ದಕ್ಷಿಣ ಕನ್ನಡ ಜಿಲ್ಲೆಯ ನಂದಿನಿ ನದಿ ದಂಡೆ ಮೇಲೆ
ಶ್ರೀ ದುರ್ಗಾ ಪರಮೇಶ್ವರಿ ದೇವಿ ವಿರಾಜಮಾನಳಾ
ಗಿದ್ದಾಳೆ. ನಂದಿನಿ ನದಿ ಪುಟ್ಟ ದ್ವೀಪದಂತಿದೆ.
ಮಂಗಳೂರಿನಿಂದ 25 ಕಿ.ಮಿ ದೂರದಲ್ಲಿದೆ.
ನಂದಿನಿ ದುರ್ಗಾ ಪರಮೇಶ್ವರಿ ದೇವಿ ಪಾರ್ವತಿಯ ಅವತಾರ ರೂಪ. ಇದು ಶಕ್ತಿ
ಕೇಂದ್ರವಾಗಿದೆ.
ವಿಶೇಷ ದಿನಗಳಂದು ಇಲ್ಲಿ ಚಂಡಿಹೋಮ, ತುಲಾ
ಭಾರ, ವೇದ ಪಾರಯಣ, ಸೇರಿದಂತೆ ಅನೇಕ
ಧಾರ್ಮಿಕ ಕಾರ್ಯಗಳು ನಡೆಯುತ್ತವೆ.ಕಾರ್ತಿಕ
ಮಾಸದಲ್ಲಿ ಲಕ್ಷದೀಪೋತ್ಸವ, ನವರಾತ್ರಿ ಉತ್ಸವ
ಸಡಗರದಿಂದ ನಡೆಯುತ್ತವೆ.
ಎಪ್ರೀಲ ತಿಂಗಳಲ್ಲಿ ನಡೆಯುವ ಜಾತ್ರೆ ವಿಶೇಷವಾ
ಗಿರುತ್ತದೆ .08 ದಿನಗಳೂ ಚಿನ್ನದ ರಥೋತ್ಸವ
ನೆರವೇರುತ್ತದೆ.
" ಅನ್ನದಾನ ಸೇವೆ, ವಿದ್ಯಾದಾನ ಸೇವೆ,
ಯಕ್ಷಗಾನ ಸೇವೆಗೆ ಪ್ರಸಿದ್ಧವಾಗಿದೆ.
ಶುಂಭ - ನಿಶುಂಭರ ಸಂಹಾರದ ನಂತರ, ಅರುಣಾಸುರನು ಬಲಾಡ್ಯನಾಗುತ್ತಾನೆ.
ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ " ತ್ರಿಮೂರ್ತಿ
ಗಳಿಂದಾಗಲಿ, ದೇವತೆಗಳಿಂದಾಗಲಿ , ಪುರುಷ
ಅಥವಾ ಸ್ತ್ರೀಯಿಂದಾಗಲಿ , ಚತುಷ್ಪಾದ, ಷಟ್ಪಾದ
ಗಳಿಂದಾಗಲಿ, ಮರಣ ಬಾರದಂತೆ ವರ ಬೇಡಿದನು.
ಬ್ರಹ್ಮ ದೇವರು ವರನೀಡಿದರು.ಹಾಗೆಯೇ
ಸರಸ್ವತಿ ದೇವಿಯು " ಗಾಯತ್ರಿ ಮಂತ್ರ" ವನ್ನು
ಅರುಣಾಸುರನಿಗೆ ಉಪದೇಶಿಸಿದ್ದಳು.
ಹೀಗಾಗಿ ತಾನೇ ಶ್ರೇಷ್ಟ , ತಾನೇ ದೇವರೆಂದು
ತನ್ನನ್ನೇಪೂಜಿಸಬೇಕೆಂದು ಹೇಳುತ್ತಾ ಋಷಿ
ಮುನಿಗಳಿಗೆ ತೊಂದರೆಕೊಡುತ್ತಿದ್ದನು.
ಅನ್ನ ನೀರಿಗಾಗಿ ಹಾಹಾಕಾರವೆದ್ದಿತು. ಋಷಿ
ಮುನಿಗಳು ಇದರ ಪರಿಹಾರಕ್ಕೆ ದೇವರಲ್ಲಿ
ಪ್ರಾರ್ಥಿಸಿ " ಕಾಮಧೇನು" ವನ್ನು ಭೂಲೋಕಕ್ಕೆ
ಕಳಿಸಲು ಪ್ರಾರ್ಥಿಸುತ್ತಾರೆ.
