ಮಂಜೇಶ್ವರ : ತುಳುವೆರೆ ಅಯನೋ ಕೂಟ (ರಿ) ಇದರ ಅಂಗ ಸಂಸ್ಥೆಯಾದ ತುಳುನಾಡ ಬಾಲೆ ಬಂಗಾರ್ ಸಮಿತಿ ಮಂಜೇಶ್ವರ ಇದರ ಆರನೇ ವರ್ಷದ ದೀಪಾವಳಿ ಹಾಗೂ ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಮುದ್ದು ಮಕ್ಕಳ ಭಾವಚಿತ್ರ ಸ್ಪರ್ಧಾ ವಿಜೇತರ ಘೋಷಣೆ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮವು ಇಂದು (ನ.21 ಆದಿತ್ಯವಾರ) ಹೊಸಂಗಡಿಯ ಗೇಟ್ ವೇ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಜರಗಲಿದೆ.
ಮಧ್ಯಾಹ್ನ 2 ಗಂಟೆಗೆ ಇಂಚರ ಮೆಲೋಡೀಸ್ ತಂಡ ಕಡಂಬಾರು ಇವರಿಂದ ತುಳು ಸಂಗೀತ ರಸಮಂಜರಿ ಕಾರ್ಯಕ್ರಮದೊಂದಿಗೆ ಜರಗಲಿದೆ. ಸಂಜೆ 3 ಗಂಟೆಗೆ ಸಂಕಬೈಲ್ ಮಂಜುನಾಥ ಅಡಪರವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ರಾಜ ಬೆಳ್ಚಪಾಡ ಉದ್ಯಾವರ ಇವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಜೇತ ಮುದ್ದು ಮಕ್ಕಳ ಭಾವಚಿತ್ರವನ್ನು ಮಂಜೇಶ್ವರದ ಶಾಸಕರಾದ ಎ.ಕೆ.ಎಂ ಅಶ್ರಫ್ ಅನವರಾಣಗೊಳಿಸಲಿದ್ದಾರೆ. ಬಹುಮಾನಗಳ ಘೋಷಣೆಯನ್ನು ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕೆ.ರವಿಂದ್ರ ಶೆಟ್ಟಿ ಉಳಿದೊಟ್ಟು ಮಾಡಲಿದ್ದರೆ. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಂದಾಳು ವಿಜಯ ಪಂಡಿತ್ ಭಗವತೀ ಉಪ್ಪಳ, ಉದ್ಯಮಿ ಶ್ರೀಮತಿ ಆಶಾ ಶೆಟ್ಟಿ ಅತ್ತವಾರ, ಕರ್ನಾಟಕ ಜಾನಪದ ಪರಿಷತ್ ದಕ್ಷಿಣ ಕನ್ನಡದ ಅಧ್ಯಕ್ಷರಾದ ಪಮ್ಮಿ ಕೋಡಿಯಾಲ್ ಬೈಲ್, ಶ್ರೀಮತಿ ಕಮಲಾಕ್ಷಿ ಪಾವೂರು (ಸದಸ್ಯರು ಜಿಲ್ಲಾ ಪಂ.ಕಾಸರಗೋಡು), ಶ್ರೀಮತಿ ಅಶ್ವಿನಿ ಎಂ ಎಲ್ ಪಜ್ವ( ಅಧ್ಯಕ್ಷೆ ಮಂಜೇಶ್ವರ ಬ್ಲೋಕ್ ಪಂ.), ಶ್ರೀಮತಿ ಜೀನ್ ಲವೀನಾ ಮೊಂತೆರೋ (ಅಧ್ಯಕ್ಷೆ ಮಂಜೇಶ್ವರ ಗ್ರಾಮ ಪಂ.), ಶ್ರೀಮತಿ ಸುಂದರಿ ಆರ್ ಶೆಟ್ಟಿ (ಅಧ್ಯಕ್ಷೆ ಮೀಂಜ ಗ್ರಾಮ ಪಂ.), ಶ್ರೀಮತಿ ಭಾರತಿ ಸುಳ್ಯಮೆ (ಅಧ್ಯಕ್ಷೆ ವರ್ಕಾಡಿ ಗ್ರಾಮ ಪಂ.), ಕಾಸರಗೋಡು ಜಿಲ್ಲಾ ಪ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಹರ್ಷಾದ್ ವರ್ಕಾಡಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಂಜೇಶ್ವರದ ಅಧ್ಯಕ್ಷರಾದ ಪದ್ಮನಾಭ ಕಡಪ್ಪರ, ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ (ಧಾರ್ಮಿಕ ಮುಂದಾಳು), ನ್ಯಾ.ನವೀನ್ ರಾಜ್ ಕೆ.ಜೆ (ಧಾರ್ಮಿಕ ಮುಂದಾಳು), ಸುರೇಶ್ ಶೆಟ್ಟಿ ಪರಂಕಿಲ (ಧಾರ್ಮಿಕ ಮುಂದಾಳು), ಉದಯ ಕುಮಾರ್ ಶೆಟ್ಟಿ ಕರಿಬೈಲು (ಸಾಂಸ್ಕೃತಿಕ ಸಂಘಟಕರು), ಕಾರ್ತಿಕ್ ಶೆಟ್ಟಿ ಮಜಿಬೈಲು (ಧಾರ್ಮಿಕ, ಸಾಂಸ್ಕೃತಿಕ ಸಂಘಟಕರು), ಅಶ್ವಥ್ ಪೂಜಾರಿ ಲಾಲ್ ಬಾಗ್ (ಅಣ್ಣ ತಮ್ಮ ಕಂಬಳ ಸಮಿತಿ ಪೈವಳಿಕೆಯ ಅಧ್ಯಕ್ಷರು), ಸಂಕಬೈಲ್ ಸತೀಶ್ ಅಡಪ (ಯಕ್ಷ ಬಳಗ ಹೊಸಂಗಡಿ), ಕೆ. ಸುರೇಂದ್ರನ್ (ಕಾರವಲ್ ಕನ್ನಡ ಪತ್ರಿಕೆ ಕಾಸರಗೋಡು), ಎ.ಆರ್ ಸುಬ್ಬಯ್ಯ ಕಟ್ಟೆ (ಕರ್ನಾಟಕ ರಾಜ್ಯ ಕನ್ನಡ ಪತ್ರಕರ್ತರ ಸಂಘದ ಕಾಸರಗೋಡು ಜಿಲ್ಲಾ ಅಧ್ಯಕ್ಷರು), ಶಶಿಧರ ಪೊಯ್ಯತ್ತಬೈಲ್(ಅಬ್ಬಕ್ಕ ಟಿವಿ ದೇರಳಕಟ್ಟೆ ಮಂಗಳೂರು), ಮನೋಜ್ ಕುಲಾಲ್ ಕೊಡಕ್ಕಲ್(ಸಂಸ್ಥಾಪಕ, ರಾಜ್ಯಧ್ಯಕ್ಷರು ಟೀಮ್ ಮಂಜುಶ್ರೀ ತುಳುನಾಡ್(ರಿ.), ಮ.ರಫೀಕ್ (ಫ್ಲೆಕ್ಸ್ ಪಾಯಿಂಟ್ ಹೊಸಂಗಡಿ), ಯಾದವ ಶರ್ಮ ನೀರ್ಚಾಲ್(ಜೈ ಗ್ರೂಪ್ಸ್ ಮಂಗಳೂರು) ಕೇಶವ ಕನಿಲ,ಜಗದೀಶ್ ಮಡಿವಾಳ, ನಿತ್ಯಾನಂದ ಕುಲಾಲ್ ಬೇಕೂರು, ಸಾಹಿತಿ ಸಂಜೀವ ಶೆಟ್ಟಿ ಮಾಡ, ಬಾಬು ಮಾಸ್ಟರ್, ಜೆ.ಪಿ ಕೋಟೆಕ್ಕಾರ್,ಪ್ರಜ್ವಲ್ ಚಂದ್ರಹಾಸ ಆಚಾರ್ಯ ಕೋಟೆಕ್ಕಾರ್, ಸಂತೋಷ್ ತಲಪಾಡಿಯವರು ಉಪಸ್ಥಿತರಿರುವರು. ಕಾರ್ಯಕ್ರಮದ ನಿರೂಪಣೆಯನ್ನು ಪತ್ರಕರ್ತರಾದ ಜಯ ಮಣಿಯಂಪಾರೆ, ಸ್ವಾಗತ ಭಾಷಣವನ್ನು ರತನ್ ಕುಮಾರ್ ಹೊಸಂಗಡಿ ಹಾಗೂ ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ) ಧನ್ಯವಾದ ಸಮರ್ಪಿಸಲಿದ್ದಾರೆ.
