ಭಾರತ ಮತ್ತು ಆಂಗ್ಲರ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು ಈಗ 4 ನೆಯ ಟೆಸ್ಟ್ ಸರಣಿ ನಡೆಯುತ್ತಿದೆ ಮೊದಲ ಹಂತದಲ್ಲಿ 191 ರನ್ನಿಗೆ ಭಾರತ ತನ್ನ ಎಲ್ಲಾ ವಿಕೆಟ್ ಆಂಗ್ಲರಿಗೆ ಒಪ್ಪಿಸಿ ಅವರನ್ನು ಬ್ಯಾಟಿಂಗ್ ಮಾಡಲು ಬಿಟ್ಟುಕೊಟ್ಟಿದೆ.ಆದರೆ ಆಂಗ್ಲರು 290 ರನ್ನಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿ ಮತ್ತೊಮ್ಮೆ ಭಾರತಕ್ಕೆ ಆಡಲು ಬಿಟ್ಟುಕೊಟ್ಟು ಈಗ ಭಾರತ ತಂಡದ ರನ್ 108/1. ಕೆ.ಎಲ್ ರಾಹುಲ್ ಅವರ ಉತ್ತಮ ಆಟಕ್ಕೆ ಜೇಮ್ಸ್ ಆಂಡರ್ಸನ್ ಬೀಸಿದ ಬಲೆಗೆ ಜೋನಿ ಬಾರಿಸ್ಟ್ರೌ ಅವರ ಹಿಡಿದ ಕ್ಯಾಚಿಗೆ ಕೇವಲ 46 ರನ್ನಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಜವಾಬ್ದಾರಿಯುತ ಆಟವನ್ನು ಆಡುತ್ತಿರುವ ರೋಹಿತ್ ಶರ್ಮಾ 131 ಚೆಂಡು ಎದುರಿಸಿ 47 ರನ್ ಮಾಡಿದರೆ ಟೆಸ್ಟ್ ಸ್ಪೆಷಲಿಸ್ಟ್ ಚೇತಶ್ವರ ಪೂಜಾರ 21 ಚೆಂಡು ಎದುರಿಸಿ 14 ರನ್ ಮಾಡಿ ಕ್ರೀಸ್ನಲ್ಲಿದ್ದಾರೆ.
