ಮೀಂಜ ಮಂಡಲ ಕಾಂಗ್ರೆಸ್ ಸಮಿತಿ | ಇಂದಿರಾ ಗಾಂಧೀಜಿ ಅವರ 104ನೇ ಜನ್ಮದಿನಾಚರಣೆ
November 19, 2021
0
ಮಂಜೇಶ್ವರ:- ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಇಂದಿರಾ ಗಾಂಧೀಜಿ ಅವರ 104ನೇ ಜನ್ಮದಿನಾಚರಣೆಯನ್ನು ಮಜೀರ್ಪಳ್ಳ ದಲ್ಲಿ ಆಚರಿಸಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಹಮೀದ್ ಕೋಡಿಯಡ್ಕ ಅವರು ಪುಷ್ಪಾರ್ಚನೆಗೈದರು. ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ ಅಡಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಿ. ಸೋಮಪ್ಪ ಹರ್ಷಾದ್ ವರ್ಕಾಡಿ, ಶಾಂತಾ ಆರ್ ನಾಯ್ಕ್, ಮಮತಾ ದಿವಾಕರ್, ದಾಮೋದರ ಮಾಸ್ಟರ್ , ಗಂಗಾಧರ ಕೆ, ಟಿ. ಅಹ್ಮದ್ಕುಂಞ, ಹಮೀದ್ ಕಣಿಯೂರು, ಶಾಹುಲ್ ಅಮೀರ್, ಇಕ್ಬಾಲ್ ಕಳಿಯೂರು, ಇಮ್ತಿಯಾಜ್ ಅಹ್ಮದ್, ಮೂಸಾ ಧರ್ಮನಗರ, ಸಿದ್ದೀಕ್ ದೈಗೋಳಿ, ಸಾಹೀಬ್, ಮುಂತಾದವರು ಭಾಗವಹಿಸಿದರು.
Tags
