ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 4ನೆಯ ಟೆಸ್ಟ್ ಪಂದ್ಯ ಬಹಳ ರೋಮಾಂಚಕಾರಿಯಾಗಿ ಮುಕ್ತಾಯಗೊಂಡಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದ ಇಂಗ್ಲೆಂಡ್ ಭಾರತಕ್ಕೆ ಬ್ಯಾಟಿಂಗ್ ಬಿಟ್ಟುಕೊಟ್ಟು ಭಾರತವು ಮೊದಲ ಇನ್ನಿಂಗ್ಸ್ ಆಡಿ 191 ರನ್ನಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು ಆನಂತರ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 290 ಕ್ಕೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಇನ್ನಿಂಗ್ಸ್ ಮುಗಿಸಿತು. ಎರಡನೆಯ ಇನ್ನಿಂಗ್ಸ್ ಆರಂಭಿಸಿದ ಭಾರತವು ಭರ್ಜರಿ ಪ್ರದರ್ಶನ ನೀಡಿ ಕೆ.ಎಲ್ ರಾಹುಲ್ 46, ರೋಹಿತ್ ಶರ್ಮಾ 127 ರನ್ ಮಾಡಿದರೆ ಚೇತಾಶ್ವರ ಪೂಜಾರ 61,ವಿರಾಟ್ ಕೊಹ್ಲಿ 44,ಶಾರ್ದುಲ್ ಟಾಕೂರ್ 60, ರಿಷಭ್ ಪಂತ್ 50 ರನ್ ಮಾಡಿ ಅಪಾಯದಿಂದ ದೂರ ಮಾಡುವಲ್ಲಿ ಯಶಸ್ವಿಯಾದರು.ಭಾರತವು ಎರಡನೆಯ ಇನ್ನಿಂಗ್ಸ್ ಅನ್ನು 466 ಸರ್ವ ಪತನಗೊಂಡಿತು.ಆನಂತರ ಇಂಗ್ಲೆಂಡಿಗೆ ಭಾರತದ ಎದುರು ಜಯಗೊಳಿಸಲು 368 ರನ್ ಬೇಕಾಗಿತ್ತು.ಇದನ್ನು ಬೆನ್ನತ್ತಿ ಹೋದ ಇಂಗ್ಲೆಂಡ್ ಕೇವಲ 210 ರನ್ ಮಾಡಿ ಸರ್ವ ಪತನಗೊಂಡು ಭಾರತದ ಎದುರು ಶರಣಾಗತಿಯಾಯಿತು. ಹಸೀಬ್ ಹಮೀದ್ 63,ರೋರಿ ಜೋಸೆಫ್ ಬರ್ನ್ 50 ಮಾತ್ರ ಹೆಚ್ಚಿನ ರನ್ ಮಾಡಲು ಪ್ರಯತ್ನಿಸಿದರು ಬಿಟ್ಟರೆ ಬೇರೆ ಎಲ್ಲಾ ಆಟಗಾರರು ಭಾರತದ ಬೌಲರ್ ಗಳ ಎದುರು ಮಂಡಿಯೂರಿ ಶರಣಾದರು.ಭಾರತವು 157 ರನ್ ಭರ್ಜರಿ ಜಯ ಸಾಧಿಸಿ ಗೆಲುವಿನ ಲಕ್ಷ್ಮಿಯನ್ನು ತನ್ನಲ್ಲಿ ಉಳಿಸುವಲ್ಲಿ ಯಶಸ್ವಿಯಾದರು. ಎರಡನೆಯ ಇನ್ನಿಂಗ್ಸ್ ನಲ್ಲಿ ಉಮೇಶ್ ಯಾದವ್ 60 ರನ್ ಕೊಟ್ಟು 3 ವಿಕೆಟ್ ಪಡೆದರೆ, ಶಾರ್ದುಲ್ ಟಾಕೂರ್ 20 ರನ್ ಕೊಟ್ಟು 2 ವಿಕೆಟ್ ಪಡೆದರೆ, ಜಸ್ಪ್ರಿತ್ ಬೂಮ್ರ 27 ರನ್ ಕೊಟ್ಟು 2 ವಿಕೆಟ್ ಪಡೆದರೆ ರವೀಂದ್ರ ಜಡೇಜಾ 50 ರನ್ನು ಕೊಟ್ಟು 2 ವಿಕೆಟ್ ಪಡೆದು ಭರ್ಜರಿ ಜಯದಲ್ಲಿ ಪಾಲು ಪಡೆದಿದ್ದಾರೆ.
4 ಟೆಸ್ಟ್ ಪಂದ್ಯದಲ್ಲಿ 2 ಟೆಸ್ಟ್ ಭಾರತ ಮೇಲುಗೈ ಸಾಧಿಸಿ ಇಂಗ್ಲೆಂಡ್ ತಂಡವು 1 ಜಯ ಸಾಧಿಸಿದರೆ 1 ಪಂದ್ಯ ಡ್ರಾ ಆಗಿದೆ. ಮುಂದಿನ 5ನೇ ಟೆಸ್ಟ್ ಪಂದ್ಯ ಭಾರಿ ಕುತೂಹಲ ಮೂಡಿಸಿದೆ.
ವರದಿ : ಮನೋಜ್ ಕುಲಾಲ್ ಕೊಡಕ್ಕಲ್
ಚಿತ್ರಗಳು : ಅಂತರ್ಜಾಲ


