ಮಂಜುಶ್ರೀ ನ್ಯೂಸ್ ಕಾಸರಗೋಡು
ನಮ್ಮ ಬ್ಯೂರೋ ವರದಿ
ಕಾಸರಗೋಡು:- ನಗರದ ಎಸ್.ವಿ ಟಿ ರಸ್ತೆಯಲ್ಲಿರುವ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ "ಷಷ್ಟ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ 60" ಕಾಸರಗೋಡು ವಲಯ ಸಮಿತಿಯ ಸಮಾರೋಪ ಸಮಾರಂಭ ಮತ್ತು ಪಂಚಮ ಕಾಸರಗೋಡು ಯಕ್ಷೋತ್ಸವ ಕಾರ್ಯಕ್ರಮ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಇಂದು ಬೆಳಗ್ಗೆ ನಡೆಯಿತು.
ಕಾಸರಗೋಡು:- ನಗರದ ಎಸ್.ವಿ ಟಿ ರಸ್ತೆಯಲ್ಲಿರುವ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪರಮಪೂಜ್ಯ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರ "ಷಷ್ಟ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ 60" ಕಾಸರಗೋಡು ವಲಯ ಸಮಿತಿಯ ಸಮಾರೋಪ ಸಮಾರಂಭ ಮತ್ತು ಪಂಚಮ ಕಾಸರಗೋಡು ಯಕ್ಷೋತ್ಸವ ಕಾರ್ಯಕ್ರಮ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ವ್ಯಾಸ ಮಂಟಪದಲ್ಲಿ ಇಂದು ಬೆಳಗ್ಗೆ ನಡೆಯಿತು.
ಕಾರ್ಯಕ್ರಮದಂಗವಾಗಿ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಾಂಗಳವರು ಹಾಗೂ ಒಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಗಳವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಭಕ್ತಿಪೂರ್ವಕವಾಗಿ ಶ್ರೀ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಯಿತು.
ಬಳಿಕ ನಡೆದ ಸಮಾರಂಭದಲ್ಲಿ ಯತಿವರ್ಯರು ದೀಪ ಪ್ರಜ್ವಲಿಸಿ, ಕಲ್ಪವೃಕ್ಷದ ಹೂವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಗಾಟಿಸಿ, ನಾಂದಿ ಹಾಡಿ, ನೆರೆದ ಭಕ್ತರಿಗೆ ಶುಭಾಶೀರ್ವಚನವಿತ್ತರು.
60 ನೇ ಷಷ್ಟ್ಯಬ್ದ ವನ್ನು ಪೂರೈಸುತ್ತಿರುವ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಗಳವರನ್ನು ಕಾಸರಗೋಡು ವಲಯ ಸಮಿತಿ ವತಿಯಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಫಲಪುಷ್ಪ, ಸ್ಮರಣಿಕೆ ನೀಡಿ ಭಕ್ತಿ ಭಾವದಿಂದ ಗುರುವಂದನಾ ಕಾರ್ಯವನ್ನ ನೆರವೇರಿಸಿದರು.
ಈ ವೇಳೆ ವೇದಿಕೆಯಲ್ಲಿ ಧಾರ್ಮಿಕ ಮುಂದಾಳು, ಕಾರ್ಯಕ್ರಮದ ಸಂಯೋಜಕರು, ಷಷ್ಟ್ಯಬ್ದ ಕಾಸರಗೋಡು ವಲಯ ಸಮಿತಿ ಅಧ್ಯಕ್ಷರಾದ ಕೆ.ಎನ್ ವೆಂಕಟ್ರಮಣ ಹೊಳ್ಳ, ಧಾರ್ಮಿಕ ಮುಂದಾಳು, ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಬ್ರಹ್ಮ ಶ್ರೀ ರವೀಶ್ ತಂತ್ರಿ ಕಾಸರಗೋಡು, ಷಷ್ಟ್ಯಬ್ದ ಸಮಿತಿ ಕಾಸರಗೋಡು ವಲಯ ಗೌರವಾಧ್ಯಕ್ಷ ನ್ಯಾ. ಶ್ರೀ ಕಾಂತ್ ಕಾಸರಗೋಡು, ಕಾರ್ಯಧ್ಯಕ್ಷರಾದ:- ಜಯಾನಂದ ಹೊಸದುರ್ಗ, ಪ್ರಧಾನ ಕಾರ್ಯದರ್ಶಿ:- ಶಿವರಾಮ ಕಾಸರಗೋಡು, ಕಾಸರಗೋಡು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾದ ಕೆ.ಟಿ.ಸುಬ್ರಹ್ಮಣ್ಯನ್, ಯಕ್ಷ ನಾಟ್ಯಗುರು ರಾಕೇಶ್ ರೈ ಅಡ್ಕ, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭಾಶಂಸನೆಗೈದರು.
ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ ಸುಂದರಕೃಷ್ಣ ಮಧೂರು ಹಾಗೂ ಯಕ್ಷನಾಟ್ಯಗುರು ರಾಕೇಶ್ ರೈ ಅಡ್ಕ ಇವರನ್ನು ಸ್ವಾಮಿಜಿಗಳವರು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ, ನೀಡಿ ಕಾಸರಗೋಡು ಯಕ್ಷೋತ್ಸವ ಪ್ರಯುಕ್ತ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಹಾಡಿದರು. ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದ ತಂತ್ರಿವರ್ಯ, ಕ್ಷೇತ್ರದ ಆನುವಂಶಿಕ ಮೊಕ್ತೇಸರರಾದ ಬ್ರಹ್ಮ ಶ್ರೀ ಉಳಿಯತ್ತಾಯ ವಿಷ್ಣು ಆಸ್ರರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿ, ವಾರ್ಡ್ ಸದಸ್ಯೆ ಶ್ರೀಲತಾ ಟೀಚರ್ ಹಾಗೂ ಜಗದೀಶ್ ಕೂಡ್ಲು ಸನ್ಮಾನಿತರ ಹಾಗೂ ಗೌರವಾಭಿನಂದನೆಯ ಸನ್ಮಾನ ಪತ್ರ ವಾಚಿಸಿ, ಪತ್ರಕರ್ತರಾದ ವಿ.ಜೀ ಕಾಸರಗೋಡು ಕಾರ್ಯಕ್ರಮ ನಿರೂಪಿಸಿ, ಷಷ್ಟ್ಯಬ್ದ ಸಮಿತಿ ಕಾಸರಗೋಡು ವಲಯದ ಸಂಘಟನಾ ಕಾರ್ಯದರ್ಶಿ ಗುರುಪ್ರಸಾದ್ ಕೋಟೆಕಣಿ ವಂದಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನಾಟ್ಯಗುರು ಶ್ರೀ ರಾಕೇಶ್ ರೈ ಅಡ್ಕ ಇವರ ನಿರ್ದೇಶನದಲ್ಲಿ ತನ್ನ ಶಿಷ್ಯ ವೃಂದದವರಿಂದ ಮಹಿಷಮರ್ಧಿನಿ ಕಥಾಪ್ರಸಂಗದ ಯಕ್ಷಗಾನ ನಡೆಯಿತು.
ವರದಿ : ರತನ್ ಕುಮಾರ್ ಹೊಸಂಗಡಿ
ಚಿತ್ರಗಳು : ಶ್ರೀಕಾಂತ್ ಕಾಸರಗೋಡು
