ರಾಷ್ಟ್ರೀಯ ಹೆದ್ದಾರಿಯ ಮದ್ಯದಲ್ಲಿ ನಿರ್ಮಿಸಲಾಗುತ್ತಿದೆ. ಈಗ ನೂತನವಾಗಿ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ನಿರ್ಮಿಸಲಾಗುತ್ತಿರುವ ಚಪ್ಪರದಲ್ಲಿ ನಾಳೆಯಿಂದ ಕೇವಲ ತಪಾಸಣಾ ಕಛೇರಿಯನ್ನು ತೆರೆಯಲು ತೀರ್ಮಾನಿಸಲಾಗಿದೆ. ಇನ್ನು ಮಂಗಳೂರು ಕಡೆಯಿಂದ ತಲಪಾಡಿಗೆ ಬರುವ ಖಾಸಗಿ ಬಸ್ಗಳು ಟೋಲ್ಗೇಟ್ ವರೆಗೆ ಮಾತ್ರ ಬರಲು ಅವಕಾಶವಿದ್ದು ಅಲ್ಲಿಂದ ಪ್ರಯಾಣಿಕರು ಇಳಿದು 100 ಮೀಟರ್ ದೂರ ಕಾಲ್ನಡಿಗೆಯಲ್ಲಿ ಮೇಲಿನ ಕೇರಳ ತಲಪಾಡಿಯ ಬಸ್ ತಂಗುದಾಣಕ್ಕೆ ನಡಕೊಂಡೆ ಬರಬೇಕಾಗಿದೆ. ಅಲ್ಲಿರುವ ಕಾಸರಗೋಡು ಕಡೆಗೆ ಬರುವ ಬಸ್ಸನ್ನು ಏರಬೇಕಾಗಿದೆ.
ಮೊಬೈಲ್ ಆರ್ಟಿಪಿಸಿಆರ್ ಕೇಂದ್ರ ತೆರಯಲು ತೀರ್ಮಾನ :
ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಇದುವರೆಗಿದ್ದ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ಕೇಂದ್ರವನ್ನು ತೆರವುಗೊಳಿಸಿದ ಬೆನ್ನಲ್ಲೇ ನಾಳೆಯಿಂದ ಕಾಸರಗೋಡು ಜಿಲ್ಲಾಡಳಿತವು ಮೊಬೈಲ್ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ಕೇಂದ್ರವನ್ನು ಮೇಲಿನ ತಲಪಾಡಿಯಲಿ ತೆರೆಯಲು ತೀರ್ಮಾನಿಸಿದೆ. ಅಲ್ಲದೇ ನಾಳೆಯಿಂದ ಕಾಸರಗೋಡು ಜಿಲ್ಲೆಯ ಕೆಲವು ಪಂಚಾಯತ್ಗಳಲ್ಲಿ ವಾರ್ಡ್ ಮಟ್ಟದಲ್ಲಿ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಿದ್ದು, ಅವಶ್ಯಕತೆ ಇರುವವರು ಈ ಉಚಿತ ಆರ್.ಟಿ.ಪಿ.ಸಿ.ಆರ್ ಶಿಬಿರದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ವಾರ್ಡ್ ಮಟ್ಟದಲ್ಲಿ ನಡೆಸುವ ಈ ಶಿಬಿರದ ಮಾಹಿತಿಗೆ ಆಶಾ ಕಾರ್ಯಕರ್ತರು ಅಥವ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಬಹುದು.
ಕೆಳಗಿನ ತಲಪಾಡಿಯಲ್ಲಿ ಇದೀಗ ಸಂಜೆಯಿಂದಲೇ ರಾಷ್ಟ್ರೀಯ ಹೆದ್ದಾರಿ ಮಧ್ಯೆ ತಪಾಸಣೆಗಾಗಿ ಬೃಹತ್ ಚಪ್ಪರವನ್ನು ನಿರ್ಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ತಲಪಾಡಿ ಪರಿಸರದ ಎಲ್ಲಾ ರಸ್ತೆಯನ್ನ ಹಾಗೂ ಕಾಲುದಾರಿಯನ್ನ ಮತ್ತು ಗಡಿಗೆ ಹೊಂದಿಕೊಂಡಿರುವ ಎಲ್ಲಾ ರಸ್ತೆಗೆ ಕಬ್ಬಿಣದ ಬ್ಯಾರಿಕೆಡ್ ಅಳವಡಿಸಲಾಗಿದೆ. ಅಲ್ಲದೇ ಮಂಗಳೂರು ಸಿಟಿ ಪೊಲೀಸ್ ಕಮಿಷನರ್ ಎಂ. ಶಶಿ ಕುಮಾರ್ ರ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ರ ಪಡೆ ಬೀಡು ಬಿಟ್ಟಿದ್ದು, ಇಂದಿನಿಂದ ದಿನದ 24 ಗಂಟೆಯೂ ಕೂಡಾ ಆರ್.ಟಿ.ಪಿ.ಸಿ.ಆರ್ ನೆಗಟಿವ್ ಸರ್ಟ್ ಪಿಕೆಟ್ ಇಲ್ಲದೇ ಕರ್ನಾಟಕ ಪ್ರವೇಶಿಸಲು ಸಾಧ್ಯವಿಲ್ಲ.
ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ :
ನಾಳೆಯಿಂದ ಆಗಸ್ಟ್ 17 ರ ತನಕ ನಡೆಯಲಿರುವ ಪದವಿ ಪರೀಕ್ಷೆ ಬರೆಯುವ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಇವರು ಆರ್.ಟಿ.ಪಿ.ಸಿ.ಆರ್ ನೆಗಟಿವ್ ವರದಿ, ಪರೀಕ್ಷೆಯ ಹಾಲ್ ಟಿಕೆಟ್, ಕಾಲೇಜಿನ ಗುರುತು ಚೀಟಿಯ ಕಾರ್ಡ್ ನ್ನು ತೋರಿಸಿ ತೆರಳಬಹುದಾಗಿದೆ.
ನೇರ ಚಿತ್ರ ಸಹಿತ ಇದೀಗಿನ ವಿಶೇಷ ವರದಿ:-
ರತನ್ ಕುಮಾರ್ ಹೊಸಂಗಡಿ.
