ಕಾಸರಗೋಡು ಜಿಲ್ಲೆಯ ವಿವಿಧೆಡೆ ಶ್ರೀ ಗಣೇಶೋತ್ಸವ | ಸಂಭ್ರಮದ ಆಚರಣೆಗೆ ಕೊರೋನ ಅಡ್ಡಿ
September 10, 2021
0
ಹೊಸಂಗಡಿ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಯ್ಯಪ್ಪ ಕ್ಷೇತ್ರ ಹೊಸಂಗಡಿ ಇದರ ಆಶ್ರಯದಲ್ಲಿ ನಡೆಯುತ್ತಿರುವ 41ನೇ ವರ್ಷದ "ಮಂಜೇಶ್ವರ ಶ್ರೀ ಗಣೇಶೋತ್ಸವ"ದಲ್ಲಿ ಪೂಜಿಸಲ್ಪಡುವ ಶ್ರೀ ಮಹಾಗಣಪತಿ. ಕಾರ್ಯಕ್ರಮಗಳು ಇಂದಿನಿಂದ ಪ್ರಾರಂಭವಾಗಿದ್ದು 13.09.2021ನೇ ಸೋಮವಾರದ ವರೆಗೆ ಕೋವಿಡ್ ಮಾನದಂಡಗಳನ್ನುಅನುಸರಿಸಿಕೊಂಡು ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಸೋಮವಾರದಂದು ಅಪರಾಹ್ನ 3ಗಂಟೆಗೆ ಧ್ವಜವತರಣ, ವಿಸರ್ಜನಾ ಮೆರವಣಿಗೆ ಹೊರಟು ಸಂಜೆ 6.30ಕ್ಕೆ ಕಣ್ವತೀರ್ಥ ಶ್ರೀ ರಾಮ ಸಮುದ್ರದಲ್ಲಿ ವಿಗ್ರಹದ ಜಲ ಸ್ತಂಭನ ಕಾರ್ಯಕ್ರಮ ನಡೆಯಲಿದೆ.
