ವರದಿ : ಪ್ರದೀಪ್ ಜಿ ಕಾಶಿಪಟ್ಣ
ಕಾಶಿಪಟ್ಣ ಉಚಿತ ಕೊರೋನ ಲಸಿಕಾ ಕಾರ್ಯಕ್ರಮ | ನೂರಾರು ಮಂದಿಗೆ ಲಸಿಕೆ
September 01, 2021
0
ಕಾಶಿಪಟ್ಣ: ಕಾಶಿಪಟ್ಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಉಚಿತ ಕೊರೋನ ಲಸಿಕಾ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಬೆಳ್ತಂಗಡಿ ಕ್ಷೇತ್ರ ಶಾಸಕರಾದ ಶ್ರೀ ಹರೀಶ್ ಪೂಂಜರವರ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆ ಮಾಡಿದರು. ವೇದಿಕೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರಾದ ಜಯಂತ್ ಕೊಟ್ಯಾನ್, ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಅನಂತ ಅಸ್ರಣ್ಣ, ತಾಲ್ಲೂಕಿನ ಆರೋಗ್ಯಾಧಿಕಾರಿ ಕಲಾಮಧು, ಪಂಚಾಯತ್ ಅಧ್ಯಕ್ಷರಾದ ಶಿಲ್ಪಾ ಎ, ಆರೋಗ್ಯಧಿಕಾರಿ ದೀಕ್ಷಿತಾ, ಪಂಚಾಯತ್ ಉಪಾಧ್ಯಕ್ಷರು ಸತೀಶ್ ಕೆ, ಪಂಚಾಯತ್ ಸದಸ್ಯರಾದ ಶ್ರೀ ಅಶೋಕ್ ಕುಮಾರ್ ಜೈನ್ ಹಾಗೂ ರವೀಂದ್ರ ಪಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಆಶಾಲತ ಮತ್ತು ಪಕ್ಷದ ಕಾರ್ಯಕರ್ತರು ಊರಿನ ನಾಗರಿಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Tags
