ಮಂಜು ಶ್ರೀ ನ್ಯೂಸ್ ಕುಂಬಳೆ
ನಮ್ಮ ಪ್ರತಿನಿಧಿ ವರದಿ
ಇಂದು ಬೆಳಗ್ಗೆ ಕ್ಷೇತ್ರದ ತಂತ್ರಿವರ್ಯಾರಾದ ಬ್ರಹ್ಮ ಶ್ರೀ ರಾಮಕೃಷ್ಣ ಆಚಾರ್ಯರ ಆಚಾರ್ಯತ್ವದಲ್ಲಿ ಶ್ರೀ ಮಾತೆಗೆ ಚಂಡಿಕಾ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು.
ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ನ್ಯಾ. ರಾಜೇಶ್ ಆಚಾರ್ಯ ತಾಳಿಪಡ್ಪು ಕಾಸರಗೋಡು, ಪ್ರಧಾನ ಕಾರ್ಯದರ್ಶಿ ಕಾಟುಕುಕ್ಕೆ ವಾಸುದೇವ ಆಚಾರ್ಯ ಕುಂಬಳೆ, ಹರೀಶ್ಚಂದ್ರ ಆಚಾರ್ಯ ಬೇಕೂರು ಮೊದಲಾದವರು ಉಪಸ್ಥಿತರಿದ್ದರು. ಕ್ಷೇತ್ರದಲ್ಲಿ ಈ ತಿಂಗಳ 14 ಗುರುವಾರ ಮಹಾನವಮಿ ಪ್ರಯುಕ್ತ ಆಯುಧ ಪೂಜೆ, 15 ರಂದು ಶುಕ್ರವಾರ ವಿಜಯದಶಮಿ ಪ್ರಯುಕ್ತ ಪೂರ್ವಾಹ್ನ ಶ್ರೀ ಮಹಾ ಗಣಪತಿಹೋಮ, ಅಭಿಷೇಕ, ಅರ್ಚನಾದಿ ಪೂಜೆಗಳು, ವಿದ್ಯಾರಂಭ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಮಧ್ಯಾಹ್ನ 1 ರಿಂದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ನೃತ್ಯ ಕಲಾ ಮಂಟಪ ಆರಿಕ್ಕಾಡಿ ಇವರಿಂದ "ನೃತ್ಯ ಸಂಗಮ" ನಡೆಯಲಿದೆ.
ವರದಿ:- ಶ್ರೀಕಾಂತ್ ಕಾಸರಗೋಡು.
