ಖ್ಯಾತ ಮಲಯಾಳಂ ಚಲನಚಿತ್ರ ನಟ ನೆಡುಮುಡಿ ವೇಣು ಇನ್ನಿಲ್ಲ
October 11, 2021
0
ತಿರುವನಂತಪುರ : ಖ್ಯಾತ ಮಲಯಾಳಂ ಚಲನಚಿತ್ರ ನಟ ನೆಡುಮುಡಿ ವೇಣು (73) ಹೊಟ್ಟೆ ಸಬಂದಿತ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ತಿರುವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅವರು, 1978 ರಲ್ಲಿ ಜಿ. ಅರವಿಂದನ್ ಅವರ "ತಂಬು" ಚಿತ್ರದ ಮೂಲಕ ಮಲಯಾಳಂ ಚಲನಚಿತ್ರ ಲೋಕಕ್ಕೆ ಕಾಲಿರಿಸಿದರು. ಅವರು ತನ್ನ 40 ವರುಷಗಳ ಸುಧೀರ್ಘ ಚಲನಚಿತ್ರ ವೃತ್ತಿಜೀವನದಲ್ಲಿ ಮಲಯಾಳಂ ಚಿತ್ರಗಳಲ್ಲಿ ಅನೇಕ ಬಹುಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. 500 ಚಲನಚಿತ್ರಗಳಲ್ಲಿ ನಟಿಸಿದ ಇವರಿಗೆ 3 ರಾಷ್ಟ್ರೀಯ ಪ್ರಶಸ್ತಿ ಒಲಿದಿತ್ತು.
