ಮಂಗಳೂರು : ಟೀಮ್ ಮಂಜುಶ್ರೀ ತುಳುನಾಡ್(ರಿ.) ಸಂಸ್ಥೆಯ ಬಡವು ಯೋಜನೆಯ 25ನೇ ಸೇವೆಯು ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮೈರೋಳ್ತಡ್ಕ (ಮುಂಡೂರು) ಬಾಡ ಮುಗೇರ ಮತ್ತು ತಂಗಿ ಕು. ಲೀಲಾವತಿಯವರ ಕುಟುಂಬಕ್ಕೆ ದೈನಂದಿನ ದಿನಸಿ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರುಗಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಗೌಡ, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮನೋಜ್ ಜಿ ಎನ್, , ಸಂಸ್ಥೆಯ ಸಂಸ್ಥಾಪಕರು, ರಾಜ್ಯಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕರು ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ವಂಶಿ ಪಂಡಿತ್ ಕಣ್ಣೂರು, ಸಂಸ್ಥಾಪಕರು ರಾಜ್ಯ ಉಪಾಧ್ಯಕ್ಷರು ಚಂದ್ರೇಶ್ ಮಾನ್ಯ, ಸಂಸ್ಥಾಪಕರು ರಾಜ್ಯ ಕೋಶಾಧಿಕಾರಿ ಪುಷ್ಪರಾಜ್ ರಾವ್, ರಾಜ್ಯ ಸಮಿತಿ ಸಲಹೆಗಾರರು ಸುರೇಶ್ ಕುಲಾಲ್, ರಾಜ್ಯ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜೇಶ್ ಪೂಜಾರಿ ಸಂಸ್ಥಾಪಕರುರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು ಸಚಿನ್ ಜಿ ಮಣೇಲ್ ಬೈಲ್, ಸದಸ್ಯರಾದ ಪ್ರದೀಪ್ ಜಿ ಕಾಶಿಪಟ್ಣ, ಪ್ರವೀಣ್ ಜಿ ಮಣೆಲ್ ಬೈಲ್, ಶರಣ್ ಜಿ ಮಣೆಲ್ ಬೈಲ್ ಮುಂತಾದವರು ಉಪಸ್ಥಿತರಿದ್ದರು.
ಚಿತ್ರಗಳು : ಪುಷ್ಪರಾಜ್ ರಾವ್ ಮತ್ತು ವಂಶಿ ಪಂಡಿತ್ ಕಣ್ಣೂರು
ವರದಿ : ಸಚಿನ್ ಜಿ ಮಣೇಲ್ ಬೈಲ್