ಆದರೆ ಕಾಮಧೇನು
ಆ ವೇಳೆಯಲ್ಲಿ ವಶಿಷ್ಟರಲ್ಲಿ ಇರುವದರಿಂದ
" ಕಾಮಧೇನುವಿನ ಮಗಳಾದ " ನಂದಿನಿಯನ್ನು
ಕಳಿಸಲು ದೇವತೆಗಳು ಒಪ್ಪುತ್ತಾರೆ.
" ನಂದಿನಿ ಭೂಲೋಕಕ್ಕೆ ತೆರಳಲು ನಿರಾಕರಿಸಿದ್ದರಿಂದ " ನಂದಿನಿಯನ್ನು ಭೂಲೋಕದಲ್ಲಿ ನಂದಿನಿ ನದಿಯಾಗಿ ಹರಿಯುತ್ತಿರು"
ಎಂದು ಋಷಿಗಳು ಶಾಪವನ್ನೀಯುತ್ತಾರೆ.
ಮುಂದೆ ಏನು ಮಾಡಬೇಕೆಂದು ತೋಚದೇ ಇರುವಾಗ ಭೂದೇವಿಯು ಮುಂದಿನ ಅವತಾರದಲ್ಲಿ ನಾನು ಬ್ರಮರಾಂಬಿಕೆಯಾಗಿ ಅವತರಿಸಿ
ಅರುಣಾಸುರನನ್ನು ಸಂಹರಿಸಿ ನಾನು
ದುರ್ಗಾ ಪರಮೇಶ್ವರಿಯಾಗಿ " ಕಟೀಲನಲ್ಲಿ" ನೆಲೆಸುತ್ತೇನೆ.
ಶಾಂತಳಾದ ಮೇಲೆ ನಂದಿನಿಯಾಗಿತೀರ್ಥ ರೂಪದಲ್ಲಿ
ಹರಿಯುತ್ತಿರುತ್ತೇನೆ ಎಂದು ಹೇಳುತ್ತಾಳೆ.
ಕಾಮಧೇನುವಿನ ಮಗಳಾದ ನಂದಿನಿ ಇಲ್ಲಿ ಪವಿತ್ರನದಿಯಾಗಿ ಶ್ರೀ ಕ್ಷೇತ್ರವನ್ನು ಪವಿತ್ರಗೊಳಿಸುತ್ತಿದ್ದಾಳೆ
ಬ್ರಮರಾಂಭಿಕೆಯಾಗುವ ಮೊದಲು ಶ್ರೀ ದೇವಿಯು
ಮೋಹಿನಿಯ ರೂಪ ಧರಿಸಿ , ಅರುಣಾಸುರನ್ನು
ಆಕರ್ಷಿಸಿ ಬ್ರಮರೆಯಾಗಿ ಅರುಣಾಸುರನನ್ನು ಕೊಲ್ಲುತ್ತಾಳೆ.
" ಕಟಿ" ಅಂದರೆ ಸೊಂಟ/ ನಡು
" ಇಳೆ ಅಂದರೆ ಭೂಮಿ.ಯಲ್ಲಿ ಶ್ರೀ ದೇವಿಯು
ಉದ್ಭವಳಾಗಿರುವದರಿಂದ ಈ ಕ್ಷೇತ್ರಕ್ಕೆ
" ಕಟೀಲು ದುರ್ಗಾ ಪರಮೇಶ್ವರಿ" ಎಂದು
ಹೆಸರು ಬಂದಿದೆ.
ಶ್ರೀ ದುರ್ಗಾ ಪರಮೇಶ್ವರಿಯ ಆಶೀರ್ವಾದ ಸಕಲ ಭಕ್ತರ ಮೇಲಿರಲಿ
" ಓಂ ಶ್ರೀ ದುರ್ಗಾ ಪರಮೇಶ್ವರಿಯೇ ನಮಃ "
ಲೇಖನ ಮತ್ತು ಸಂಗ್ರಹ : ಶ್ರೀ ಬೆಂಗಳೂರು
ಚಿತ್ರ ಕೃಪೆ : ಅಂತರ್ಜಾಲ
