ಮಂಜೇಶ್ವರ:- ಹೊಸಬೆಟ್ಟು ಶ್ರೀ ಕೊರಗಜ್ಜ ಸನ್ನಿಧಿಯಲ್ಲಿ ಜೀರ್ಣೋಧ್ಧಾರದ ಪೂರ್ವಭಾವಿ ಸಭೆ ಇಂದು ಬೆಳಗ್ಗೆ ನಡೆಯಿತು. ಸಭೆಯಲ್ಲಿ ಜೀರ್ಣೋದ್ಧಾರದ ವಿಜ್ಞಾಪನಾ ಪತ್ರವನ್ನು ಧಾರ್ಮಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಸಮಿತಿಯ ಅಧ್ಯಕ್ಷರೂ, ಪಂಚಾಯತ್ ಸದಸ್ಯರಾದ ಯಾದವ ಬಡಾಜೆ, ಉಪಾಧ್ಯಕ್ಷರಾದ ಪ್ರವೀಣ್ ರಾಜ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಜತೆ ಕಾರ್ಯದರ್ಶಿಗಳಾದ ನವೀನ್ ಅಡಪ್ಪ, ಮತ್ತು ಸುರೇಶ್ ಕುಮಾರ್ ಗುತ್ತು, ಸಮಿತಿ ಸದಸ್ಯರಾದ ಸದಾಶಿವ, ಹರೀಶ್, ವಿಪಿನ್, ಸಾಗರ್, ವಿಜಯ, ರಮೇಶ್, ಗಂಗಾಧರ್, ಗಿರೀಶ್, ಬಾಬು ಕಾಕುಂಜೆ, ಕರ್ಮಚಾರಿ ರಮೇಶ್, ಸುಧಾಕರ, ರಾಮಚಂದ್ರ, ಶ್ರೀಮತಿ ಸುನಿತಾ ಮೊದಲಾದವರು= ಭಾಗವಹಿಸಿದರು.ಬಳಿಕ ಮುಖ್ಯ ಭಾಷಣ ಮಾಡಿದ ಶ್ರೀ ಗೋಪಾಲ ಶೆಟ್ಟಿ ಅರಿಬೈಲ್ ರವರು ಕೊರಗಜ್ಜ ದೈವದ ಅಪಾರ ಶಕ್ತಿಯ ಬಗ್ಗೆ ಕೊಂಡಾಡಿದ ಇವರು ಯುವಶಕ್ತಿಯಿಂದ ಎಲ್ಲಾವನ್ನು ಸಾಧಿಸಲು ಸಾಧ್ಯವೆಂದರು. ಆನಂತರ ಮಾತಾಡಿದ ಶ್ರೀ ಯಾದವ ಬಡಾಜೆ ಕಲಿಯುಗದಲ್ಲಿ ಕೊರಗಜ್ಜ ದೈವದ ಕಾರ್ಣಿಕೆಯ ಬಗ್ಗೆ ವಿವರಣೆ ನೀಡಿದರು. ತದನಂತರ ಪ್ರವೀಣ್ ರಾಜ್ ರು ಮಾತನಾಡಿ ಮಾನವ ಬದುಕಿನ ದುರಿತಗಳ ನೀಗಲು ಕೊರಗಜ್ಜ ದೈವದ ಆರಾಧನೆ ಅತೀ ಅಗತ್ಯವೆಂದು ಅಭಿಪ್ರಾಯಿಸಿದರು ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಸ್ವಾಗತಿಸಿ, ಜತೆ ಕಾರ್ಯದರ್ಶಿ ನವೀನ್ ಅಡಪ್ಪ ವಂದಿಸಿದರು.
