ಮಂಜೇಶ್ವರ:- ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾರವರ ಮಗ ಆಶಿಶ್ ಮಿಶ್ರಾ ಕಾರು ಹರಿಸಿ ರೈತರನ್ನು ಕೊಂದ ಘಟನೆಯನ್ನು ಖಂಡಿಸಿ ಹಾಗೂ ಘಟನಾ ಸ್ಥಳಕ್ಕೆ ತೆರಳುತ್ತಿದ್ದ AICC ಪ್ರ.ಕಾರ್ಯದರ್ಶಿ ಪ್ರಿಯಾಂಕ ಗಾಂಧೀ ವಾಧ್ರರನ್ನು ಬಂಧಿಸಿದ ಫ್ಯಾಸಿಸ್ಟ್ ಯೋಗಿ ಸರಕಾರದ ವಿರುದ್ಧ ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಿನ್ನೆ ರಾತ್ರಿ ಮಜೀರ್ ಪಳ್ಳದಲ್ಲಿ ದೊಂದಿ ಮೆರವಣಿಗೆ ಜರುಗಿತು.
ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀ ಸಂಕಬೈಲು ಸತೀಶ್ ಅಡಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರತಿಭಟನಾ ಮೆರವಣಿಗೆಯನ್ನು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪಿ ಸೋಮಪ್ಪ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮುಖ್ಯ ಪ್ರಭಾಷಣಗೈದರು. ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ದಿವಾಕರ್ ಎಸ್ ಜೆ ಸ್ವಾಗತಿಸಿದರು. ಕಾಂಗ್ರೆಸ್ ಮುಖಂಡರಾದ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಚಂದ್ರಶೇಖರ ಶೆಟ್ಟಿ ಬೆಜ್ಜ, ಕುಂಞಮೋನು ಆನೆಕಲ್ಲು, ಮೂಸಾ ಧರ್ಮನಗರ, ಹಮೀದ್ ಕಣಿಯೂರು, ಶರೀಫ್ ಅರಿಬೈಲು, ಶಾಹುಲ್ ಅಮೀರ್, ಫ್ರಾನ್ಸಿಸ್ ಡಿಸೋಜಾ ಕೆ., ಸಲೀಮ್, ಅಬೂಬಕ್ಕರ್ ಪೊಯ್ಯೆ, ಅಬ್ದುಲ್ ಖಾದರ್, ಅಬೂಸ್ವಾಲಿ, ಯೂತ್ ಲೀಗ್ ನ ಹನೀಫ್ ಕೆ.ಎಸ್, ಮುಂತಾದವರು ನೇತೃತ್ವ ನೀಡಿದರು.
