ಮಂಜೇಶ್ವರ:- ಕೇರಳ ರಾಜ್ಯ ಸಭಾ ಸದಸ್ಯ, ಕೇಂದ್ರ ನಾಳಿಕೇರ ಅಭಿವೃದ್ಧಿ ಮಂಡಳಿಯ ಸದಸ್ಯ, ಮಲಯಾಳಂ ಚಲನಚಿತ್ರ ನಟ ಶ್ರೀ ಸುರೇಶ್ ಗೋಪಿ ಅವರು ಜಿಲ್ಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸಂಜೆ ವೇಳೆ ಮಂಜೇಶ್ವರದ ರಾಷ್ಟ್ರಕವಿ ಗೋವಿಂದ ಪೈಗಳ ನಿವಾಸ "ಗಿಳಿವಿಂಡು" ವಿಗೆ ಆಗಮಿಸಿದರು.ಈ ವೇಳೆ ಇವರನ್ನ ಮಂಜೇಶ್ವರ ಗ್ರಾಮ ಪಂಚಾಯತ್ ವತಿಯಿಂದ ಹಾಗೂ ಗಿಳಿವಿಂಡು ಸ್ಮಾರಕ ಸಮಿತಿ ವತಿಯಿಂದ ಮತ್ತು ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ವತಿಯಿಂದ ಹಾರ್ದಿಕವಾಗಿ ಸ್ವಾಗತಿಸಲಾಯಿತು. ಗೋವಿಂದ ಪೈಗಳ ನಿವಾಸದಲ್ಲಿರುವ ಪೈಗಳ ಪುತ್ಥಳಿಗೆ ಹೂವಿನ ಹಾರ ಹಾಕಿ, ಗೌರವ ನಮನ ಸಲ್ಲಿಸಿದರು. ಈ ವೇಳೆ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಸಮಿತಿ ವತಿಯಿಂದ ಸಮಿತಿಯ ಕಾರ್ಯದರ್ಶಿ ಕೆ.ಆರ್ ಜಯಾನಂದರವರು ರಾಷ್ಟ್ರಕವಿ ಗೋವಿಂದ ಪೈಯವರ ಜೀವನ ಚರಿತ್ರೆಯ ಪುಸ್ತಕವನ್ನು ನೀಡಿ, ಶಾಲು ಹೊದಿಸಿ ಗೌರವಿಸಿದರು. ನಂತರ ಅವರು ಗೋವಿಂದ ಪೈಯವರ ಸ್ಮಾರಕ ಗ್ರಂಥಾಲಯ ಹಾಗೂ ಯಕ್ಷಗಾನ ಕಲೆಯ ಕೇಂದ್ರ ಬಿಂದುವಾದ "ಯಕ್ಷ ದೇಗುಲ" ವನ್ನು ವೀಕ್ಷಿಸಿದರು. ತಮ್ಮ ಆಗಮನದ ಸವಿ ನೆನಪಿಗಾಗಿ ಗೋವಿಂದ ಪೈಗಳ ಮನೆಯ ಮುಂಭಾಗ ತೆಂಗಿನ ಸಸಿಯನ್ನು ನೆಟ್ಟು, ಅದಕ್ಕೆ ನೀರನ್ನು ಉಣಿಸಿದರು. ಈ ವೇಳೆ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವಿನಾ ಮೊಂತೇರೋ ಸೇರಿದಂತೆ ಪಂಚಾಯತ್ ನ ಪ್ರಮುಖರಿಗೆ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನ ಘೋಷಿಸಿ, ಅವರ ಹೆಸರಿನಲ್ಲಿ ತೆಂಗಿನ ಸಸಿಯನ್ನು ವಿತರಿಸಿದರು. ಬಳಿಕ ಮಂಜೇಶ್ವರ ಗೋವಿಂದ ಪೈಗಳ ನಿವಾಸದಲ್ಲಿ ಸಂಜೆಯ ಚಾ ಸವಿದು, ಮಂಗಳೂರು ಕಡೆ ತೆರಳಿದರು.
