ವರ್ಕಾಡಿ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ,ಆರೋಗ್ಯ, ವಿದ್ಯಾಭ್ಯಾಸ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಗಳಿಗಾಗಿ ಒತ್ತಾಯಿಸಿ ಸಂಬಂಧಪಟ್ಟ ಸಚಿವರುಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಬಳಿಕ ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ.ಪಿಣರಾಯಿ ವಿಜಯನ್ ರವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಲಾಯಿತು.
ಆರೋಗ್ಯ ಸಚಿವರಾದ ಶ್ರೀಮತಿ ವೀಣಾ ಜಾರ್ಜ್, ಶಿಕ್ಷಣ ಸಚಿವರಾದ ಶ್ರೀ ವಿ.ಶಿವನ್ ಕುಟ್ಟಿ,ಕಂದಾಯ ಸಚಿವರಾದ ಶ್ರೀ ಕೆ.ರಾಜನ್, ಪಂಚಾಯತ್ ಸಚಿವರಾದ ಶ್ರೀ ಎಂ.ವಿ.ಗೋವಿಂದನ್ ಮಾಸ್ಟರ್, ಲೋಕೋಪಯೋಗಿ ಸಚಿವರಾದ ಶ್ರೀ ಪಿ.ಎ.ಮಹಮ್ಮದ್ ರಿಯಾಜ್, ಅರಣ್ಯ ಸಚಿವರಾದ ಶ್ರೀ ಎ.ಕೆ. ಶಶೀಂದ್ರನ್, ಕಾಸರಗೋಡು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಅಹಮದ್ ದೇವರಕೋವಿಲ್ ಹಾಗೂ ಮಂಜೇಶ್ವರ ಶಾಸಕರಾದ ಶ್ರೀ ಎ.ಕೆ.ಎಂ.ಆಶ್ರಪ್, ಉದುಮ ಶಾಸಕರಾದ ಶ್ರೀಸಿ.ಎಚ್.ಕುಂಞಂಬುರವರನ್ನು ಭೇಟಿಯಾಗಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸವಿವರವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವರ್ಕಾಡಿ ಪಂಚಾಯತ್ ಅಧ್ಯಕ್ಷರಾದ ಭಾರತಿ ಎಸ್, ಉಪಾಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಪಾಡಿ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಮೊಹಿದಿನ್ಕುಂಞಿ ತಲಕ್ಕಿಯವರು ಉಪಸ್ಥಿತರಿದ್ದರು.
