ನಮೋ ಕಾವ್ಯಾಮೃತ | ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 20ನೇ ವರ್ಷದ ಆಚರಣೆಯ ಅಂಗವಾಗಿ ವಿಶೇಷ ಕವಿ ಗೋಷ್ಠಿ
Author -
personManjushri News
October 04, 2021
0
share
ಕಾಸರಗೋಡು : ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 20ನೇ ವರ್ಷದ ಆಚರಣೆಯ ಅಂಗವಾಗಿ 'ನಮೋ ಕಾವ್ಯಾಮೃತ' ಎಂಬ ವಿಶೇಷ ಕವಿ ಗೋಷ್ಠಿ ಕಾರ್ಯಕ್ರಮವು ಶ್ಯಾಮ್ ಪ್ರಸಾದ್ ಮುಖರ್ಜಿ ಮಂದಿರ(ಕಾಸರಗೋಡು ಬಿಜೆಪಿ ಕಾರ್ಯಲಯ)ದಲ್ಲಿ ಜರಗಿತು. ಕಾರ್ಯಕ್ರಮವನ್ನು ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷರಾದ ಅಡ್ವ. ಶ್ರೀಕಾಂತ್ ವಹಿಸಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರಾದ ಶ್ರೀ ಕಾಂತ್ ನೆಟ್ಟಣಿಗೆ, ಹರೀಶ್ ಸುಲಾಯ ಒಡ್ಡಂಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಕವಿ, ಕವಯತ್ರಿಯರು ಭಾಗವಹಿಸಿ, ಕವನ ವಾಚಿಸಿದರು. ಕವನ ವಾಚಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ನಂತರ ಉಪಸ್ಥಿತರಿದ್ದ ಎಲ್ಲರೂ ಶುಭಾಶಯಗಳನ್ನು ಮತ್ತು ಅನಿಸಿಕೆಗಳನ್ನು ಅಂಚೆ ಚೀಟಿಯ ಮೂಲಕ ಪ್ರಧಾನಿಯವರಿಗೆ ಕಳುಹಿಸಲಾಯಿತು.
ಕಾರ್ಯಕ್ರಮವನ್ನು ಕಾರ್ಯಕ್ರಮದ ಸಂಚಾಲಕರಾದ ಶ್ರೀ ಕಾಂತ್ ನೆಟ್ಟಣಿಗೆ ಸ್ವಾಗತಿಸಿ, ಸವಿತಾ ಟೀಚರ್ ವಂದಿಸಿದರು. ವಿದ್ಯಾಗಣೇಶ್ ಅಣಂಗೂರು ನಿರೂಪಿಸಿದರು.