ವಿರಾಟ್ ಕೊಹ್ಲಿ ನಾಯಕತ್ವ ತ್ಯಜಿಸಿ ಬಳಿಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಡೆದ ಮೊದಲ ಟಿ20 ಸರಣಿ ಇದಾಗಿದೆ. ಮೊದಲ ಸರಣಿಯಲ್ಲಿ ರೋಹಿತ್ ಶರ್ಮಾ ಸರಣಿ ಕ್ವೀನ್ ಸ್ವೀಪ್ ಗೆಲುವು ದಾಖಲಿಸಿದ್ದಾರೆ. ನೂತನ ಕೋಚ್ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಈ ಸಾಧನೆ ಮಾಡಿದೆ. ಈ ಮೂಲಕ ಕೋಚ್ ಆದ ಮೊದಲ ಸವಾಲಿನಲ್ಲೇ ದ್ರಾವಿಡ್ ಫುಲ್ ಮಾರ್ಕ್ಸ್ ಪಡೆದಿದ್ದಾರೆ. ರೋಹಿತ್ ಶರ್ಮಾ ಅರ್ದ ಶತಕ, ಶ್ರೇಯಸ್ ಅಯ್ಯರ್ 25, ವೆಂಕಟೇಶ್ ಅಯ್ಯರ್ 20 ಹಾಗೂ ದೀಪಕ್ ಚಹಾರ್ ಸ್ಫೋಟಕ 21 ರನ್ ನೆರವಿನಿಂದ ಟೀಂ ಇಂಡಿಯಾ ಕೋಲ್ಕತಾ ಟಿ20 ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 184 ರನ್ ಸಿಡಿಸಿತು. 185 ರನ್ ಟಾರ್ಗೆಟ್ ಪಡೆದ ನ್ಯೂಜಿಲೆಂಡ್ ತಂಡ ಆರಂಭದಲ್ಲೇ ಅಕ್ಸರ್ ಪಟೇಲ್(Axar patel) ಸ್ಪಿನ್ ದಾಳಿಗೆ ತತ್ತರಿಸಿತು. 21 ರನ್ಗಳಿಸುವಷ್ಟರಲ್ಲೇ ನ್ಯೂಜಿಲೆಂಡ್ ಮೊದಲ ವಿಕೆಟ್ ಪತನಗೊಂಡಿತು.
ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಕ್ವೀನ್ ಸ್ವೀಪ್| 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 73 ರನ್ ಭರ್ಜರಿ ಗೆಲುವು
November 21, 2021
0
ಕೋಲ್ಕತಾ : ಟಿ20 ವಿಶ್ವಕಪ್ ಟೂರ್ನಿಯಲ್ಲಿ ಲೀಗ್ ಹಂತದಿಂದ ಹೊರಬಿದ್ದ ನಿರಾಸೆ ಅನುಭವಿಸಿದ್ದ ಭಾರತ ತಂಡ ಭರ್ಜರಿಯಾಗಿ ನ್ಯೂಜಿಲೆಂಡ್ ಸರಣಿ ಕೈವಶ ಮಾಡಿದೆ. ನ್ಯೂಜಿಲೆಂಡ್ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಕ್ವೀನ್ ಸ್ವೀಪ್ ಗೆಲುವು ಕಂಡಿದೆ. 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 73 ರನ್ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 3-0 ಅಂತರದಲ್ಲಿ ಟಿ20 ಸರಣಿ ಗೆದ್ದುಕೊಂಡಿತು.
Tags
