ಭಾರತೀಯ ಯುವ ಕಾಂಗ್ರೇಸ್ ನೇತೃತ್ವದಲ್ಲಿ ಉತ್ತರಪ್ರದೇಶ ಲೆಕಿಮ್ ಪುರ್ನಲ್ಲಿ ನಡೆದ ರೈತರ ಹತ್ಯೆ ಮತ್ತು ರಾಷ್ಟ್ರೀಯ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಬಂಧನ ಖಂಡಿಸಿ ಉಪ್ಪಳ ಪೇಟೆಯಲ್ಲಿ ಪಂಜಿನ ಮೆರವಣಿಗೆ ಪ್ರತಿಭಟನೆ.
ಉತ್ತರ ಪ್ರದೇಶದ ಕೇಂದ್ರ ಬಿಜೆಪಿ ಸರಕಾರವು ರೈತ ವಿರುದ್ಧ ಕಾನೂನು ಗಳ ವಿರೋಧವಾಗಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ರೈತರನ್ನು ಜೀಪು ಹತ್ತಿಸಿಕೊಂಡ ಬಿಜೆಪಿ ನಾಯಕನ ನಡೆಯನ್ನು ತೀವ್ರವಾಗಿ ಖಂಡಿಸಿದ ಕುಂಬಳೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ ಅವರು ಮಾತನಾಡುತ್ತಾ ಕೊನೆಯ ಉಸಿರಿರುವವರೆಗೂ ಕಾಂಗ್ರೆಸ್ ಪಕ್ಷವು ರೈತರು ಪರವಾಗಿ ಹೋರಾಡುವುದಾಗಿ ಹೇಳಿದರು.
ಪ್ರತಿಭಟನೆಯ ಅಧ್ಯಕ್ಷತೆಯನ್ನು ಯುವಕಾಂಗ್ರೆಸ್ ಮಂಜೇಶ್ವರ ನಿಯೋಜಕ ಮಂಡಲ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ವಹಿಸಿದ್ದರು. ಮಂಗಲ್ಪಾಡಿ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಮನ್ಸೂರ್ ಮಂಗಲ್ಪಾಡಿ ಮಂಜೇಶ್ವರ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹನೀಫ್ ಎಂಪಿ ಕುಂಬಳೆ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಶರೀಫ್ ಆರಿಕ್ಕಾಡಿ ನಿಯೋಜಕ ಮಂಡಲ ಯುವ ಕಾಂಗ್ರೆಸ್ ನೇತಾರರಾದ ಪೃಥ್ವಿರಾಜ್ ಶೆಟ್ಟಿ ಕುಂಬಳೆ , ಹುಸೇನ್ ಮಂಗಲ್ಪಾಡಿ, ಕೆ ಎಸ್ ಯು ನೇತಾರರಾದ ಮುನಾಫ್ ಮೊಗ್ರಾಲ್, ಮುಂತಾದವರು ಪ್ರತಿಭಟನೆ ಯ ಪ್ರಯುಕ್ತ ಮಾತಾನಾಡಿದರು ನವೀನ್ ಶೆಟ್ಟಿ ಕಾರ್ತಿಕ್ ಉಪ್ಪಳ, ವರುಣ್ ಉಪ್ಪಳ, ಶಮದ್ ಮೊಗ್ರಾಲ್ ಮುಂತಾದವರು ಪರತಿಭಟನೆಯಲ್ಲಿ ಭಾಗವಹಿಸಿದರು.
