ವರದಿ : ರತನ್ ಕುಮಾರ್ ಹೊಸಂಗಡಿ
ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ಶ್ರೀ ನವೀನ್ ರಾಜ್ ಕೆ.ಜೆ ಯವರ ಜನುಮ ದಿನದ ಅಂಗವಾಗಿ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನುಮ ದಿನವನ್ನ ಜತೆಗೂಡಿ ಆಚರಿಸುವ ನಿಟ್ಟಿನಲ್ಲಿ ಸೇವಾಶ್ರಮಗಳಿಗೆ ತೆರಳಿ ನಿತ್ಯೋಪಯೋಗಿ ಆಹಾರ ಸಾಮಾಗ್ರಿಗಳ ಹಸ್ತಾಂತರ
September 17, 2021
0
ಮಂಜೇಶ್ವರ:- ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ರಂಗದ ಹರಿಕಾರ ನ್ಯಾಯವಾದಿ ಶ್ರೀ ನವೀನ್ ರಾಜ್ ಕೆ.ಜೆ ಯವರ ಜನುಮ ದಿನದ ಅಂಗವಾಗಿ ದೇಶದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜನುಮ ದಿನವನ್ನ ಜತೆಗೂಡಿ ಆಚರಿಸುವ ನಿಟ್ಟಿನಲ್ಲಿ ದೈಗೋಳಿಯ ಶ್ರೀ ಸತ್ಯಸಾಯಿ ಸೇವಾಶ್ರಮಕ್ಕೆ ತೆರಳಿ ನಿತ್ಯೋಪಯೋಗಿ ಆಹಾರ, ಸಾಮಾಗ್ರಿ ವಸ್ತುಗಳನ್ನು ನೀಡಲಾಯಿತು. ಈ ವೇಳೆ ಆಶ್ರಮದ ರೂವಾರಿ ಡಾ. ಉದಯ ಭಟ್ ಹಾಗೂ ಆಶ್ರಮದ ಸಿಬ್ಬಂದಿಗಳು ಜನುಮ ದಿನಕ್ಕೆ ಶುಭ ಹಾರೈಸಿ, ಕೊಡ ಮಾಡಿದ ವಸ್ತುಗಳನ್ನು ಕೃತಜ್ಞತಾ ಪೂರ್ವಕ ಸ್ವೀಕರಿಸಿದರು. ಬಳಿಕ ಬದಿಯಡ್ಕ ಕನ್ನಿಪ್ಪಾಡಿಯಲ್ಲಿರುವ ಆಶ್ರಯ ಆಶ್ರಮಕ್ಕೆ ತೆರಳಿದ ನ್ಯಾಯವಾದಿ ನವೀನ್ ರಾಜ್ ಕೆ. ಜೆ ಯವರು ನಿತ್ಯೋಪಯೋಗಿ ಆಹಾರ ಸಾಮಾಗ್ರಿಗಳನ್ನು ನೀಡಿ, ಆಶ್ರಮದ ರೂವಾರಿ ಶ್ರೀ ಗಣೇಶ್ ಕೃಷ್ಣ ಅಳಕ್ಕೆಯವರನ್ನ ಶಾಲು ಹೊದಿಸಿ, ಫಲಫುಷ್ಪಗಳನ್ನ ನೀಡಿ ಇವರ ಸೇವಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಭಾರತೀಯ ರೈಲ್ವೆ ಮಾಜ್ದೂರು ಸಂಘ ಪಾಲಕ್ಕಾಡ್ ವಿಭಾಗದ ಅಧ್ಯಕ್ಷರಾದ ತುಳಸಿದಾಸ್ ಮಂಜೇಶ್ವರ, ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಕಾರ್ಯದರ್ಶಿ ಯಶ್ ರಾಜ್ ಉದ್ಯಾವರ, ಛಾಯಾಗ್ರಾಹಕ ದೀಪಕ್ ರಾಜ್ ಉಪ್ಪಳ ಮೊದಲಾದವರು ಉಪಸ್ಥಿತರಿದ್ದರು.
Tags
