ಮಂಜೇಶ್ವರ:- ಹೊಸಂಗಡಿ ಹಾಗೂ ಉಪ್ಪಳದ ಕೈಕಂಬದಲ್ಲಿ ಕಾರ್ಯಚರಿಸುತ್ತಿರುವ "ಹೋಟೆಲ್ ಪಂಚಮಿ" ಯ ಸಹ ಮಾಲಕರಾದ ಶ್ರೀನಿವಾಸ ಶೆಟ್ಟಿ (54) ಅಸೌಖ್ಯ ನಿಮ್ಮಿತ ಮಂಗಳೂರು ಪಡೀಲ್ ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಇಂದು ಬೆಳಗ್ಗೆ ನಿಧನರಾದರು.
ಮೃತರು ಹೊಸಂಗಡಿ ಬಳಿಯ ಕಡಂಬಾರು ಧರ್ಮೇಮಾರು ನಿವಾಸಿ ದಿ. ಸಂಕು ಶೆಟ್ಟಿ - ದಿ. ಗುಲಾಬಿ ದಂಪತಿಯ ಪುತ್ರನಾಗಿದ್ದು, ಪತ್ನಿ:- ಸುರೇಖಾ, ಮಕ್ಕಳಾದ:- ಸಾತ್ವಿಕ್, ಸ್ವಸ್ತಿಕ್, ಸಹೋದರ - ಸಹೋದರಿಯರಾದ ಸುಮತಿ, ಸಿ.ಪಿ ಐ ಮಂಜೇಶ್ವರ ಮಂಡಲ ಕಮಿಟಿ ಸದಸ್ಯ:- ಆನಂದ ಶೆಟ್ಟಿ, ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ:- ಜಯರಾಮ ಶೆಟ್ಟಿ, ಹೊಸಂಗಡಿ ಪಂಚಮಿ ಹೋಟೆಲ್ ಮಾಲಕ:- ಗಂಗಾಧರ ಶೆಟ್ಟಿ, ಹಾಗೂ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಅಪರಾಹ್ನ 12.00 ಕ್ಕೆ ಮನೆ ಪರಿಸರದಲ್ಲಿ ನಡೆಯಲಿದೆ.
ಹೊಸಂಗಡಿ ಹಾಗೂ ಉಪ್ಪಳದ ಕೈಕಂಬದಲ್ಲಿ ಹೋಟೆಲ್ ಉದ್ಯಮ ನಡೆಸುವ ಇವರು ಪಂಚಮಿ ಕ್ಯಾಟರರ್ಸ್ ನ್ನು ಕೂಡಾ ನಡೆಸುತ್ತಿದ್ದರು. ಸಹೃದಯಿ ಮನಸಿನ ಸದ್ಗುಣಗಳನ್ನು ಹೊಂದಿರುವ ಇವರು ಗ್ರಾಹಕರ ಮೆಚ್ಚುಗೆಯ ವ್ಯಕ್ತಿಯಾಗಿದ್ದರು.
ಮೃತರ ನಿಧನಕ್ಕೆ ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಸೇವಾ ಸಮಿತಿ, ಜೀರ್ಣೋದ್ಧಾರ ಸಮಿತಿ, ಮಹಿಳಾ ಸಮಿತಿ, ಸೇವಾ ಸ್ಫೂರ್ತಿ, ಯುವ ಫ್ರೆಂಡ್ಸ್ ಧರ್ಮೇಮಾರು, ಸಿ.ಪಿ.ಐ ಮಂಜೇಶ್ವರ ಮಂಡಲ ಕಮಿಟಿ, ಎ.ಐ. ವೈ.ಎಫ್ ಮಂಜೇಶ್ವರ ಮಂಡಲ ಕಮಿಟಿ, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಉಪ್ಪಳ ಘಟಕ, ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್. ಶೆಟ್ಟಿ ಸಂತಾಪ ಸೂಚಿಸಿದ್ದಾರೆ.
