ಮಂಜೇಶ್ವರ: ತಲಪಾಡಿ ಗಡಿ ಪ್ರದೇಶದಲ್ಲಿ ಕರ್ನಾಟಕ ಸರಕಾರ ಕೇರಳ ಜನತೆಗೆ RTPCR ನೆಗೆಟಿವ್ ಕಡ್ಡಾಯಗೊಳಿಸಿದ ಕ್ರಮವನ್ನು ಕೂಡಲೇ ಹಿಂತೆಗೆಯಬೇಕೆಂದು AIYF ಮಂಜೇಶ್ವರ ಏರಿಯಾ ಸಮಿತಿ ಅಧಿಕೃತರನ್ನು ಒತ್ತಾಯಿಸಿದೆ.
AIYF ಮಂಜೇಶ್ವರ ಏರಿಯಾ ಅಧ್ಯಕ್ಷ ಪ್ರಥಮ್ ಕಣ್ವತೀರ್ಥ ಧ್ವಜಾರೋಹಣಗೈದರು. ಸಮಾವೇಶವನ್ನು AIYF ಜಿಲ್ಲಾಧ್ಯಕ್ಷ ಬಿಜು ಉಣ್ಣಿತ್ತಾನ್ ಉದ್ಘಾಟಿಸಿದರು. CPI ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್, CPI ಮಂಜೇಶ್ವರ ಮಂಡಲ ಜತೆ ಕಾರ್ಯದರ್ಶಿ ಎಸ್. ರಾಮಚಂದ್ರ ಬಡಾಜೆ, AIYF ಜಿಲ್ಲಾ ಉಪಾಧ್ಯಕ್ಷ ಅಜಿತ್ ಎಂ.ಸಿ, AIYF ಜಿಲ್ಲಾ ಸಮಿತಿ ಸದಸ್ಯ ಮನು ಪುತ್ತಿಗೆ, AITUC ಮೋಟಾರ್ ಯೂನಿಯನ್ ರಾಜ್ಯ ಉಪಾಧ್ಯಕ್ಷ ಮುಸ್ತಫಾ ಕಡಂಬಾರ್, AIYF ಮಂಜೇಶ್ವರ ಮಂಡಲ ಅಧ್ಯಕ್ಷ ದಯಾಕರ ಮಾಡ ಮೊದಲಾದವರು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.
ನೂತನ ಏರಿಯಾ ಸಮಿತಿಯನ್ನು ರೂಪೀಕರಿಸಲಾಯಿತು. ನೂತನ ಅಧ್ಯಕ್ಷರಾಗಿ ಶನೀಶ್ ಉದ್ಯಾವರ, ಕಾರ್ಯದರ್ಶಿಯಾಗಿ ಪ್ರಥಮ್ ಕಣ್ವತೀರ್ಥ, ಉಪಾಧ್ಯಕ್ಷರಾಗಿ ರಾಜ ದುರ್ಗಿಪಳ್ಳ, ಶೋಭಾ, ಜತೆ ಕಾರ್ಯದರ್ಶಿಯಾಗಿ ಧನರಾಜ್ ಕೀರ್ತೇಶ್ವರ, ಪ್ರಭಾವತಿ ಕಾಜೂರ್ ಆಯ್ಕೆಯಾದರು. AIYF ನೇತಾರ ಶನೀಶ್ ಮಂಜೇಶ್ವರ ಸ್ವಾಗತಿಸಿ, ಪುರುಷೋತ್ತಮ ಪದವು ವಂದಿಸಿದರು.
