ಮಂಜೇಶ್ವರ:- ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನುಮ ದಿನದ ಅಂಗವಾಗಿ ಮಂಜೇಶ್ವರ ಗ್ರಾಮ ಪಂಚಾಯತ್ನ 15ನೇ ವಾರ್ಡ್ ಗುಡ್ಡೆಕ್ಕೇರಿ ವಾರ್ಡ್ನ ಬಿಜೆಪಿ 24 ನೇ ಬೂತ್ ಸಮಿತಿ ವತಿಯಿಂದ ಇಂದು ಸಂಜೆ ಕಾರ್ಯಕ್ರಮ ನಡೆಯಿತು.
ಮಹಿಳಾ ಮೋರ್ಚಾ ಜಿಲ್ಲಾ ಕೋಶಾಧಿಕಾರಿ ಶ್ರೀಮತಿ ನಿಶಾ ಭಟ್ ರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ನರೇಂದ್ರ ಮೋದಿಯವರ ಜತೆ ತಮ್ಮ ಜನುಮ ದಿನವನ್ನು ಕೂಡಾ ಆಚರಿಸುತ್ತಿರುವ ಓಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾ. ನವೀನ್ ರಾಜ್ ಕೆ.ಜೆ ಯವರನ್ನ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಕಾರ್ಯದರ್ಶಿ ಯಶ್ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೈಲ್ವೇ ಮಾಜ್ದೂರು ಸಂಘ ಪಾಲಕ್ಕಾಡ್ ವಿಭಾಗದ ಅಧ್ಯಕ್ಷರಾದ ತುಳಸಿದಾಸ್ ಮಂಜೇಶ್ವರ, ಬಿಜೆಪಿ ಮಂಜೇಶ್ವರ ಪಂಚಾಯತ್ ಕಾರ್ಯದರ್ಶಿ ಯಶ್ ರಾಜ್ ಉದ್ಯಾವರ ಹಾಗೂ ಬೂತ್ ನ ಕಾರ್ಯಕರ್ತೆಯರು, ಮಾತೆಯರು ಉಪಸ್ಥಿತರಿದ್ದರು.
