ಮಂಜೇಶ್ವರ:- ಹಿರಿಯ ಸಾಹಿತಿ, ಸಂಶೋಧಕಿ ಡಾ. ಲಕ್ಷ್ಮೀ ಜಿ ಪ್ರಸಾದ್ ಅವರ ನೂತನ ಕೃತಿ "ಕರಾವಳಿಯ ಸಾವಿರದೊಂದು ದೈವಗಳು" ಕೃತಿಯ ಪುಟಗಳನ್ನು ಅಮಾನ್ಯ ವ್ಯಕ್ತಿಗಳು ಸ್ಕಾನ್ ಮಾಡಿ ಪಿ.ಡಿ.ಎಫ್ ಮೂಲಕ ನಕಲು ಪ್ರತಿ ತಯಾರಿಸಿ ಓದುವುದರೊಂದಿಗೆ ಇತರರಿಗೂ ಓದಲು ನೀಡಿ ಕೃತಿ ಕರ್ತೃರವರಿಗೆ ಅವಮಾನ ಮಾಡಿದ ಘಟನೆ ನಿನ್ನೆ ಸಂಜೆ ನಡೆದಿದೆ. ಈ ಬಗ್ಗೆ ಕೃತಿ ಕರ್ತೃ ರಾದ ಡಾ. ಲಕ್ಷ್ಮೀ ಜಿ. ಪ್ರಸಾದ್ ರವರು ಈ ಬಗ್ಗೆ ಕಾನೂನಿನ ನಿಯಮದಡಿ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.
ಮೂಲತಃ ಕಾಸರಗೋಡು ಜಿಲ್ಲೆಯ ಮೀಂಜ ಪಂಚಾಯತ್ನ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರಾದ ಇವರು ಜಾನಪದ ಸಂಶೋಧಕರು, ವಿವಿಧ ಅಧ್ಯಯನ ಗ್ರಂಥಗಳನ್ನ ಬರೆದು ಪುಸ್ತಕ ರೂಪದಲ್ಲಿ ಹೊರ ತಂದಿರುವರು. ಈ ಬಾರಿ ತುಳುನಾಡಿನ ಸಂಸ್ಕೃತಿ ಸಂಸ್ಕಾರ, ಆಚಾರ ವಿಚಾರ, ತುಳುನಾಡಿನ ಭೂತಾರಾಧನೆಯ ವಿಷಯದಲ್ಲಿ “ಕರಾವಳಿಯ ಸಾವಿರದೊಂದು ದೈವಗಳು” ಎಂಬ ದೊಡ್ಡ ಗಾತ್ರದ ಸಾವಿರಕ್ಕಿಂತ ಹೆಚ್ಚಿನ ಪುಟಗಳ ಸಂಶೋಧನೆಯ ಬೃಹತ್ ಗ್ರಂಥ ರಚಿಸಿ, ಮುದ್ರಿಸಿ ಇತ್ತೀಚೆಗೆ ಬಿಡುಗಡೆಗೊಳಿಸಿದ್ದರು. ಇದರ ಬೆಲೆ ₹2000 ರೂಪಾಯಿಯಾಗಿದ್ದು ರಿಯಾಯತಿ ದರ ₹1500ಗೆ ಲಭ್ಯವಿದೆ. ಪುಸ್ತಕ ತಯಾರಿ ನಡೆಯುತ್ತಿರುವ ವೇಳೆಯೇ ಬಾರಿ ಬೇಡಿಕೆ ಪಡೆದಿದ್ದ ಈ ಕೃತಿಗೆ ಸಾವಿರಾರು ಮಂದಿ ಮುಂಗಡವಾಗಿ ಬುಕ್ಕಿಂಗ್ ಮಾಡಿದ್ದರು. ಇದೀಗ ಕೃತಿಯ ಬಿಡುಗಡೆಯ ಬಳಿಕ ಇವರಿಂದ ಪಡೆದಿರುವ ವ್ಯಕ್ತಿಯೇ ಇದನ್ನ ಸ್ಕಾನ್ ಮಾಡಿ ಪಿ.ಡಿ.ಎಫ್ ಮೂಲಕ ಇತರರಿಗೆ ಓದಲು ಹಂಚಿದ್ದು, ಈ ಬಗ್ಗೆ ಗಮನಕ್ಕೆ ಬಂದ ಬಗ್ಗೆ ಡಾ. ಲಕ್ಷ್ಮೀ ಜಿ ಪ್ರಸಾದ್ ತಿಳಿಸಿದ್ದು, ಈ ಬಗ್ಗೆ ಮುಂದಿನ ಕಾನೂನಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಬಗ್ಗೆ ಲಕ್ಷೀ ಜಿ. ಪ್ರಸಾದ್ ರವರು ತಮ್ಮ ಸ್ಟೇಟಸ್ ನಲ್ಲಿ ಕೂಡಾ ಈ ಬಗ್ಗೆ ಹೇಳಿಕೆಯನ್ನ ನೀಡಿದ್ದು, "ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಗೆ ಕಾಪಿ ರೈಟ್ ಇದೆ.ಇದನ್ನು ಯಾರು ಬೇಕಾದರೂ ಓದಬಹುದು. ಆದರೆ ಸ್ಕಾನ್ ಮಾಡಿ ಪಿಡಿಎಪ್ ಮಾಡಿ ಬಳಸುವಂತಿಲ್ಲ.ಹಾಗೆ ಮಾಡಿದ್ದೇ ಆದರೆ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.ಈಗಾಗಲೇ ಕೆಲವು ಪುಟಗಳನ್ನು ಸ್ಕಾನ್ ಮಾಡಿ ಬಳಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ." ಎಂಬುದನ್ನ ತಿಳಿಸಿದ್ದಾರೆ.
₹2000 ಬೆಲೆಯ ಈ ಕೃತಿಯನ್ನು ₹1500 ರಿಯಾಯತಿ ದರದಲ್ಲಿ ನೀಡುತ್ತಿದ್ದು ಪುಸ್ತಕವು ತುಳುನಾಡಿನ ಭೂತಾರಾಧನೆ ವಿಷಯದ ಬಗ್ಗೆ ಇರುವ ಅಡಕ ಮುದ್ರಿಕೆಯಾಗಿದೆ. ಈ ಬಗ್ಗೆ ಮಾಹಿತಿ ಬೇಕಾದವರು ಡಾ.ಲಕ್ಷ್ಮೀ ಜಿ ಪ್ರಸಾದ್ ,9480516684 ಯವರನ್ನ ಸಂಪರ್ಕಿಸಿ, ಪುಸ್ತಕ ಖರೀದಿಸಿ ಓದಬಹುದು.
ವರದಿ : ರತನ್ ಕುಮಾರ್ ಹೊಸಂಗಡಿ
