ಸಿಂಪಲ್ ಚಿಕನ್ ಚಿಲ್ಲಿ
ಬೇಕಾಗಿರುವ ಸಾಮಾಗ್ರಿಗಳು
ಕೋಳಿ 1/2ಕೆಜಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮೊಟ್ಟೆ
ಕಾರ್ನ್ ಫ್ಲವರ್
ಮೆಣಸಿನ ಹುಡಿ
ಹರಸಿನ ಹುಡಿ
ಉಪ್ಪು
ಚಿಲ್ಲಿ ಮಾಡಲು ಬೇಕಾಗಿರುವ ಸಾಮಗ್ರಿಗಳು
ಎಣ್ಣೆ
ನೀರುಳ್ಳಿ
ಟೊಮೇಟೊ
ಬೆಳ್ಳುಳ್ಳಿ
ಹಸಿ ಮೆಣಸಿನಕಾಯಿ
ಚಿಲ್ಲಿ ಸೌಸ್
ಸೋಯಾ ಸೌಸ್
ಚಿಲ್ಲಿ ಪೇಸ್ಟ್
ಮಾಡುವ ವಿಧಾನ...
ಮೊದಲ ವಿಧಾನ :
ಒಂದು ಪಾತ್ರೆಯಲ್ಲಿ ಅರ್ಧ ಕೆಜಿಯಷ್ಟು ಚಿಕನ್ ತೆಗೆದು ಕೊಳ್ಳಬೇಕು. ಅದಕ್ಕೆ 2 ಚಮಚ ಮೆಣಸಿನ ಹುಡಿ, 1 ಚಮಚ ಹರಸಿನ ಹುಡಿ, ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಕಾರ್ನ್ ಫ್ಲವರ್, 1 ಮೊಟ್ಟೆ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಒಂದು ಗಂಟೆ ಹಾಗೆ ಬಿಡಬೇಕು ......
ಎರಡನೇ ವಿಧಾನ : -
ಒಂದು ಗಂಟೆಯ ನಂತರ ಮಿಕ್ಸ್ ಮಾಡಿದ ಚಿಕನ್ ಅನ್ನು ಎಣ್ಣೆಯಲ್ಲಿ ಕರಿಯಬೇಕು..
ಮೂರನೆಯ ವಿಧಾನ : -
ಒಂದು ಪಾತ್ರೆ ಯಲ್ಲಿ 1 ಚಮಚ ಎಣ್ಣೆ ಬಿಸಿಯಾಗಲು ಬಿಡಿ ... ಅದಕ್ಕೆ 1 ನೀರುಳ್ಳಿ ಹಾಕಿ ಚೆನ್ನಾಗಿ ಕರಿಯಬೇಕು.. ಅದಕ್ಕೆ 1 ಹಚ್ಚಿದ ಟೊಮೇಟೊ, ಹಸಿಮೆಣಸು, ದೊಣ್ಣೆಮೆಣಸು, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹಸಿ ವಾಸನೆ ಹೋಗುವ ವರಗೆ ಫ್ರೈ ಮಾಡಬೇಕು..
ನಂತರ 2 ಚಮಚ ಚಿಲ್ಲಿ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು, ಇದಕ್ಕೆ ಟೊಮೇಟೊ ಸಾಸ್, ಸೋಯಾ ಸೌಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ .. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.. ಇದಕ್ಕೆ ಕಬಾಬ್ ರೀತಿಯಲ್ಲಿ ಫ್ರೈ ಆದ ಚಿಕನ್ ಅನ್ನು ಹಾಕಿ ಒಂದು 5 ನಿಮಿಷ ಬೇಯಲು ಬೇಡಬೇಕು..
ಕೊನೆಯದಾಗಿ ಕೊತ್ತಂಬರಿ ಸೊಪ್ಪು ಹಾಕಿದರೆ. ಸಿಂಪಲ್ ಆಗಿರುವ ಚಿಕನ್ ಚಿಲ್ಲಿ ರೆಡಿ..
ಇದನ್ನು ಚಪಾತಿ ಅಥವಾ ರೊಟ್ಟಿ ಜೊತೆ ಸೇವಿಸಿದರೆ ರುಚಿಯಾಗಿರುತ್ತದೆ.......
ರಚನೆ : ನಿಶ್ಮಿತಾ ರಾವ್
