ಮಂಜು ಶ್ರೀ ನ್ಯೂಸ್ ಮಂಜೇಶ್ವರ
ನಮ್ಮ ಪ್ರತಿನಿಧಿ ವರದಿ
ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹವ್ಯಾಸಿ ಯಕ್ಷಗಾನ ಕಲಾವಿದ, ಸಂಘಟಕರಾದ ನ್ಯಾಯವಾದಿ ಯಂ. ದಾಮೋದರ ಶೆಟ್ಟಿ ಸೊಯಿಪಕಲ್ಲು ಇವರ ಸೇವಾ ರೂಪದಲ್ಲಿ ಪ್ರಸಿದ್ಧ ನುರಿತ ಕಲಾವಿದರಿಂದ "ಶಾಂಭವಿ ವಿಜಯ" ಕಥಾ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಿತು. ಭಾಗವತರಾಗಿ ಬೊಂದೆಲ್ ಸತೀಶ್ ಶೆಟ್ಟಿ, ಹಿಮ್ಮೇಳದಲ್ಲಿ ರೋಹಿತ್ ಉಚ್ಚಿಲ್, ಕೋಳ್ಯೂರ್ ಭಾಸ್ಕರ, ಜಿತೇಶ್ ಕೋಲ್ಯೂರು, ಮುಮ್ಮೇಳದಲ್ಲಿ ಸಾಣೂರು ಮಹೇಶ್ ಕುಮಾರ್, ನ್ಯಾ.ಯಂ. ದಾಮೋದರ ಶೆಟ್ಟಿ, ಗಣೇಶ್ ಕುಂಜತ್ತೂರು, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, ದೇವಿಪ್ರಸಾದ್ ಶೆಟ್ಟಿ ಬೆಜ್ಜ ಮೊದಲಾದವರು ಸಹಕರಿಸಿದರು. ಬಳಿಕ
ಸಂಘಟಕ, ಯಕ್ಷಸಾಧಕ, ಮಂಜೇಶ್ವರ ಜಯ - ವಿಜಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ, ಸತತ ಎರಡು ಬಾರಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಅಯ್ಕೆಯಾದ ಮಜಿಬೈಲ್ ನ ಹಿರಿಮೆಯ ಗರಿ, ನ್ಯಾಯವಾದಿ ಯಂ. ದಾಮೋದರ ಶೆಟ್ಟಿಯವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಸಮಿತಿ ಪಧಾಧಿಕಾರಿಗಳಾದ ರಾಂ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ರವೀಂದ್ರ ಶೆಟ್ಟಿ ಕರಿಬೈಲ್, ಆನಂದ ಆಳ್ವ ಮಾಟೆ, ವಿಶ್ವನಾಥ ಆಳ್ವ ಕರಿಬೈಲು, ಅಣ್ಣಪ್ಪ ಹೆಗ್ಡೆ ಮಾಟೆ, ಗೋಪಾಲಕೃಷ್ಣ ಆಳ್ವ ಕೊಡ್ಡೆ, ವಿಶ್ವನಾಥ ರೈ ಕುದುರು, ಚಂದ್ರಹಾಸ ಆಳ್ವ ಕೊಡ್ಡೆ, ಪ್ರಭಾಕರ ಶೆಟ್ಟಿ ಮಂಜಯ್ಯಹಿತ್ತಿಲು, ಕೃಷ್ಣ ಶೆಟ್ಟಿ ಕೆಳಗಿನ ಹೊಸಮನೆ, ಮಿಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು ಮೊದಲಾದವರು ಶಾಲು ಹೊದಿಸಿ, ಸ್ಮರಣಿಕೆ, ಫಲಫುಷ್ಪವನ್ನಿತ್ತು ಸನ್ಮಾನಿಸಿದರು. ರಂಗನಟ ದೇವಿಪ್ರಸಾದ್ ಶೆಟ್ಟಿ ಬೆಜ್ಜ ನಿರೂಪಿಸಿ, ಕ್ಷೇತ್ರದ ಕಾರ್ಯದರ್ಶಿ ಮಾಟೆ ಅಣ್ಣಪ್ಪ ಹೆಗ್ಡೆ ಸ್ವಾಗತಿಸಿ, ವಂದಿಸಿದರು.