ಆಗಮನದ ಸಂಧರ್ಭ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾ. ಶ್ರೀ ಕಾಂತ್ ಕಾಸರಗೋಡು, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜೀನ್ ಲವಿನಾ ಮೊಂತೆರೋ, ಉಪಾಧ್ಯಕ್ಷ ಸಿದ್ದಿಕ್, ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಯಾದವ ಬಡಾಜೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸುಪ್ರಿಯಾ ಶೆಣೈ, ಪಂಚಾಯತ್ ಸದಸ್ಯರಾದ ಆದರ್ಶ್ ಬಿ.ಎಂ, ಲಕ್ಷ್ಮಣ್ ಕುಚ್ಚಿಕ್ಕಾಡ್, ರಾಜೇಶ್ ಮಜಾಲ್, ಶ್ರೀಮತಿ ನಿಶಾ ಭಟ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಸರೋಜಾ ಆರ್. ಬಲ್ಲಾಳ್, ಅನಿಲ್ ಕುಮಾರ್ ಮಣಿಯಂಪಾರೆ, ಮಂಜೇಶ್ವರ ಆರೋಗ್ಯ ಇಲಾಖೆಯ ಡಾ. ರಾಧಿಕಾ, ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾ. ನವೀನ್ ರಾಜ್ ಕೆ.ಜೆ, ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ, ಬಾಬು ಮಾಸ್ತರ್, ಕೋಲಾರ್ ಸತೀಶ್ಚಂದ್ರ ಭಂಡಾರಿ, ಸಂತೋಷ್ ದೈಗೋಳಿ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಜಯರಾಜ್ ಶೆಟ್ಟಿ ಕುಳೂರು, ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಅಧ್ಯಕ್ಷರಾದ ರಾಜೇಶ್ ತೂಮಿನಾಡ್, ಯುವಮೋರ್ಚಾ ಮಂಜೇಶ್ವರ ಪಂಚಾಯತ್ ಸಮಿತಿ ಪ್ರಧಾನ ಕಾರ್ಯದರ್ಶಿ ಅವಿನಾಶ್ ಹೆಗ್ಡೆ, ಬಿಜೆಪಿ ನೇತಾರರಾದ ಹರೀಶ್ಚಂದ್ರ ಮಂಜೇಶ್ವರ, ಬಾಲಕೃಷ್ಣ ಶೆಟ್ಟಿ ವಾನಂದೆ, ಕಾರ್ತಿಕ್ ಶೆಟ್ಟಿ ಮಜಿಬೈಲ್, ಯಶ್ ರಾಜ್ ಉದ್ಯಾವರ, ಯಶ್ ಪಾಲ್ ಉದ್ಯಾವರ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲ್, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಖಂಡ ಸಮಿತಿ ಅಧ್ಯಕ್ಷರಾದ ಕೌಶಿಕ್ ಮಾಡ, ಎಸ್.ಆರ್ ಜನಾರ್ಧನ ಆಚಾರ್ಯ ಮಜಿಬೈಲ್, ಸೇರಿದಂತೆ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಕಣ್ವತೀರ್ಥ ಬೀಚ್ ನ್ನು ಮೂಲಭೂತ ಸೌಕರ್ಯಾವನ್ನ ಒಳಗೊಂಡ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕು ಆಗ್ರಹಿಸಿ ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಲಕ್ಷ್ಮಣ್ ಕುಚ್ಚಿಕ್ಕಾಡ್ ಮನವಿ ನೀಡಿದರು.
ಉದ್ಯಾವರ ಮಾಡದಲ್ಲಿರುವ ಸಾರ್ವಜನಿಕ ಸ್ಮಶಾನವನ್ನು ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತರಾದ ಸಂಜೀವ ಶೆಟ್ಟಿ ಮಾಡರವರು ಮನವಿ ನೀಡಿದರು.
ಚಿತ್ರ ಮತ್ತು ವರದಿ : ರತನ್ ಕುಮಾರ್ ಹೊಸಂಗಡಿ
